ರಷ್ಯಾ ಪೂರ್ವ ಕರಾವಳಿಯಲ್ಲಿ ಪ್ರಬಲ ಭೂಕಂಪನ

ಮಾಸ್ಕೋ, ಮಾ. 29: ರಷ್ಯಾದ ಪೂರ್ವ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.6 ರಷ್ಟು ತೀವ್ರತೆ ದಾಖಲಾಗಿದೆ. ಬೇರಿಂಗ್ ಸಮುದ್ರದಿಂದ ಸುನಾಮಿ ವಲಯ ಎನ್ನಲಾಗುವ ರಿಂಗ್ ಆಫ್ ಫೈರ್ ವಲಯದ ಸುಮಾರು 22.8 ಕಿ.ಮೀ. ಆಳದಲ್ಲಿ ಭೂಕಂಪನ ಸಂಭವಿಸಿದ್ದು, ಸುನಾಮಿ ಮುನ್ಸೂಚನೆ ನೀಡಲಾಗಿತ್ತಾದರೂ, ಬಳಿಕ ಮುನ್ಸೂಚನೆಯನ್ನು ವಾಪಸ್ ಪಡೆಯಲಾಗಿದೆ. ಆದರೂ ಬೃಹತ್ ಅಲೆಗಳು ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಆ ಮೂಲಕ ಕರಾವಳಿ ತೀರದಲ್ಲಿರುವ ಲಕ್ಷಾಂತರ ಮಂದಿ ಪ್ರಾಣ ಭೀತಿಯಲ್ಲಿದ್ದು, ಮುಂಜಾಗ್ರತಾ ಕ್ರಮವಾಗಿ ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ರಷ್ಯಾದ ಪೂರ್ವ ಕರಾವಳಿಯ ಪೆಟ್ರೊಪಾವ್ಲೊವ್ಸ್ಕ್ ಕಾಮ್ಚಾಟ್ ಸ್ಕಿ ಪ್ರದೇಶದಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ನೆಲೆಸಿದ್ದು, ಇದೀಗ ಇವರನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರ ಮಾಡಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಹವಾಯಿ ಮೂಲದ ಸುನಾಮಿ ಮುನ್ಸೂಚನಾ ಕೇಂದ್ರದ ಪ್ರಕಾರ ಸದ್ಯಕ್ಕೆ ಸುನಾಮಿ ಭೀತಿಯಿಲ್ಲ. ಆದರೆ, 1.5 ಮೀಟರ್‍ಗೂ ಎತ್ತರದ ದೈತ್ಯ ಅಲೆಗಳು ಕರಾವಳಿಗೆ ಅಪ್ಪಳಿಸಬಹುದು ಎಂದು ಹೇಳಿದ್ದಾರೆ.

