ಸೋಮವಾರಪೇಟೆ, ಏ. 19: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಜೀವ ಭದ್ರತಾ ವಿಮಾ ಮೊತ್ತದ ಚೆಕ್ಕನ್ನು ವಿತರಿಸಲಾಯಿತು.

ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪ್ರಕಾಶ್ ಫಲಾನುಭವಿಗಳಿಗೆ ಡಿ.ಡಿ. ವಿತರಿಸಿದರು. ನಂತರ ಮಾತನಾಡಿ, ಯೋಜನೆಯ ಸದಸ್ಯರು ವಿಮಾ ಯೋಜನೆಯಲ್ಲಿ ಪಾಲ್ಗೊಂಡು ಯೋಜನೆಯ ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದರು. ಯೋಜನೆಯಿಂದ ಪಡೆದ ಪ್ರಗತಿನಿಧಿ ಸಾಲಕ್ಕೆ ಸದಸ್ಯರು ಹಾಗೂ ವಿನಿಯೋಗದಾರರಿಗೆ ಜೀವ ಭದ್ರತಾ ವಿಮೆ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಸ್ತುತ ಸೋಮವಾರಪೇಟೆ ತಾಲೂಕಿನಲ್ಲಿ ಈವರೆಗೆ 9 ಕುಟುಂಬಗಳು ವಿಮಾ ಯೋಜನೆಯ ಲಾಭವನ್ನು ಪಡೆದಿವೆ. ಇವರು ಪಡೆದ ಸಾಲ

ರೂ. 7,43,000ಕ್ಕೆ ವಿಮಾ ಮೊತ್ತ ರೂ. 5,25,500 ಹಣ ವಿಮಾ ಮೂಲಕ ಸಾಲಕ್ಕೆ ಭರ್ತಿಯಾಗಿದೆ ಎಂದರು.

ಸೋಮವಾರಪೇಟೆ ಕಾರ್ಯಕ್ಷೇತ್ರದ ರಾಜೇಶ್ವರಿ ಸ್ವಸಹಾಯ ಸಂಘದ ಸದಸ್ಯೆ ಜೂರಾಭಿ, ನಯನ ಸ್ವಸಹಾಯ ಸಂಘದ ಜಯಮ್ಮ ಅವರ ಪತಿ ಕೃಷ್ಣಶೆಟ್ಟಿ ಮರಣ ಹೊಂದಿದ ಹಿನ್ನೆಲೆಯಲ್ಲಿ ಡಿ.ಡಿ.ಯನ್ನು ಕರ್ಕಳ್ಳಿಯ ಯೋಜನಾ ಕಚೇರಿಯಲ್ಲಿ ಕುಟುಂಬಸ್ಥರಿಗೆ ವಿತರಿಸಲಾಯಿತು. ಈ ಸಂದರ್ಭ ಯೋಜನೆಯ ಮೇಲ್ವಿಚಾರಕ ರಮೇಶ್, ಸೇವಾ ಪ್ರತಿನಿಧಿ ಎಂ.ಎ. ರುಬೀನಾ ಉಪಸ್ಥಿತರಿದ್ದರು.