ಮಡಿಕೇರಿ, ಮಾ. 23: ಕೊಡಗು ಜಿಲ್ಲೆಯ ಪಹಣಿಯಲ್ಲಿ ಪ್ರಸ್ತುತ 234 ಟೆನ್ಯೂರ್ ಇರುವದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ವಿಧಾನ ಪರಿಷತ್‍ನಲ್ಲಿ ಮಾಹಿತಿ ನೀಡಿದ್ದಾರೆ.ಎಂ.ಎಲ್.ಸಿ. ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ. ಜಮೀನಿನ ವರ್ಗೀಕರಣಕ್ಕೆ (ಐಚಿಟಿಜ ಅಟಚಿssiಜಿiಛಿಚಿಣioಟಿ) ಅನುಗುಣವಾಗಿ ಮಣ್ಣಿವ ದರವಾರು ಕಂದಾಯ ನಿಗದಿಗೊಳಿಸಲಾಗುತ್ತದೆ. ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಮಡಿಕೇರಿ, ಮಾ. 23: ಕೊಡಗು ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ವಿವಿಧ ಶ್ರೇಣಿಯ 137 ವೈದ್ಯರ ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 80 ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದು, 57 ಹುದ್ದೆಗಳು ಖಾಲಿ ಇವೆ ಎಂದು ಆರೋಗ್ಯ ಸಚಿವ ರಮೇಶ್‍ಕುಮಾರ್ ಉತ್ತರಿಸಿದ್ದಾರೆ. ಸದನದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಜಿಲ್ಲೆಯಲ್ಲಿ 103 ತಜ್ಞ ವೈದ್ಯರ ಪೈಕಿ 52 ಮಂದಿ ಕರ್ತವ್ಯದೊಂದಿಗೆ 51 ಹುದ್ದೆಗಳು ಭರ್ತಿಯಾಗಿಲ್ಲವೆಂದು ತಿಳಿಸಿದ್ದಾರೆ.

ವಿಧಾನ ಮಂಡಲದಲ್ಲಿ ಕೊಡಗಿನ ಧ್ವನಿ234 ಟೆನ್ಯೂರ್ - ಉದ್ದಿಮೆಯಲ್ಲಿ 50 ರೆಸಾರ್ಟ್‍ಕೊಡಗಿನ ಆಸ್ಪತ್ರೆಗಳಲ್ಲಿ 57 ವೈದ್ಯರ ಹುದ್ದೆ ಖಾಲಿ(ಮೊದಲ ಪುಟದಿಂದ) ಜಮಾಬಂದಿ ಪದ್ಧತಿಯಲ್ಲಿ ಸುಮಾರು 1600ಕ್ಕೂ ಅಧಿಕ ಟೆನ್ಯೂರ್‍ಗಳಿದ್ದು, ಪ್ರಸ್ತುತ ಜಮಾಬಂಧಿಯಿಂದ ಪಹಣಿಗೆ ತರ್ಜುಮೆಗೊಳಿಸಿ ‘ಪಹಣಿ’ ದಾಖಲೆಗಳನ್ನು ಗಣಕೀಕರಿಸುವ ಸಂದರ್ಭದಲ್ಲಿ 234 ಟೆನ್ಯೂರ್‍ಗಳಿಗೆ ಸೀಮಿತಗೊಳಿಸಿ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ. ಕರ್ನಾಟಕ ಲ್ಯಾಂಡ್ ರೆವೆನ್ಯೂ ಆ್ಯಕ್ಟ್‍ನಲ್ಲಿ ಕೂರ್ಗ್ ರೆವಿನ್ಯೂ ಆ್ಯಕ್ಟ್ ವಿಲೀನಗೊಂಡಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆ 1984ರ ಸೆಕ್ಷನ್ 202ರ ಪ್ರಕಾರ ರಿಫಿಲ್ ಆಗಿದ್ದರೂ ಸಹ ಕೂರ್ಗ್ ರೆವೆನ್ಯೂ ರೆಗ್ಯೂಲೇಷನ್ ಆ್ಯಕ್ಟ್‍ನಲ್ಲಿ ಕೆಲವು ಅಂಶಗಳು ಮುಂದುವರೆದಿರುತ್ತದೆ. ಭೂ ಕಂದಾಯ ಕಾಯ್ದೆಯ ಕಲಂ 79(2)ರಲ್ಲಿ ಕೊಡಗು ಜಿಲ್ಲೆ ಸಂಬಂಧಿಸಿದಂತೆ ಜಮ್ಮಾ ಮತ್ತು ಬಾಣೆ ಜಮೀನುಗಳ ಪ್ರಿವಿಲೆಜ್ ಸವಲತ್ತುಗಳನ್ನು ಮುಂದುವರೆಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.

