ಮಡಿಕೇರಿ, ಮಾ. 23: ಜಿಲ್ಲೆಯ ವಿವಿಧೆಡೆ ಕಾಡಾನೆಗಳ ಹಿಂಡು ಕಾಫಿ ತೋಟಗಳ ನಡುವೆ ಸಂಚರಿಸುತ್ತಾ, ಕೃಷಿ ಫಸಲು ನಷ್ಟಗೊಳಿಸಿ ಜೀವಹಾನಿ ತಂದೊಡ್ಡುತ್ತಿರುವ ಬಗ್ಗೆ ಜಾಗೃತರಿರುವಂತೆ ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಅವರು ಜನತೆಗೆ ಸಲಹೆ ನೀಡಿದ್ದಾರೆ.ಸಿದ್ದಾಪುರ ವ್ಯಾಪ್ತಿಯಲ್ಲಿ, ಘಟ್ಟದಳ್ಳ, ಹೊಸ್ಕೇರಿ, ಹೇರೂರು, ಎಮ್ಮೆಗುಂಡಿ, ಬಿಬಿಟಿಸಿ ಕಾಫಿ ತೋಟದೊಳಗೆ ಆಗಿಂದಾಗ್ಗೆ ಕಾಡಾನೆ ಹಿಂಡು ಕಾಣಿಸಿ ಕೊಳ್ಳುತ್ತಿರುವ ಬಗ್ಗೆ ಅವರು ಈ ಸಲಹೆ ನೀಡಿದ್ದಾರೆ. ತೋಟ ಕಾರ್ಮಿಕರು, ವಿದ್ಯಾರ್ಥಿಗಳು, ದಾರಿ ಹೋಕರು ಜಾಗರೂಕತೆ ವಹಿಸುವಂತೆ ಕೋರಿದ್ದು, ಕಾಡಾನೆಗಳ ಸುಳಿವು ಲಭಿಸಿದರೆ ಕೂಡಲೇ ಇಲಾಖೆಯ ಗಮನಕ್ಕೆ ತರುವಂತೆ ಕೋರಿದ್ದಾರೆ.