ಮಡಿಕೇರಿ, ಮಾ. 25: ರೈತರು ಮೊದಲೇ ಸಂಕಷ್ಟದಲ್ಲಿದ್ದಾರೆ. ಅಂತಹದ್ದರಲ್ಲಿ ಕಾಳುಮೆಣಸು ಇನ್ನಿತರ ವಾಣಿಜ್ಯ ಬೆಳೆಗಳಿಗೆ ಎಪಿಎಂಸಿ ವತಿಯಿಂದ ಸೆಸ್ ಸಂಗ್ರಹಿಸಲಾಗು ತ್ತಿದ್ದು, ಇದು ಹೊರೆಯಾಗಿ ಪರಿಣಮಿಸುತ್ತಿದೆ. ಸೆಸ್ ಹೊರೆ ಇಳಿಸಲು ಪ್ರಯತ್ನಿಸುತ್ತಿರುವದಾಗಿ ರಾಜ್ಯ ಸಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಶಿಕಲ ಕವಲ ಹೇಳಿದರು.ತೋಟಗಾರಿಕಾ ಇಲಾಖಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಸ್ ಇಳಿಸಬೇಕೆಂಬ ಪ್ರಸ್ತಾವನೆ ಬಹಳ ಹಿಂದಿನಿಂದಲೇ ಇದೆ. ಆದರೆ ಅದು ಕಾರ್ಯಗತಗೊಂಡಿಲ್ಲ. ಕಾರ್ಯಗತ ಗೊಳಿಸಲು ಪ್ರಯತ್ನಿಸಲಾಗುವದು. ಈ ಸಂಬಂಧ ಎಪಿಎಂಸಿ ನಿರ್ದೇಶಕರು ಆಯುಕ್ತರೊಂದಿಗೆ ಮಾತುಕತೆ ನಡೆಸುತ್ತಿರುವದಾಗಿ ಹೇಳಿದರು.

ಸಂಬಾರ ಪದಾರ್ಥ ಅಭಿವೃದ್ಧಿ ಮಂಡಳಿ ಇದೆ ಎಂಬದೇ ರೈತರಿಗೆ ಮಾಹಿತಿ ಇಲ್ಲ. ಅಧಿಕಾರಿಗಳು ಈ ಬಗ್ಗೆ ಪ್ರಚುರಪಡಿಸಿಲ್ಲ. ಈ ನಿಟ್ಟಿನಲ್ಲಿ ರೈತರಿಗೆ ಮಾಹಿತಿ ನೀಡುತ್ತಾ ಸೌಲಭ್ಯ ಒದಗಿಸಲು ಪ್ರಯತ್ನಿಸುವದಾಗಿ ಹೇಳಿದರು.

ಕಾಳುಮೆಣಸು ಘಟಕ

ಜಿಲ್ಲೆಯಲ್ಲಿ ಏಲಕ್ಕಿ ಮತ್ತು ಕಾಳು ಮೆಣಸು ಘಟಕ ಸ್ಥಾಪನೆಗೆ ಪ್ರಸ್ತಾವನೆ ಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳ ಲಾಗುವದು ಎಂದು ಅಧ್ಯಕ್ಷೆ ಹೇಳಿದರು.

ಈಗಾಗಲೇ ಶಿರಸಿಯಲ್ಲಿ ಕಾಳುಮೆಣಸು ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಹಾಗೆಯೇ ಚಾಮರಾಜನಗರದಲ್ಲಿ ಅರಿಶಿನ ಘಟಕ ಸ್ಥಾಪನೆಗೆ 25 ಲಕ್ಷ ರೂ.ವರೆಗೆ ಸಹಾಯಧನ ನೀಡಲು ಮುಂದಾಗ ಲಾಗಿದೆ. ಸಕಲೇಶಪುರದಲ್ಲಿ ಕಾಳು ಮೆಣಸು ಘಟಕ, ಕುಂದಗೋಳದಲ್ಲಿ ಮೆಣಸಿನಕಾಯಿ ಘಟಕ ಹಾಗೆಯೇ ಕೋಲಾರದಲ್ಲಿ ಹುಣಸೆಹಣ್ಣು ಘಟಕ ಸ್ಥಾಪಿಸಲು