ರಕ್ತಚಂದನ ಕಳ್ಳಸಾಗಣೆ: ಡಾನ್ ಸಂಗೀತ ಬಂಧನ

ಚಿತ್ತೂರು, ಮಾ. 29: ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಪೆÇಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ರಕ್ತಚಂದನ ಕಳ್ಳಸಾಗಣೆ ದಂಧೆಯ “ಡಾನ್” ಎಂದೇ ಕುಖ್ಯಾತಿ ಪಡೆದಿರುವ ಮಾಜಿ ಗಗನ ಸಖಿ, ರೂಪದರ್ಶಿ ಸಂಗೀತಾ ಚಟರ್ಜಿಯನ್ನು ಬಂಧಿಸಲಾಗಿದೆ. ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದ ಶಾಪಿಂಗ್ ಮಾಲ್‍ವೊಂದರಲ್ಲಿ ಸಂಗೀತಾ ಚಟರ್ಜಿ ಇರುವಿಕೆಯನ್ನು ಪತ್ತೆ ಮಾಡಿದ ಪೆÇಲೀಸರು ಕೋಲ್ಕತಾ ಪೆÇಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ನಿನ್ನೆ ಆಕೆಯನ್ನು ಬಂಧಿಸಿದ್ದಾರೆ. ಪ್ರಸ್ತುತ ಸಂಗೀತಾ ಚಟರ್ಜಿಯನ್ನು ಪೆÇಲೀಸರು ಚಿತ್ತೂರಿಗೆ ಕರೆ ತಂದಿದ್ದು, ಆಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಚಿತ್ತೂರು ಜಿಲ್ಲೆಯ ಸಬ್ ಜೈಲಿನಲ್ಲಿ ಸಂಗೀತಾ ಚಟರ್ಜಿಯನ್ನು ಇಡಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. 2016ರಲ್ಲಿ ರಕ್ತ ಚಂದನ ಕಳ್ಳ ಸಾಗಣೆಯ ಡಾನ್ ಲಕ್ಷ್ಮಣ್ ಎಂಬಾತನನ್ನು ಪೆÇಲೀಸರು ಬಂಧಿಸಿದ್ದರು. ಲಕ್ಷಣ್ ರನ್ನು ಸಂಗೀತಾ ಚಟರ್ಜಿ ವಿವಾಹವಾಗಿದ್ದರು. ಲಕ್ಷ್ಮಣ್ ಬಂಧನದ ಬಳಿಕ ಇಡೀ ರಕ್ತ ಚಂದನ ಕಳ್ಳಸಾಗಣೆ ದಂಧೆಯ ಮೇಲುಸ್ತುವಾರಿಯನ್ನು ರೂಪದರ್ಶಿ ಸಂಗೀತಾ ಚಟರ್ಜಿ ನೋಡಿಕೊಳ್ಳುತ್ತಿದ್ದಳು ಎಂದು ತಿಳಿದು ಬಂದಿದೆ.

ಶೃಂಗೇರಿ ಶಾರಾದಾ ಪೀಠದಿಂದ ಯೋಧರಿಗೆ ನೆರವು

ಬೆಂಗಳೂರು, ಮಾ. 29: ಯೋಧರ ಜೀವ ಉಳಿಸುವ ಸಾಧನದ ಅಭಿವೃದ್ಧಿಗೆ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠ ನೆರವು ನೀಡಿದೆ. ಬೆಂಗಳೂರು ದಕ್ಷಿಣದಲ್ಲಿರುವ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯೋಧರ ಜೀವ ಉಳಿಸಲು ನೆರವಾಗಬಲ್ಲಂತಹ 90 ಸೆಕೆಂಡ್‍ಗಳಲ್ಲಿ ರಕ್ತ ಸ್ರಾವವನ್ನು ತಡೆಯುವ ಸಮಥ್ರ್ಯ ಹೊಂದಿರುವ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕಾಗಿ ಶೃಂಗೇರಿ ಮಠ 30 ಕೋಟಿ ರೂಪಾಯಿ ನೆರವು ನೀಡಿದೆ. ಯುದ್ಧ ಭೂಮಿಯಲ್ಲಿ, ಗಡಿಯಲ್ಲಿ ಯೋಧ ರಕ್ತ ಸ್ರಾವದಿಂದ ಬಳಲುತ್ತಿದ್ದರೆ, ಅದನ್ನು ತಕ್ಷಣವೇ ತಡೆಗಟ್ಟುವ ಉದ್ದೇಶದಿಂದ ಈ ಹೊಸ ಸಾಧನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಜಂಟಿಯಾಗಿ ಸಾಧನ ಅಭಿವೃದ್ಧಿಪಡಿಸಿರುವ ಎಂ.ಎಸ್. ಸಂತೋಷ್ ಹಾಗೂ ಎಂ.ಬಿ. ದಿವಾಕರ ಹೇಳಿದ್ದಾರೆ. ಕಾರ್ಬಾಕ್ಸಿಲ್ ಸಂಯೋಜಿತ ಗ್ರ್ಯಾಫೀನ್ ಸ್ಪಾಂಜ್‍ನ್ನು ಹೊಂದಿರುವ ಉತ್ಪನ್ನ ಆಕ್ಸಿಯೋಸ್ಟಾಟ್ ಬಳಕೆಯನ್ನು ಹೋಲುತ್ತದೆ. ಆದರೆ ಆಕ್ಸಿಯೋಸ್ಟಾಟ್ ಸಾಧನ 3-4 ನಿಮಿಷಗಳಲ್ಲಿ ರಕ್ತಸ್ರಾವವನ್ನು ತಡೆಗಟ್ಟಿದರೆ, ಹೊಸ ಸಾಧನ 90 ಸೆಕೆಂಡ್‍ಗಳಲ್ಲಿ ರಕ್ತ ಸ್ರಾವವನ್ನು ತಡೆಗಟ್ಟುವ ಸಾಮಥ್ರ್ಯ ಹೊಂದಿದ್ದು, ಈ ಸಾಧನದ ಅಭಿವೃದ್ಧಿಗೆ ಶೃಂಗೇರಿ ಮಠ ನೆರವು ನೀಡಿದೆ.