ಜಿಲ್ಲೆಯಲ್ಲಿ 50 ರೆಸಾರ್ಟ್‍ಗಳು

ಕೊಡಗಿನಲ್ಲಿ ಒಟ್ಟು 50 ರೆಸಾರ್ಟ್‍ಗಳು ಉದ್ದಿಮೆ ನಡೆಸುತ್ತಿರುವದಾಗಿ ವೀಣಾ ಅಚ್ಚಯ್ಯ ಅವರ ಮತ್ತೊಂದು ಪ್ರಶ್ನೆಗೆ ಸಚಿವ ತಿಮ್ಮಪ್ಪ ಮಾಹಿತಿ ನೀಡಿದ್ದಾರೆ.

ನಿರ್ಮಾಣ ಹಂತದಲ್ಲಿ ಇರುವ ರೆಸಾರ್ಟ್‍ಗಳು ಯಾವದೂ ಇಲ್ಲ. ಮಡಿಕೇರಿ ತಾಲೂಕಿನಲ್ಲಿ 15, ವೀರಾಜಪೇಟೆ ತಾಲೂಕಿನಲ್ಲಿ 6 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 29 ರೆಸಾರ್ಟ್‍ಗಳಿರುವದಾಗಿ ಮಾಹಿತಿ ನೀಡಲಾಗಿದೆ. ರೆಸಾರ್ಟ್ ಉದ್ದಿಮೆ ನಡೆಸಲು ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರದಿಂದ ಉದ್ದಿಮೆ ಪರವಾನಗಿ ಪಡೆಯಬೇಕಾಗಿದೆ. ಕಂದಾಯ ಇಲಾಖೆಯಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 95ರ ಪ್ರಕಾರ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವರ್ತನೆಗೆ ಮಾತ್ರ ಅನುಮತಿ ನೀಡಲಾಗುತ್ತದೆ ಎಂದು ಸಚಿವರು ಸ್ಪಷ್ಪಪಡಿಸಿದ್ದಾರೆ.(ಮೊದಲ ಪುಟದಿಂದ) ಅಲ್ಲದೆ 34 ಮಂದಿ ಸಾಮಾನ್ಯ ತಜ್ಞರ ಪೈಕಿ 28 ವೈದ್ಯರು ಕರ್ತವ್ಯದಲ್ಲಿದ್ದು, 6 ಹುದ್ದೆಗಳು ಖಾಲಿಯಿದ್ದು, ಖಾಲಿ ಹುದ್ದೆಗಳ ಭರ್ತಿಗೆ ಸರಕಾರ ಕ್ರಮ ಕೈಗೊಳ್ಳುವದಾಗಿ ಆರೋಗ್ಯ ಸಚಿವರು ಭರವಸೆ ನೀಡಿದರು.