(ಮೊದಲ ಪುಟದಿಂದ) ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ರಾಜ್ಯ ಸಂಬಾರ ಮಂಡಳಿ ವತಿಯಿಂದ ರೈತರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಾನಾ ಕಾರ್ಯಕ್ರಮಗಳನ್ನು ನಿಗಮದ ಮಂಡಳಿ ವತಿಯಿಂದ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಸಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿ ವತಿಯಿಂದ ದೊಡ್ಡ ಘಟಕಗಳನ್ನು ಸ್ಥಾಪಿಸಲು ಮುಂದಾಗಿದ್ದೇವೆ. ಮಂಡಳಿಯ ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸಂಬಾರ ಪದಾರ್ಥ ಬೆಳೆಯುವ ರೈತರಿಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯಕ್ರಮ ರೂಪಿಸಲಾಗುವದು. ರೈತರು ಆ ನಿಟ್ಟಿನಲ್ಲಿ ರಾಜ್ಯ ಸಂಬಾರ ಪದಾರ್ಥಗಳ ಮಂಡಳಿಗೆ ಅಗತ್ಯ ಸಲಹೆ ಮಾರ್ಗದರ್ಶನ ನೀಡ ಬಹುದಾಗಿದೆ ಎಂದು ಹೇಳಿದರು.

ಸಂಬಾರ ಪದಾರ್ಥಗಳ ರಾಜ್ಯ ಮಂಡಳಿಯ ಕಾರ್ಯ ಚಟುವಟಿಕೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವಂತಾಗಲು ರಾಜ್ಯಾದ್ಯಂತ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ಮಾಹಿತಿ ನೀಡಿದರು.

ಸಂಬಾರ ಪದಾರ್ಥಗಳ ರಾಜ್ಯ ಮಂಡಳಿಯ ನಿರ್ದೇಶಕ ಬಿ.ವೈ. ಪಾಟೀಲ ಮಾತನಾಡಿ ಸಂಬಾರ ಪದಾರ್ಥಗಳ ಮಂಡಳಿ ವತಿಯಿಂದ ಸಂಬಾರ ಪದಾರ್ಥ ಬೆಳೆಯುವ ರೈತರಿಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಂಬಾರ ಪದಾರ್ಥಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸುವದು, ಬೆಂಬಲ ಬೆಲೆ ನಿಗದಿಪಡಿಸುವದು ಮತ್ತಿತರ ಸಂಬಂಧ ಅಗತ್ಯ ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದರು.

ಸಂವಾದ: ಬಳಿಕ ರೈತರ ಸಂವಾದದಲ್ಲಿ ಜಿಲ್ಲೆಯಲ್ಲಿ ಸಣ್ಣ ಹಾಗೂ ಮಧ್ಯಮ ರೈತರು ಕಾಫಿ ನಂಬಿಕೊಂಡು ಜೀವನ ನಡೆಸುವದು ಕಷ್ಟಸಾಧ್ಯವಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ರೈತರಿಗೆ ಕಾಳುಮೆಣಸು ಉತ್ತೇಜನಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕಿದೆ ಎಂದು ಮಾದಾಪುರದ ರೈತ ರತೀಶ್ ಮನವಿ ಮಾಡಿದರು.

ಜಿಲ್ಲೆಯಲ್ಲಿ ಏಲಕ್ಕಿ ಬೆಳೆ ನಶಿಸಿ ಹೋಗುತ್ತಿದೆ. ಹಿಂದೆ ಕೊಡಗಿನ ಏಲಕ್ಕಿ ಮತ್ತು ಕಿತ್ತಳೆ ಪ್ರಸಿದ್ಧಿ ಪಡೆದಿದ್ದವು, ಆದರೆ ಇಂದಿನ ಪರಿಸ್ಥಿತಿ ಬದಲಾಗಿದೆ. ಸಂಬಾರ ಪದಾರ್ಥ ಬೆಳೆಯುವ ರೈತರ ಸಂಕಷ್ಟ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದರು.

ರೈತರಿಂದ ಮಾಹಿತಿ ಪಡೆದ ರಾಜ್ಯ ಸಂಬಾರ ಪದಾರ್ಥಗಳ ಮಂಡಳಿ ಅಧ್ಯಕ್ಷರು ತಮ್ಮ ಬೇಡಿಕೆ ಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು. ಈ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವದು ಎಂದು ತಿಳಿಸಿದರು.

ಮಂಡಳಿ ನಿರ್ದೇಶಕ ಪವನ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಆರ್. ಗಿರೀಶ್, ಸಹಾಯಕ ನಿರ್ದೇಶಕ ಪ್ರಮೋದ್, ಸಂಬಾರ ಪದಾರ್ಥ ಬೆಳೆಯುವ ರೈತರು ಇತರರು ಇದ್ದರು.