ಮಡಿಕೇರಿ, ಮಾ. 23: ತಾ. 16 ರಂದು ಪೊನ್ನಂಪೇಟೆಯ ಕೂರ್ಗ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ; ರೊಟರ್ಯಾಕ್ಟ್ ಕ್ಲಬ್ ಆಫ್ ಕೂರ್ಗ್; ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಯೋಜಕತ್ವದಲ್ಲಿ ರಕ್ತದಾನ ಶಿಬಿರ ‘ಮಾಹಾದಾನ್’ ಅನ್ನು ನಡೆಸಲಾಯಿತು.

ರೆಡ್‍ಕ್ರಾಸ್ ಸೊಸೈಟಿ, ಬೆಂಗಳೂರು, ರಾಷ್ಟ್ರೀಯ ಸ್ವಯಂ ಸೇವಾ ಯೋಜನಾ ಘಟಕ (ಎನ್‍ಎಸ್‍ಎಸ್) ಮತ್ತು ಸಿಐಟಿ ಇವರ ಸಹಭಾಗಿತ್ವದಲ್ಲಿ ನಡೆದ ಈ ಶಿಬಿರದಲ್ಲಿ ರೆಡ್ ಕ್ರಾಸ್ ಸೊಸೈಟಿಯ ಗವರ್ನರ್ ಶ್ಯಾಮಸುಂದರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರಾಂಶುಪಾಲ ಡಾ.ಪಿ. ಮಹಾಭಲೇಶ್ವರಪ್ಪ ಅವರು ಸಭಿಕರನ್ನು ಸ್ವಾಗತಿಸಿ, ರಕ್ತದಾನದ ಮಹತ್ವವನ್ನು ವಿವರಿಸಿ ರಕ್ತದಾನಕ್ಕೆ ಪ್ರೇರೇಪಿಸಿದರು ಅಶಿಕ್ ಕಾಳಪ್ಪ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ರೊಟರ್ಯಾಕ್ಟ್ ಕ್ಲಬ್ ಸಂಯೋಜಕ ದಿಲನ್ ಚಂಗಪ್ಪ, ರಾಷ್ಟ್ರೀಯ ಸ್ವಯಂ ಸೇವಾ ಸಮಿತಿಯ ಅಧಿಕಾರಿ ಹೆಚ್.ಎಂ. ಹರೀಶ್ ಕುಮಾರ್ ಮತ್ತು ಕ್ಲಬ್‍ನ ಇತರ ಸದಸ್ಯರು ಹಾಗೂ ಹಲವು ಸ್ವಯಂ ಸೇವಾಕರ್ತರು ಭಾಗವಹಿಸಿದ್ದರು. ಈ ಶಿಬಿರದಲ್ಲಿ 180 ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ರೊಟರ್ಯಾಕ್ಟ್‍ನ ಶರಣ್ಯರಾವ್ ವಂದಿಸಿದರು.