ನಾಪೆÇೀಕ್ಲು: ಸಮೀಪದ ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದ ಬಳಿ ಪುದಿಯೋದಿ ದೇವರ ಕೋಲ ವಿಜೃಂಭಣೆಯಿಂದ ನಡೆಯಿತು. ತನ್ನ ನಾಲ್ಕು ಕಡೆಗಳಲ್ಲಿ ಉರಿಯುತ್ತಿರುವ ಪಂಜು, ಅದಕ್ಕೆ ಭಕ್ತರ ಹರಕೆಯ ತುಪ್ಪ ಮತ್ತು ಎಣ್ಣೆ ಸುರಿಯುವಿಕೆಯಿಂದ ಮೇಲೇಳುವ ಅಗ್ನಿ ಜ್ವಾಲೆ, ಕೋಲದ ಎರಡು ಕೈಯಲ್ಲಿರುವ ಕಾದ ಬಳೆಗಳಿಗೆ ನೀರು ತಾಗಿಸುವಾಗಿನ ಝೈಂ ಶಬ್ಧ ನೋಡುಗರನ್ನು ಭಯಭೀತರನ್ನಾಗಿಸುತ್ತದೆ.
ಈ ದೈವವು ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ಕಾವಲುಗಾರ ಆಗಿ ನೆಲೆ ನಿಂತು ನಂಬಿದವರಿಗೆ ಒಳಿತು ಮಾಡುವ ದೇವರೆಂದು ಪ್ರಸಿದ್ಧಿ ಪಡೆದಿದೆ. ಊರಿಗೆ ಬರುವ ಮಹಾಮಾರಿ ರೋಗಗಳನ್ನು ತಡೆದು ಊರನ್ನು ಕಾಪಾಡುವ ದೇವರೆಂದು ಹಿಂದಿನಿಂದಲೂ ನಂಬಿಕೆ ಇದೆ.