ಮಡಿಕೇರಿ, ಮಾ. 24: ಕಾಸರಗೋಡು ಹಳೆ ಚೂರಿ ಇಝ್ಹತ್ತುಲ್ ಇಸ್ಲಾಂ ಮದ್ರಸ ಶಿಕ್ಷಕ ಕೊಡಗು ನಿವಾಸಿ ರಿಯಾಝ್ ಮೌಲವಿ (30) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಕಾಸರಗೋಡು ಕರಂದಕ್ಕಾಡು ನಿವಾಸಿಗಳಾದ ನಿತಿನ್, ಅಖಿಲ್ ಮತ್ತು ಅಜೇಶ್ ಅಲಿಯಾಸ್ ಅಪ್ಪು ಬಂಧಿತ ಆರೋಪಿಗಳಾಗಿದ್ದಾರೆ. ಈ ಮೂವರನ್ನು ತನಿಖಾ ತಂಡವು ಗುರುವಾರ ಮಧ್ಯಾಹ್ನ ವಶಕ್ಕೆ ತೆಗೆದುಕೊಂಡಿತ್ತು. ವಿಚಾರಣೆಯ ವೇಳೆ ಕೊಲೆ ಕೃತ್ಯವನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರ ಮಧ್ಯರಾತ್ರಿ ಹಳೆ ಚೂರಿ ಮಸೀದಿ ಪಕ್ಕದ ಕೋಣೆಯಲ್ಲಿ ಮಲಗಿದ್ದ ರಿಯಾಜ್ ಮೌಲವಿ ಅವರನ್ನು ಬರ್ಬರವಾಗಿ ಇರಿದು ಕೊಲೆಗೈಯಲಾಗಿತ್ತು.