ಗೋಣಿಕೊಪ್ಪಲು, ಮಾ. 24 : ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ವಲಯ ಮಹಿಳಾ ಕ್ರೀಡಾಕೂಟ ಗೋಣಿಕೊಪ್ಪ ಕಾವೇರಿ ಕಾಲೇಜು ಮೈದಾನದಲ್ಲಿ ಮಾರ್ಚ್ 26 ರಂದು ನಡೆಯಲಿದೆ ಎಂದು ಪಂದ್ಯಾವಳಿ ಸಂಚಾಲಕಿ ಡಾ. ಎಂ.ಎಂ ದೇಚಮ್ಮ ತಿಳಿಸಿದ್ದಾರೆ.
ಪಂದ್ಯಾವಳಿಯಲ್ಲಿ ಹಾಕಿ, ಕಬಡ್ಡಿ, ಥ್ರೋಬಾಲ್ ಹಾಗೂ ವಾಲಿಬಾಲ್ ಪಂದ್ಯಗಳು ನಡೆಯಲಿದೆ. ಕೊಡಗು ವಲಯಕ್ಕೆ ಒಳಪಡುವ ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಸುಮಾರು 14 ತಂಡಗಳು 4 ವಿಭಾಗಗಳಲ್ಲಿ ಪಾಲ್ಗೊಳ್ಳಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ದೈಹಿಕ ಉಪನಿರ್ದೇಶಕ ಎಚ್.ಎನ್ ರಮೇಶ್, ಪ್ರೊ. ಎಂ.ಡಿ ಅಕ್ಕಮ್ಮ, ಹಿರಿಯ ಕ್ರೀಡಾಪಟುಗಳಾದ ವಾಣಿ ಚಂಗಪ್ಪ, ಇಂದಿರಾ ಸುಬ್ಬಯ್ಯ, ಕಾವೇರಿ ಕಾಲೇಜು ನಿರ್ದೇಶಕ ಕುಲ್ಲಚಂಡ ಬೋಪಣ್ಣ ಪಾಲ್ಗೊಳ್ಳಲಿದ್ದಾರೆ.
ಕೊಡಗು ಫ್ಲೋರ್ ಬಾಲ್ ಅಸೋಸಿಯೇಶನ್ ಅಧ್ಯಕ್ಷ ಮಿನ್ನಂಡ ಜೋಯಪ್ಪ ಪ್ರಶಸ್ತಿ ವಿತರಣೆ ಮಾಡಲಿದ್ದಾರೆ. ಈ ಸಂದರ್ಭ ಕಾಲೇಜು ಕ್ರೀಡಾಪಟುಗಳಾದ ಅವಿನಾಶ್ ತಮ್ಮಯ್ಯ, ಬಿ.ಎಂ ಪೂವಣ್ಣ ಅವರುಗಳನ್ನು ಸನ್ಮಾನಿಸಲಾಗುವದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಪ್ರಾಂಶುಪಾಲ ಪ್ರೊ.ಪಟ್ಟಡ ಪೂವಣ್ಣ, ದೈಹಿಕ ನಿರ್ದೇಶಕ ಎಂ.ಟಿ ಸಂತೋಷ್ ಉಪಸ್ಥಿತರಿದ್ದರು.