ಮಡಿಕೇರಿ, ಮೇ 4: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಪೈಕೇರ ಕ್ರಿಕೆಟ್ ಕಪ್ ಪಂದ್ಯಾವಳಿ ಮಹತ್ವದ ಘಟ್ಟಕ್ಕೆ ತಲಪಿದ್ದು, ತಾ. 5 ರಿಂದ (ಇಂದಿನಿಂದ) ಪ್ರಿಕ್ವಾರ್ಟರ್, ಕ್ವಾರ್ಟರ್ ಫೈನಲ್ ಪಂದ್ಯಾವಳಿಗಳು ನಡೆಯಲಿವೆ. ಇಂದು ಬಡುವಂಡ್ರ, ಉಳುವಾರನ ಹಾಗೂ ಚೆರಿಯಮನೆ ತಂಡಗಳು ಪ್ರಿಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆದುಕೊಂಡವು.
ಇಂದು ನಡೆದ ಪಂದ್ಯಾವಳಿಯಲ್ಲಿ ಪಡ್ಡಂಬೈಲು ತಂಡ 3 ವಿಕೆಟ್‍ಗೆ 61 ರನ್ ಗಳಿಸಿದರೆ, ಪಳಂಗೋಟು ತಂಡ 6 ವಿಕೆಟ್‍ಗೆ 37 ರನ್ ಗಳಿಸಿ ಸೋಲನುಭವಿಸಿತು. ಪೊನ್ನಚನ ತಂಡ 4 ವಿಕೆಟ್‍ಗೆ 42 ರನ್ ಗಳಿಸಿದರೆ, ಮೇಲ್ಚೆಂಬು ತಂಡ 6 ವಿಕೆಟ್‍ಗೆ 33 ರನ್‍ಗಳಿಸಿ 10 ರನ್‍ಗಳ ಅಂತರದಲ್ಲಿ ಸೋಲನುಭವಿಸಿತು. ಚೆರಿಯಮನೆ ತಂಡ 3 ವಿಕೆಟ್‍ಗೆ 55 ರನ್ ಗಳಿಸಿದರೆ ಕಳೆದ ಬಾರಿಯ ಚಾಂಪಿಯನ್ ಕೊಂಬಾರನ ತಂಡ 4 ವಿಕೆಟ್‍ಗೆ 34 ರನ್ ಗಳಿಸಿ ಸೋಲನುಭವಿಸಿತು. ಚೆರಿಯಮನೆ ಜೀವನ್ 26 ರನ್ ಗಳಿಸಿ ಗಮನ ಸಳೆದರು. ಹುದೇರಿ ತಂಡ 1 ವಿಕೆಟ್‍ಗೆ 66 ರನ್ ಗಳಿಸಿದರೆ, ಮಂದ್ರಿರ ತಂಡ 3 ವಿಕೆಟ್‍ಗೆ 44 ರನ್ ಗಳಿಸಿ ಸೋಲನುಭವಿಸಿತು.
ಮತ್ತೊಂದು ಪಂದ್ಯದಲ್ಲಿ ಪಡ್ಡಂಬೈಲು ತಂಡ 5 ವಿಕೆಟ್‍ಗೆ 55 ರನ್ ಗಳಿಸಿದರೆ, ಪೋರೆಕುಂಜಿಲನ ತಂಡ 4 ವಿಕೆಟ್‍ಗೆ 48 ರನ್ ಗಳಿಸಿ ಸೋಲನುಭವಿಸಿತು. ಪಡ್ಡಂಬೈಲು ಅವಿನಾಶ್ 25 ರನ್ ಗಳಿಸಿ ಗಮನ ಸೆಳೆದರು. ಪಾಕಮುಕ್ಕಾಟಿ ತಂಡ 2 ವಿಕೆಟ್‍ಗೆ 50 ರನ್ ಗಳಿಸಿದರೆ, ಅಂಚೆಕಾಳೇರಮ್ಮನ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಗುರಿ ತಲಪಿತು. ತಂಡದ ಪರ ಅರುಣ ಯಾವದೇ ರನ್‍ಗಳನ್ನು ನೀಡದೆ ಮೇಡಿನ್ ಓವರ್ ಮಾಡಿ ಗಮನ ಸೆಳೆದರು.
