ನಾಪೆÇೀಕ್ಲು, ಮಾ. 25: ಕೇರಳ ರಾಜ್ಯದ ಕಾಸರಗೋಡು ಬಳಿಯ ಚೂರಿ ಗ್ರಾಮದ ಮಸೀದಿಯಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದ ಹೊದವಾಡ ಗ್ರಾಮದ ರಿಯಾಜ್ó ಮುಸ್ಲಿಯಾರ್ ಹತ್ಯೆಯನ್ನು ಖಂಡಿಸಿ ನಾಪೆÇೀಕ್ಲು ಪಟ್ಟಣದಲ್ಲಿ ಕೊಡಗು ಮುಸ್ಲಿಂ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೊಡಗು ಮುಸ್ಲಿಂ ಸಮಾಜದ ಅಧ್ಯಕ್ಷ ಪಿ.ಎಂ.ಖಾಸಿಂ ಭಾರತದಿಂದ ಇಸ್ಲಾಂ ಅನ್ನು ಓಡಿಸಲು ಸಾಧ್ಯವಿಲ್ಲ. ಈ ಬಗ್ಗೆ ಆರ್.ಎಸ್.ಎಸ್ ತಿರುಕನ ಕನಸು ಕಾಣುತ್ತಿದೆ. ಅದು ನನಸಾಗುವದಿಲ್ಲ ಎಂದರು. ಭಾರತದಲ್ಲಿ 20 ಕೋಟಿ ಮುಸ್ಲಿಮರಿದ್ದೇವೆ. ನಾವು ಜೇನುಗೂಡಿದ್ದಂತೆ ಜೇನು ಗೂಡನ್ನು ಕೆದಕುವ ಸಾಹಸವನ್ನು ಆರ್.ಎಸ್.ಎಸ್ ಮಾಡಿದರೆ ತಕ್ಕ ಉತ್ತರ ನೀಡಲು ನಾವು ಸಮರ್ಥರಿದ್ದೇವೆ ಎಂದು ಹೇಳಿದರು.

ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರೆಹಮಾನ್ ಮಾತನಾಡಿ ನಾವು ಭಾರತೀಯ ಮುಸಲ್ಮಾನರು. ದೇಶದಲ್ಲಿಯೇ ಹುಟ್ಟಿ ಬೆಳೆದಿದ್ದೇವೆ. ದೇಶದ ಮಣ್ಣಿನಲ್ಲೇ ಮಣ್ಣಾಗುತ್ತೇವೆ. ನಮ್ಮನ್ನು ಇಲ್ಲಿಂದ ತೊಲಗಿಸುವ ಬಗ್ಗೆ ಯಾರೂ ಕಲ್ಪಿಸಿಕೊಳ್ಳುವದು ಬೇಡ. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ ಎಂದು ಎಚ್ಚರಿಸಿದರು.

ಭಾರತವನ್ನು ಹಿಂದೂ ದೇಶವನ್ನಾಗಿಸಲು ಎಂದಿಗೂ ಸಾಧ್ಯವಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಮುಸಲ್ಮಾನರ ತ್ಯಾಗ, ಬಲಿದಾನ, ಹೋರಾಟವೂ ಇದೆ ಎಂಬದನ್ನು ತಿಳಿದುಕೊಳ್ಳಬೇಕು ಎಂದರು. ರಿಯಾಜ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವದು ಆರ್.ಎಸ್.ಎಸ್. ಎಂದು ಆರೋಪಿಸಿದ ಅವರು; ರಿಯಾಜ್ ಕುಟುಂಬಕ್ಕೆ ಕೂಡಲೇ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕೊಟ್ಟಮುಡಿ ಹಂಸ ಮಾತನಾಡಿ ದೇಶದಲ್ಲಿ ಆರ್.ಎಸ್.ಎಸ್ ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಮೃತ ರಿಯಾಜ್ ಮನೆಗೆ ಭೇಟಿ ನೀಡಿ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಉಸ್ಮಾನ್ ಹಾಜಿ, ಎಂ.ಎ. ಮನ್ಸೂರ್ ಅಲಿ, ಟಿ.ಎ. ಮಹಮ್ಮದ್ ಹನೀಫ್, ಅಬ್ದುಲ್ ಹಜೀಜ್, ಮಕ್ಕಿ ನಾಸಿರ್, ಸಲೀಂ ಹ್ಯಾರಿಸ್, ಬಶೀರ್, ಮತ್ತಿತರ ಮುಖಂಡರು ಇದ್ದರು.

ಪ್ರತಿಭಟನೆಯ ಅಂಗವಾಗಿ ಪಟ್ಟಣದಲ್ಲಿರುವ ಮುಸ್ಲಿಂ ಬಾಂಧವರು ಸ್ವ-ಇಚ್ಛೆಯಿಂದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ಸೂಚಿಸಿದರು.

ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಪ್ರದೀಪ್ ನೇತೃತ್ವದಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.