ಮಡಿಕೇರಿ, ಮಾ. 22: ಮಂಗಳೂರಿನ ಎ.ಜೆ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಕಾಲೇಜಿನ ಬಿಡಿಎಸ್ (ದಂತ ವೈದ್ಯ) ಪದವಿ ಪಡೆದ ಮಂಗಳೂರಿನ ನ್ಯಾಯವಾದಿ ದಂಪತಿ ಗಳಾದ ಸೋಮೆಯಂಡ ಪಿ. ಚಂಗಪ್ಪ ಮತ್ತು ಮಲ್ಲಿಕಾ ದಂಪತಿ ಅವರ ಪುತ್ರಿ ಡಾ. ಕಾವೇರಿ ಚಂಗಪ್ಪ ಅವರು 2016-17ನೇ ಸಾಲಿನ ಡೆಂಟಲ್ ವಿಭಾಗದಲ್ಲಿ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ಹೆಲ್ಸ್ ಸೈನ್ಸ್ ಪ್ರಕಟಿಸಿದ ರ್ಯಾಂಕ್ ಪಟ್ಟಿಯಲ್ಲಿ ವಿಶ್ವವಿದ್ಯಾನಿಲಯಕ್ಕೆ ಐದನೇ ರ್ಯಾಂಕ್ ಪಡೆದಿದ್ದಾರೆ.
ಪಬ್ಲಿಕ್ ಹೆಲ್ಸ್ ಡೆಂಟಿಸ್ಟ್ರಿಯಾ ವಿಶ್ವವಿದ್ಯಾನಿಲಯಕ್ಕೆ ಒಂದನೇ ರ್ಯಾಂಕ್ ಪಡೆದು ಕೋಲ್ಗೆಟ್ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಚಿನ್ನದ ಪದಕ ಪಡೆದಿದ್ದಾರೆ. ಮೆಡಿಸಿನ್ &amdiv; ರೇಡಿಯೋಲಾಜಿಯಲ್ಲಿ 2ನೇ ರ್ಯಾಂಕ್, ಆರ್ಥೊಡಾಂಟಿಕ್ಸ್ನಲ್ಲಿ ವಿವಿಗೆ 8ನೇ ರ್ಯಾಂಕ್, ಪ್ರೀ ಕ್ಲಿನಿಕಲ್ ಕನರ್ವೆಟಿವ್ ಡೆಂಟಿಸ್ಟಿಯಲ್ಲಿ ವಿವಿಗೆ 9ನೇ ರ್ಯಾಂಕ್ ಹಾಗೂ ಜನರಲ್ ಪೆಥೊಲಾಜಿಯಲ್ಲಿ ವಿವಿಗೆ 10ನೇ ರ್ಯಾಂಕ್ ಗಳಿಸಿದ್ದು, ಈಕೆಯ ಸಾಧನೆ. ಕಾಲೇಜಿನ ವಿದ್ಯಾಭ್ಯಾಸದ ಅವಧಿಯಲ್ಲಿ 8 ಐಚ್ಛಿಕ ವಿಷಯಗಳಲ್ಲಿ ಪ್ರಥಮ ಸ್ಥಾನ ಪಡೆದಿದುದ್ದಲ್ಲದೇ ರಾಷ್ಟ್ರಮಟ್ಟದ ಮತ್ತು ರಾಜ್ಯಮಟ್ಟದ ಡೆಂಟಲ್ ಸಮಾವೇ&divlusmn; Àದಲ್ಲಿ ಪೇಪರ್ ಪ್ರೆಸೆಂಟೇಶನ್ ಮಾಡಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಇವರನ್ನು ಇತ್ತೀಚೆಗೆ ನಡೆದ ಎಜೆ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ನ ಗ್ರಾಜ್ಯುವೇಶನ್ ದಿನಾಚರಣೆ ಯಲ್ಲಿ ಕಾಲೇಜಿನ ಬೆಸ್ಟ್ ಆಲ್ರೌಂಡರ್ ಆಫ್ ದ ಬ್ಯಾಚ್ ಪ್ರಶಸ್ತಿಯನ್ನು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಅವರಿಂದ ಸ್ವೀಕರಿಸಿದರು.