ಗೋಣಿಕೊಪ್ಪಲು, ಮಾ. 25: ಕೂರ್ಗ್ ಕ್ರಿಕೆಟ್ ಅಕಾಡೆಮಿ ವತಿಯಿಂದ ಏಪ್ರಿಲ್ 3 ರಿಂದ ಒಂದು ತಿಂಗಳುಗಳ ಕಾಲ ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲಾ ಮೈದಾನದಲ್ಲಿ ಕ್ರಿಕೆಟ್ ತರಬೇತಿ ಶಿಬಿರ ನಡೆಯಲಿದೆ ಎಂದು ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕುಮಾರ್ ಅಪಚ್ಚು ತಿಳಿಸಿದ್ದಾರೆ.
ಶಿಬಿರದಲ್ಲಿ ರಣಜಿ ಆಟಗಾರರಾದ ಸ್ಪಿನ್ ಬೌಲರ್ ಕೆ.ಪಿ. ಅಪ್ಪಣ್ಣ, ವೇಗದ ಬೌಲರ್ ಎನ್.ಸಿ. ಅಯ್ಯಪ್ಪ, ಹಾಗೂ ಬ್ಯಾಟ್ಸ್ಮನ್ ದೀಪಕ್ ಚೌಗುಲೆ ಇವರುಗಳು ತರಬೇತಿ ನೀಡಲಿದ್ದಾರೆ. ವಾರಾಂತ್ಯಗಳಲ್ಲಿ ಆಗಮಿಸಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಕ್ರಿಕೆಟ್ ಪ್ರತಿಭೆಗಳನ್ನು ಬೆಳೆಸಲು ಪ್ರೋತ್ಸಾಹ ನೀಡಲಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿನೂತನವಾಗಿ ಆಟಗಾರರ ಬೆಳವಣಿಗೆಗೆ ಪೂರಕವಾಗಿ ವಿಡಿಯೋ ಎನಾಲಿಸ್ ಮುಖಾಂತರ ಅವರ ತಪ್ಪುಗಳನ್ನು ತಿಳಿಸಿಕೊಡುವ ತಂತ್ರಜ್ಞಾನವನ್ನು ಶಿಬಿರದಲ್ಲಿ ಬಳಸಲಾಗುವದು ಎಂದರು.
ಶಿಬಿರದಲ್ಲಿ 7 ರಿಂದ 19 ರ ವಯೋಮಿತಿಯ ಬಾಲಕ ಮತ್ತು ಬಾಲಕಿಯರು ಪಾಲ್ಗೊಳ್ಳ ಬಹುದ್ದಾಗಿದ್ದು, ತರಬೇತಿ ಪಡೆಯುವ ಇಚ್ಚೆ ಉಳ್ಳವರು ಕಾಪ್ಸ್ ಶಾಲೆಯಲ್ಲಿ ಹೆಸರನ್ನು ನೋಂದಾಯಿಸಿ ಕೊಳ್ಳಬಹುದು ಎಂದು ತಿಳಿಸಿದರು.
ಪ್ರತಿಭಾನ್ವಿತ ಆಟಗಾರರನ್ನು ಗುರುತಿಸಿ ಜಿಲ್ಲಾ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗುವುದು. ಏಪ್ರಿಲ್ 4 ರಂದು ನಡೆಯುವ 14 ರ ವಯೋಮಿತಿಯ ತಂಡಕ್ಕೆ ಆಯ್ಕೆ ನಡೆಯಲಿದ್ದು, ಭಾಗವಹಿಸುವವರು 1.9.2003 ನಂತರ ಜನಿಸಿದವರಾಗಿರ ಬೇಕು, 16ರ ವಯೋಮಿತಿಯ ತಂಡಕ್ಕೆ ಏಪ್ರಿಲ್ 12 ರಂದು ಆಯ್ಕೆ ನಡೆಯಲಿದೆ. ಇದಕ್ಕೆ 1.9.2001 ರಲ್ಲಿ ಜನಿಸಿದವರು, 19 ರ ವಯೋಮಿತಿಯ ತಂಡಕ್ಕೆ ಏಪ್ರಿಲ್ 13 ರಂದು ಆಯ್ಕೆ ನಡೆಯಲಿದೆ. ಈ ತಂಡಕ್ಕೆ 1.9.1998 ಕ್ಕೆ ಜನಿಸಿದವರಾಗಿರಬೇಕು. ಭಾಗವಹಿಸುವವರು ಅಸಲಿ ದಾಖಲೆ ಪತ್ರಗಳನ್ನು ತರುವಂತೆ ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ 9448647465, 9900925190. ಸಂಪರ್ಕಿಸಲು ತಿಳಿಸಿದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಅರುಣ್ ಚೆಂಗಪ್ಪ ಉಪಸ್ಥಿತರಿದ್ದರು.