ರಾಜ್ಯದ ಮಾಹಿತಿ : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ತಜ್ಞರು ಹಾಗೂ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಆಯಾ ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿದ್ದು, ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ. ಎಂ.ಬಿ.ಬಿ.ಎಸ್. ವೈದ್ಯರು ಲಭ್ಯವಿಲ್ಲದಿದ್ದಲ್ಲಿ ಆ ಹುದ್ದೆಗಳಿಗೆ ಎದುರಾಗಿ ಆಯುಷ್ ವೈದ್ಯಾಧಿಕಾರಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಹಾಗೂ ಅಗತ್ಯವಿರುವ ಕಡೆ ಆಧಾರದ ಮೇಲೆ (oಟಿ ಛಿಚಿಟಟ bಚಿsis) ಮೇಲೆ ಖಾಸಗಿ ವೈದ್ಯರ ಸೇವೆಯನ್ನು ಪಡೆಯಲು ಸಹ ಸರ್ಕಾರವು ಅನುಮತಿ ನೀಡಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

ಜೊತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿ ಕಾರ್ಯನಿರ್ವಹಿಸಿ, ನಿವೃತ್ತಿ ಹೊಂದಿರುವ ತಜ್ಞರು ಹಾಗೂ ವೈದ್ಯಾಧಿಕಾರಿಗಳು ಸ್ವ-ಇಚ್ಛೆಯಿಂದ ಅರ್ಜಿ ಸಲ್ಲಿಸಿದವರಿಗೆ ಒಂದು ವರ್ಷದ ಅವಧಿಗೆ ಹಾಗೂ ಈ ಸೇವೆಯನ್ನು 65 ವರ್ಷ ವಯಸ್ಸಿನವರೆಗೆ ಪ್ರತೀ ವರ್ಷ ನವೀಕರಿಸುವ ಷರತ್ತಿನೊಂದಿಗೆ ಗುತ್ತಿಗೆ ಆಧಾರದ ಮೇಲೆ ಮರು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ ಅಧಿನಿಯಮ, 2012ಕ್ಕೆ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದ್ದು, ದಿನಾಂಕ 28.05.2016ರ ಆದೇಶದಲ್ಲಿನ ಷರತ್ತನ್ನು ಸಡಿಲಿಸಿ, ಸ್ವ-ಇಚ್ಛೆಯಿಂದ ಗ್ರಾಮೀಣ ಸೇವೆ ಸಲ್ಲಿಸುವ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿದ್ದು, ಅಂತಹ ವೈದ್ಯರ ಸೇವೆಯನ್ನೂ ಸಹ ಪಡೆಯಲಾಗಿದೆ ಎಂದು ರಮೇಶ್ ಕುಮಾರ್ ಉತ್ತರಿಸಿದ್ದಾರೆ.

ಪ್ರಸ್ತುತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 1065 ತಜ್ಞರು ಹಾಗೂ 354 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ತುರ್ತಾಗಿ ಭರ್ತಿ ಮಾಡಲು ವಿಶೇಷ ನೇಮಕಾತಿ ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯು ಚಾಲನೆಯಲ್ಲಿರುತ್ತದೆ.

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ 4069 ವಿವಿಧ ವೃಂದದ ಅರೆ ವೈದ್ಯಕೀಯ ಹುದ್ದೆಗಳನ್ನು ವಿಶೇಷ ನೇಮಕಾತಿ ಸಮಿತಿಯ ಮುಖಾಂತರ ತುರ್ತಾಗಿ ಭರ್ತಿ ಮಾಡಲು ವಿಶೇಷ ನೇಮಕಾತಿ ನಿಯಮಗಳನ್ನು ರಚಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.

436 ವಾಹನ ಚಾಲಕರ ಹುದ್ದಗೆ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, 316 ಕಿರಿಯ ಪ್ರಯೋಗಶಾಲಾ ತಂತ್ರಜ್ಞರ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ಪ್ರಕ್ರಿಯೆಯೊಂದಿಗೆ, 481 ಫಾರ್ಮಸಿಸ್ಟ್ ಹುದ್ದೆಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿರುವ ಸಚಿವರು ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಗ್ರೂಪ್-ಡಿ ಹುದ್ದೆಗಳನ್ನು ಜಿಲ್ಲಾ ಮಟ್ಟದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.