ಹೊದ್ದೂರು, ಮಾ. 23: ಮೂರ್ನಾಡು ಸನಿಹದ ಹೊದ್ದೂರು ಗ್ರಾಮದ ಗ್ರಾಮ ದೇವತೆಗಳ ವಾರ್ಷಿಕ ಉತ್ಸವ ತಾ. 28ರಿಂದ ಏಪ್ರಿಲ್ 2ರವರೆಗೆ ನಡೆಯಲಿರುವ ದಾಗಿ ತಕ್ಕಮಖ್ಯಸ್ಥರಾದ ನೆರವಂಡ ಕೆ. ನಂಜಪ್ಪ ಅವರು ತಿಳಿಸಿದ್ದಾರೆ.
ಈ ಪ್ರಯುಕ್ತ ತಾ.28 ರಂದು ಸಂಜೆ 7.30 ರಿಂದ ದೀಪಾರಾಧನೆ, ತಾ. 29ರಂದು ಬೆಳಿಗ್ಗೆ 10.30 ಕ್ಕೆ ಬೋಡ್ ಹಬ್ಬ, ತಾ. 30 ರಂದು ಬೆಳಿಗ್ಗೆ 8.30ಕ್ಕೆ ಭದ್ರಕಾಳಿ ದೇವಿಯ ಉತ್ಸವ, ಮಧ್ಯಾಹ್ನದ ಬಳಿಕ ಭಗವತಿ ದೇವಾಲಯದ ಆವರಣದಲ್ಲಿ ಹಾಡು-ಕುಣಿತಗಳು ನಂತರ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ.
ಬಳಿಕ ಕಾವೇರಿ ನದಿಯಲ್ಲಿ ದೇವಿಯ ಅವಭೃತ ಸ್ನಾನ, ದೇವಿಯ ಮೆರವಣಿಗೆ, ದೇವಾಲಯದ ಸುತ್ತಲೂ ದೇವರ ಪ್ರದಕ್ಷಿಣಾ ನರ್ತನ, ಅಲಂಕಾರ ಪೂಜೆ ಸೇರಿದಂತೆ ಸೇವೆಗಳು ನಡೆಯಲಿವೆ. ತಾ. 31ರಂದು ಕಲಶÀ, ಸಂಜೆ 7.30ಕ್ಕೆ ಚಾಮುಂಡಿ ದೇವಾಲಯದ ಬಾಗಿಲು ತೆರೆಯುವದು, ಅಂದಿ ತೋಯತ ನಡೆಯಲಿದೆ. ಏಪ್ರಿಲ್ 1 ರಂದು ಸಂಜೆ 7.30ರಿಂದ ವಿವಿಧ ದೇವರ ಉತ್ಸವಗಳು, ಮೇಲೇರಿಗೆ ಅಗ್ನಿಸ್ಪರ್ಶ, 2ರಂದು ಬೆಳಿಗ್ಗೆ 8.30ಕ್ಕೆ ಕಲ್ಯಾಟಜಪ್ಪ, 11ಕ್ಕೆ ವಿಷ್ಣುಮೂರ್ತಿ ಉತ್ಸವ, ಚೌರೀರ ಅಪ್ಪಣ್ಣ ಮತ್ತು ಗೆಳೆಯರ ಬಳಗ ವತಿಯಿಂದ ಅನ್ನದಾನ ನಡೆಯಲಿದೆ.