ಕುಶಾಲನಗರ, ಮಾ 25: ಬೈಲುಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಹೆದ್ದಾರಿ ರಸ್ತೆ ಬದಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಬೈಲುಕೊಪ್ಪೆಯಿಂದ ಮುಂದೆ ತೆರಳುವ ರಸ್ತೆ ಬದಿಯಲ್ಲಿ ಅಂದಾಜು 45-50 ವರ್ಷ ಪ್ರಾಯದ ವ್ಯಕ್ತಿಯ ಮೃತದೇಹ ಶನಿವಾರ ಬೆಳಗಿನ ಜಾವ ಗೋಚರಿಸಿದೆ ಎಂದು ಬೈಲುಕೊಪ್ಪೆ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.

ಮೃತದೇಹವನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಬೈಲುಕೊಪ್ಪೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08223254433 ಸಂಪರ್ಕಿಸಬಹುದು.