ಗೋಣಿಕೊಪ್ಪಲು, ಏ. 17: ಗೋಣಿಕೊಪ್ಪಲು ಮರಿಯಾ ಮಾಂಟೆಸ್ಸರಿ ಟೀಚರ್ಸ್ ಟ್ರೈನಿಂಗ್ ಶಾಲೆಯ 11 ನೇ ವರ್ಷದ ಪದವಿ ಪ್ರದಾನ ಕಾರ್ಯಕ್ರಮ ಇತ್ತೀಚೆಗೆ ಮೈಸೂರಿನ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ ನೆರವೇರಿತು. ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವ ಫೆÇ್ರ. ಆರ್. ರಾಜಣ್ಣ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪೆÇ್ರ. ಕೆ. ಎ. ಸುರೇಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಶಾಲೆಯ ನಿರ್ದೇಶಕಿ ರೂಪ ಚಂಗಪ್ಪ ಹಾಗೂ ಕೀರ್ತಿ ಪೂಣಚ್ಚ ಉಪಸ್ಥಿತರಿದ್ದರು. ಮೈಸೂರಿನ ಕನಕದಾಸ ನಗರದ ಸಂತ ಮರಿಯಾ ಮಾಂಟೆಸ್ಸರಿ ಮತ್ತು ನರ್ಸರಿ ಶಿಕ್ಷಕರ ತರಬೇತಿ ಸಂಸ್ಥೆಯು ಗೋಣಿಕೊಪ್ಪಲಿನ ಶಾಖೆಯನ್ನು ಹೊಂದಿದೆ.