ಗೋಣಿಕೊಪ್ಪಲು, ಏ. 16: ಜಿಲ್ಲಾ ದಲಿತ ಸಂಘರ್ಷ ಸಮಿತಿ ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಡಾ. ಅಂಬೇಡ್ಕರ್ ಅವರ 126ನೇ ಜಯಂತಿ ಕಾರ್ಯಕ್ರಮವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಸಮಾನತೆ ಲಭಿಸಿಲ್ಲ. ಇದರ ಬಗ್ಗೆ ಅಂಬೇಡ್ಕರ್ ಅವರಿಗೆ ತುಂಬಾ ನೋವಿತ್ತು. ಅವರೊಬ್ಬ ದಲಿತ ನಾಯಕ ಅಲ್ಲ. ದೇಶದ ನಾಯಕ ಎಂದು ಬಣ್ಣಿಸಿದರು.

ಕಾವೇರಿ ಕಾಲೇಜಿನ ಉಪನ್ಯಾಸಕ ವನಿತ್ ಕುಮಾರ್ ಮಾತನಾಡಿ, ದಲಿತರ ಮಕ್ಕಳು ಅಧಿಕಾರಿಗಳಾ ದಾಗ ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳಬಹುದು ಎಂದರು.

ವಕೀಲರಾದ ಜ್ಯೋತಿ ಪ್ರಮೋದ್ ಮಾತನಾಡಿ ಮಹಿಳೆಯರಿಗೆ ಮೊದಲು ಮತದಾನದ ಹಕ್ಕು ನೀಡಿದ ರಾಷ್ಟ್ರ ಭಾರತದ ಇದಕ್ಕೆ ಕಾರಣ ಅಂಬೇಡ್ಕರ್ ಎಂದರು. ದಸಂಸ ಜಿಲ್ಲಾ ಸಂಚಾಲಕ ಎಚ್.ಆರ್. ಪರುಶುರಾಮ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ, ಮಾಜಿ ಸದಸ್ಯ ಎಚ್.ಬಿ. ಗಣೆಶ್, ಪೊನ್ನಂಪೇಟೆ ಕಾಂಗ್ರೆಸ್ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ, ಬಿಬಿಎಂಪಿ ಮಾಜಿ ಸದಸ್ಯ ಹರೀಶ್ ಬೋಪಣ್ಣ, ದಸಂಸ ಪದಾಧಿಕಾರಿಗಳಾದ ಕುಮಾರ್ ಮಹದೇವ್, ಎಚ್.ಎನ್. ಕುಮಾರ್, ಎಚ್.ಆರ್. ಸಿಂಗಿ, ಎಚ್.ಕೆ. ಚೆಲುವ, ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷ ಸುರೇಂದ್ರ, ಎಸ್.ಟಿ. ಗಿರೀಶ್, ದೇವಮ್ಮ ಹಾಜರಿದ್ದರು.

ಆರಂಭದಲ್ಲಿ ಆರ್‍ಎಂಸಿ ಆವರಣದಿಂದ ಪ್ರಾಥಮಿಕ ಶಾಲಾ ಆವರಣದ ವರೆಗೆ ಅಬೇಂಡ್ಕರ್ ಭಾವ ಚಿತ್ರವನ್ನು ವಾದ್ಯ ಸಮೇತ ಮೆರವಣಿಗೆ ಮಾಡಲಾಯಿತು. ಬಳಿಕ ಸಾಧಕರಿಗೆ ಸನ್ಮಾನ, ಕ್ರೀಡಾಕೂಟ, ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.