ಮಡಿಕೇರಿ, ಮಾ. 23: ಮೇಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಶಾಸಕರ ನಿಧಿ, ಜಿ.ಪಂ. ಹಾಗೂ ಗ್ರಾ.ಪಂ. ಅನುದಾನದಲ್ಲಿ ನಿರ್ಮಾಣಗೊಂಡಿರುವ ರಸ್ತೆ ಮತ್ತು ಚರಂಡಿಯನ್ನು ಉದ್ಘಾಟಿಸ ಲಾಯಿತು, ಅಲ್ಲದೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಶಾಸಕ ಕೆ.ಜಿ. ಬೋಪಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಗ್ರಾ.ಪಂ. ಅಧ್ಯಕ್ಷ್ಷೆ ಕೆ.ಕೆ. ಜಯಂತಿ ಅವರುಗಳ ನೇತೃತ್ವದಲ್ಲಿ ಒಟ್ಟು ರೂ. 45 ಲಕ್ಷ ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನಡೆಯಿತು. ಈ ಸಂದರ್ಭ ಮಾತನಾಡಿದ ಶಾಸಕರು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸಹಕಾರ ನೀಡುವದಾಗಿ ಭರವಸೆ ನೀಡಿದರು. ಗ್ರಾಮಸ್ಥರು ಕಾಮಗಾರಿಯ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭ ಮೇಕೇರಿ ಗ್ರಾ.ಪಂ. ಉಪಾಧ್ಯಕ್ಷ ಭೀಮಯ್ಯ, ಮಡಿಕೇರಿ ತಾ.ಪಂ. ಸದಸ್ಯ ಕುಮುದಾ, ಗ್ರಾ.ಪಂ. ಸದಸ್ಯರಾದ ಅರ್ಪಿತಾ, ಸಂಧ್ಯಾ, ನಾಚಪ್ಪ, ಮಂಡುವಂಡ ವಾಣಿ ಚರ್ಮಣ, ಪ್ರಕಾಶ್, ಅನುಸೂಯ, ರಕ್ಷಿತ್, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಾಂತ ಬಿಳಿಗೇರಿ, ಉಪಾಧ್ಯಕ್ಷ ನಂದೀಶ್, ಕಾರ್ಯದರ್ಶಿ ಟಿ.ಎ. ಕುಮಾರ್, ಜಿಲ್ಲಾ ಸಮಿತಿಯ ಕಾಯೇರ ಬೆಳ್ಳಿಯಪ್ಪ, ಹರೀಶ್, ಪಿ.ಕೆ. ವೇಲಾಯುಧನ್ ಮತ್ತಿತರ ಪ್ರಮುಖರು ಹಾಜರಿದ್ದರು.