ಇಬ್ಬರು ಮಾಜಿ ಸಿ.ಎಂ.ಗಳ ವಿರುದ್ಧ ತನಿಖೆಗೆ ಆದೇಶ

ನವದೆಹಲಿ, ಮಾ. 29: ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಧರಂಸಿಂಗ್ ಸೇರಿ 11 ಜನರ ವಿರುದ್ಧ ಸುಪ್ರೀಂ ಕೋರ್ಟ್ ತನಿಖೆಗೆ ಆದೇಶ ನೀಡಿದೆ. ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿಗಳಾದ ಧರಂಸಿಂಗ್ ಹಾಗೂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ತನಿಖೆಗೆ ಸುಪ್ರೀಂಕೋರ್ಟ್‍ನ ದ್ವಿಸದಸ್ಯ ಪೀಠದಿಂದ ಆದೇಶ ನೀಡಿದ್ದು, ಎಸ್‍ಐಟಿ ಇದರ ತನಿಖೆ ನಡೆಸಲಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದ್ದು, ಅವರ ವಿರುದ್ಧದ ತನಿಖೆಗೆ ಇದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಮುಂದುವರಿಸಿದೆ. ಹಿರಿಯ ಆಧಿಕಾರಿಗಳಾದ ವಿ. ಉಮೇಶ್ ಹಾಗೂ ಗಂಗಾರಾಮ್ ಬಡೇರಿಯಾ, ಎಂ. ರಾಮಪ್ಪ ಸೇರಿ 11 ಅಧಿಕಾರಿಗಳ ವಿರುದ್ಧ ತನಿಖೆ ಮುಂದುವರೆಯಲಿದೆ. ಮೂರು ತಿಂಗಳೊಳಗೆ ತನಿಖೆಯ ವರದಿಯನ್ನು ಸಲ್ಲಿಸಲು ಎಸ್‍ಐಟಿಗೆ ಸುಪ್ರೀಂ ಸೂಚಿಸಿದೆ ಎಂದು ತಿಳಿದು ಬಂದಿದೆ. ಅಕ್ರಮ ಗಣಿಗಾರಿಕೆ ಸಂಬಂಧ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಅವರು ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು.