ಬಡುವಂಡ್ರ ತಂಡ 4 ವಿಕೆಟ್‍ಗೆ 60 ರನ್ ಗಳಿಸಿದರೆ, ದಂಡಿನ ತಂಡ 8 ವಿಕೆಟ್‍ಗೆ 26 ರನ್ ಗಳಿಸಿ ಸೋಲನುಭವಿಸಿತು. ಬಡುವಂಡ್ರ ಧನ್ಯ 25 ರನ್ ಗಳಿಸಿ ಗಮನ ಸೆಳೆದರು. ತೇನನ ತಂಡ 3 ವಿಕೆಟ್‍ಗೆ 45 ರನ್ ಗಳಿಸಿದರೆ, ಪಾರೆಮಜಲು ತಂಡ 7 ವಿಕೆಟ್‍ಗೆ 34 ರನ್ ಗಳಿಸಿ ಸೋಲನುಭವಿಸಿತು. ಪೊನ್ನಚನ ಹಾಗೂ ಹುದೇರಿ ತಂಡಗಳ ನಡುವಿನ ಮತ್ತೊಂದು ಪಂದ್ಯದಲ್ಲಿ ಪೊನ್ನಚನ ತಂಡ 5 ವಿಕೆಟ್‍ಗೆ 55 ರನ್ ಗಳಸಿದರೆ, ಹುದೇರಿ ತಂಡ 3 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಪೇರಿಯನ ತಂಡ 6 ವಿಕೆಟ್‍ಗೆ 40 ರನ್ ಗಳಿಸಿದರೆ, ಅಯ್ಯಂಡ್ರ ತಂಡ 2 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು.
ಉಳುವಾರನ ಹಾಗೂ ಬಾರಿಕೆ ತಂಡಗಳ ಇನ್ನೊಂದು ಪಂದ್ಯದಲ್ಲಿ ಬಾರಿಕೆ ತಂಡ 24 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್‍ಗಳನ್ನು ಕಳೆದುಕೊಂಡಿತು. ಉಳುವಾರನ ತಂಡ 1 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ತಂಡದ ಪರ ಕಿರಣ್ 4 ವಿಕೆಟ್ ಕಬಳಿಸಿ ಗಮನ ಸೆಳೆದರು.
ಚೆರಿಯಮನೆ ಹಾಗೂ ಪಡ್ಡಂಬೈಲು ತಂಡಗಳ ನಡುವಿನ ಇನ್ನೊಂದು ಪಂದ್ಯದಲ್ಲಿ ಚೆರಿಯಮನೆ ತಂಡ 6 ವಿಕೆಟ್‍ಗೆ 68 ರನ್ ಗಳಿಸಿದರೆ, ಪಡ್ಡಂಬೈಲು ತಂಡ 8 ವಿಕೆಟ್‍ಗೆ 46 ರನ್ ಗಳಿಸಿ ಸೋಲನುಭವಿಸಿತು. ಚೆರಿಯಮನೆ ಕಿರಣ್ 24 ರನ್ ಗಳಿಸಿ ಗಮನ ಸೆಳೆದರು.
ಬಡುವಂಡ್ರ ಹಾಗೂ ತೇನನ ತಂಡಗಳ ನಡುವಿನ ಪಂದ್ಯದಲ್ಲಿ ಬಡುವಂಡ್ರ ತಂಡ 8 ವಿಕೆಟ್‍ಗೆ 47 ರನ್ ಗಳಿಸಿದರೆ, ತೇನನ ತಂಡ 6 ವಿಕೆಟ್‍ಗೆ 46 ರನ್ ಗಳಿಸಿ ಕೇವಲ 1 ರನ್‍ಗಳ ಅಂತರದಿಂದ ಸೋಲನುಭವಿಸಿತು. ಅಯ್ಯಂಡ್ರ ಹಾಗೂ ಕಾಳೇರಮ್ಮನ ತಂಡಗಳ ನಡುವಿನ ಪಂದ್ಯದಲ್ಲಿ ಅಯ್ಯಂಡ್ರ ತಂಡ 4 ವಿಕೆಟ್‍ಗೆ 83 ರನ್ ಗಳಿಸಿದರೆ, ಕಾಳೇರಮ್ಮನ ತಂಡ 30 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು.