ಸುಂಟಿಕೊಪ್ಪ, ಏ. 13: ಡಿ. ಪನ್ಯ ಫುಟ್ಬಾಲ್ ಕ್ಲಬ್ ಮತ್ತು ಸುವರ್ಣ ಸ್ವಹಾಯ ಸಂಘದ ಸಂಯುಕ್ತ ಆಶ್ರಯದಲ್ಲಿ 2ನೇ ವರ್ಷದ ಜಿಲ್ಲಾ ಮಟ್ಟದ ಸೂಪರ್ ಸವೆನ್ಸ್ (7+2) ಫುಟ್ಬಾಲ್ ಪಂದ್ಯಾವಳಿಯನ್ನು ಇಲ್ಲಿನ ಜಿಯಂಪಿ ಶಾಲಾ ಮೈದಾನದಲ್ಲಿ ಮೇ 12 ರಿಂದ 14 ರವರೆಗೆ ನಡೆಸಲಾಗು ವದು ಎಂದು ಫುಟ್ಬಾಲ್ ಕ್ಲಬ್ ಅಧ್ಯಕ್ಷರು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಫುಟ್ಬಾಲ್ ಆಟಗಾರರಿಗೆ ಕೊಲ್ಕತ್ತಾ ಎಂಬ ಬಿರುದಾಂಕಿತ ಸುಂಟಿಕೊಪ್ಪ ಜಿಯಂಪಿ ಶಾಲಾ ಮೈದಾನದಲ್ಲಿ ನಡೆಯಲಿರುವ ಸೂಪರ್ ಸವೆನ್ಸ್ (7+2) ಫುಟ್ಬಾಲ್ ಪಂದ್ಯಾಟದಲ್ಲಿ; ವಿಜೇತ ತಂಡಕ್ಕೆ 30,000 ನಗದು ಮತ್ತು ಆಕರ್ಷಕ ಟ್ರೋಫಿ ದ್ವಿತೀಯ ಬಹುಮಾನ 15,000 ನಗದು ಟ್ರೋಫಿ ನೀಡಲಿದ್ದು ಕ್ರೀಡಾ ಪ್ರೇಮಿಗಳಿಗಳಿಗೆ ಫುಟ್ಬಾಲ್ ಆಟವನ್ನು ಪ್ರೋತ್ಸಾಹಿಸುವ; ದಿಸೆಯಲ್ಲಿ ಪ್ರತಿಭೆಗಳನ್ನು ಗುರುತಿಸಲು ಇದೊಂದು ಸುವರ್ಣಾವಕಾಶ ವಾಗಿದೆ ಎಂದು ಅವರು ತಿಳಿಸಿದ್ದಾರೆ.

ತಂಡಗಳ ನೋಂದಾವಣೆಗೆ 5.5.2017 ಕೊನೆಯ ದಿನವಾಗಿದ್ದು ಪ್ರವೇಶ ಶುಲ್ಕ 2,000 ರೂ ಪಾವತಿಸಬೇಕಾಗಿದೆ. ಅತ್ಯುತ್ತಮ ತಂಡ, ಅತ್ಯುತ್ತಮ ಆಟಗಾರ, ಅತ್ಯುತ್ತಮ ಕ್ಷೇತ್ರ ರಕ್ಷಕ ಅತ್ಯುತ್ತಮ ಗೋಲ್ ಕೀಪರ್‍ಗೆ ಟ್ರೋಫಿಯನ್ನು ನೀಡಲಾಗುವದೆಂದು ತಿಳಿಸಿದ್ದಾರೆ.

ತಂಡದ ನೋಂದಾವಣೆಗೆ ಹೆಚ್ಚಿನ ಮಾಹಿತಿಗಾಗಿ ಕಾರ್ತಿಕ್ 8105951716, ಚಿದಾ 9164066545, ಜಗ್ಗ 99000971288, ಶ್ರೀನಿವಾಸ್ 8762280883 ಸಂರ್ಕಿಸುವಂತೆ ಕೋರಿಕೊಂಡಿದ್ದಾರೆ.