ಕಾಂಗ್ರೆಸ್‍ನ ನಫೀಜ್ ಫಜಲ್ ಬಿಜೆಪಿಗೆ ಸೇರ್ಪಡೆ

ಬೆಂಗಳೂರು, ಮಾ. 29: ಕಾಂಗ್ರೆಸ್ ಪಕ್ಷದ ನಾಯಕಿ, ಮಾಜಿ ಸಚಿವೆ ನಫೀಜ್ ಫಜಲ್ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ. ಎಸ್.ಎಂ. ಕೃಷ್ಣ ಅವರ ಸಚಿವ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ ಕಾರ್ಯನಿರ್ವಹಿಸಿದ್ದ ನಫೀಜ್ ಫಜಲ್ ಕೃಷ್ಣ ಅವರ ಹಾದಿಯಲ್ಲೇ ನಡೆದಿದ್ದು, ಬಿಜೆಪಿ ಸೇರ್ಪಡೆಯಾಗಿದ್ದಾರೆ. ನಮ್ಮ ಪಕ್ಷಕ್ಕೆ ಹೊಸಬರಾಗಿರುವ ಮುಖ್ಯಮಂತ್ರಿಗಳು ಮುಸ್ಲಿಂ ನಾಯಕರಿಗೆ ಹೆಚ್ಚು ಸ್ವಾತಂತ್ರ್ಯ ನೀಡಿದ್ದರಿಂದ ನಾನು ಮುಸ್ಲಿಂ ನಾಯಕರಿಂದ ಅವಮಾನಕ್ಕೊಳಗಾದೆ. ರಾಜ್ಯದ ಕಾರ್ಯಕರ್ತರು ಹೇಳುವದನ್ನು ಕೇಳುವದಕ್ಕೆ ಕೇಂದ್ರ ನಾಯಕರಿಗೆ ಸಮಯವಿಲ್ಲ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನೀಡಿರುವ ರಾಜೀನಾಮೆ ಪತ್ರದಲ್ಲಿ ನಫೀಜ್ ಫಜಲ್ ಹೇಳಿದ್ದಾರೆ. ತಮ್ಮ ಸಾಮಾಜಿಕ ಸೇವೆಯನ್ನು ಗುರುತಿಸಿ ತಮ್ಮನ್ನು ವಿಧಾನ ಪರಿಷತ್‍ಗೆ ನಾಮನಿರ್ದೇಶನ ಮಾಡಬೇಕೆಂದು ರಾಹುಲ್ ಗಾಂಧಿ ಅವರಲ್ಲಿ ಮನವಿ ಮಾಡಿದಾಗ ಅವಮಾನ ಮಾಡಿದರು ಎಂದು ನಫೀಜ್ ಫಜಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಯ ಮನೆಗೆ ನುಗ್ಗಿದ ಉಗ್ರರಿಂದ ದರೋಡೆ

ಶ್ರೀನಗರ, ಮಾ. 29: ಕಾಶ್ಮೀರದಲ್ಲಿ ಮತ್ತೆ ಉಗ್ರರ ಧಾಳಿ ನಡೆದಿದ್ದು, ಉಗ್ರರು ಪೆÇಲೀಸ್ ಅಧಿಕಾರಿಯ ಮನೆಗೆ ನುಗ್ಗಿ ದರೋಡೆ ಮಾಡಿ ಬೆದರಿಕೆ ಹಾಕಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಒಂದು ವಾರದಲ್ಲಿ ನಡೆದಿರುವ ಎರಡನೆ ಘಟನೆ ಇದಾಗಿದ್ದು, ಪೆÇಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ ನಾಲ್ವರು ಉಗ್ರರು ತಾ. 28 ರಂದು ರಾತ್ರಿ ಪೆÇಲೀಸ್ ಅಧಿಕಾರಿಯ ಮನೆಗೆ ನುಗ್ಗಿ ಧಾಳಿ ನಡೆಸಿದ್ದು, ಬೆದರಿಕೆ ಹಾಕಿದ್ದಾರೆ. ಇದಕ್ಕೂ ಮುನ್ನ ಸಬ್-ಇನ್ಸ್ ಪೆಕ್ಟರ್ ಮನೆಗೆ ತೆರಳಿ ಧಾಳಿ ನಡೆಸಿದ್ದ ಉಗ್ರರು ದರೋಡೆ ಮಾಡಿ ಬೆದರಿಕೆ ಹಾಕಿದ್ದರು. ಜಮ್ಮು-ಕಾಶ್ಮೀರ ಬಂಧಿಖಾನೆ ವಿಭಾಗದ ಅಧಿಕಾರಿ ಮನೆಗೆ ನುಗ್ಗಿ ಧಾಳಿ ನಡೆಸಿ ಕಾರಿಗೆ ಬೆಂಕಿ ಹಚ್ಚಿದ್ದರು.