ಕುಶಾಲನಗರ, ಮಾ. 22: ಕುಶಾಲನಗರ ಪಟ್ಟಣ ಸೇರಿದಂತೆ ನೆರೆಯ ಮುಳ್ಳುಸೋಗೆ ಗ್ರಾಮಗಳ ನಾಗರಿಕರಿಗೆ ನಿರಂತರ ಕುಡಿಯುವ ನೀರು ಸರಬರಾಜಿಗಾಗಿ ಕೈಗೆತ್ತಿಕೊಂಡಿದ್ದ ಮಹತ್ವದ ವಿದ್ಯುತ್ ಯೋಜನೆಯೊಂದು ಕಳೆದ 13 ವರ್ಷಗಳಿಂದ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿದೆ.
2004 ರಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಂದಾಜು 40 ಲಕ್ಷ ವೆಚ್ಚದಲ್ಲಿ ಯೋಜನೆ ಯೊಂದನ್ನು ಕೈಗೆತ್ತಿಕೊಂಡಿತ್ತು. ಕುಶಾಲನಗರ, ಗುಮ್ಮನಕೊಲ್ಲಿ ಮತ್ತು ಮುಳ್ಳುಸೋಗೆ ವ್ಯಾಪ್ತಿಯಲ್ಲಿನ ಸಾವಿರಾರು ಜನರಿಗೆ ನೀರು ಪೂರೈಸಲು ಅಗತ್ಯವಿರುವ ವಿದ್ಯುತ್ ಉತ್ಪಾದನೆಗೆ ಜೈವಿಕ ತಂತ್ರಜ್ಞಾನದ ಮೂಲಕ ಯೋಜನೆ ರೂಪು ಗೊಂಡಿತ್ತು. ಆಗಾಗ್ಯೆ ಕಂಡುಬರುವ ವಿದ್ಯುತ್ ಸಮಸ್ಯೆಯಿಂದ ನೀರಿನ ಸರಬರಾಜು ವ್ಯವಸ್ಥೆ ನಿರೀಕ್ಷಿತ ಪ್ರಗತಿ ಕಾಣುವಲ್ಲಿ ವೈಫಲ್ಯದ ಕಾರಣ ಕೃಷಿ ತ್ಯಾಜ್ಯಗಳು, ಮುಸುಕಿನ ಜೋಳ, ಮರದ ಎಲೆ, ಮರದು ಪುಡಿ ಇತ್ಯಾದಿ ತ್ಯಾಜ್ಯಗಳನ್ನು ಬಳಸುವ ಮೂಲಕ ಜೈವಿಕ ತಂತ್ರಜ್ಞಾನದಿಂದ ಇಂಧನ ತಯಾರಿಸುವ ಯೋಜನೆ ಇದಾಗಿತ್ತು.
ರಾಜ್ಯದ ಕೋಲಾರ ಮತ್ತು ಕುಶಾಲನಗರದಲ್ಲಿ ಈ ಯೋಜನೆಗೆ ಕರ್ನಾಟಕ ಪವರ್ ಕಾರ್ಪೋರೇಷನ್ ಲಿ ಅವಕಾಶ ಕಲ್ಪಿಸಿತ್ತು. ಕುಶಾಲನಗರ ಪಟ್ಟಣದಲ್ಲಿರುವ ಮಂಡಳಿಯ ಪಂಪ್ಹೌಸ್ಗೆ ಕಾವೇರಿ ನದಿಯಿಂದ ನೀರೆತ್ತಲು ಅಳವಡಿಸಿರುವ ಎರಡು ಭಾರೀ ಅಶ್ವಶಕ್ತಿಯ ಸಾಮಥ್ರ್ಯದ ಎರಡು ಪಂಪ್ಗಳಿಗೆ ವಿದ್ಯುತ್ ಸಮಸ್ಯೆ ನೀಗಿಸಲು ಇದೊಂದು ಪರ್ಯಾಯ ವ್ಯವಸ್ಥೆಯೂ ಆಗಿತ್ತು. ಈ ಎಲ್ಲಾ ವಿದ್ಯಮಾನಗಳ ಹಿನ್ನಲೆಯಲ್ಲಿ ಕೆಪಿಸಿಎಲ್ ರೂಪಿಸಿದ ಬಯೋಟೆಕ್ನಾಲಜಿ ಯೋಜನೆಗೆ 2004 ರಲ್ಲಿ ಕಾಮಗಾರಿಗಳು ಪೂರ್ಣಗೊಂಡು ಅಂದಾಜು 40 ಲಕ್ಷ ರೂಗಳನ್ನು ವ್ಯಯಿಸಲಾಗಿತ್ತು.
ಈ ತಂತ್ರಜ್ಞಾನದಿಂದ ಪೆಟ್ರೋಲ್ ಅಥವಾ ಡೀಸೆಲ್ ಇಲ್ಲದೆ ಸುಮಾರು 100 ಕೆವಿ ವಿದ್ಯುತ್ ಉತ್ಪಾದಿಸುವ ಸಾಮಥ್ರ್ಯ ಈ ಯೋಜನೆಗಿತ್ತು. ಈ ತಂತ್ರಜ್ಞಾನದಿಂದ ದಿನದ 24 ಗಂಟೆಗಳೂ ವಿದ್ಯುತ್ ಪೂರೈಸುವ ಸಾಧ್ಯತೆ ಯೊಂದಿಗೆ 1 ಕೆವಿ ವಿದ್ಯುತ್ ಉತ್ಪಾದನೆಗೆ ಕೇವಲ ರೂ 2.50 ಮಾತ್ರ ವೆಚ್ಚ ತಗಲುತ್ತಿತ್ತು ಎಂದು ಆಗಿನ ತಂತ್ರಜ್ಞರು ಮಾಹಿತಿ ನೀಡಿದ್ದರು.
ಒಮ್ಮೆ ಯಂತ್ರಗಳು ಚಾಲನೆ ಯಾಗಲು 15 ನಿಮಿಷ ವಿದ್ಯುತ್ ಸಂಪರ್ಕ ಹೊಂದಿದರೆ ಸಾಕು. ನಂತರ ಕೇವಲ ಜೈವಿಕ ತಂತ್ರಜ್ಞಾನದ ಇಂಧನ ಮೂಲಕ ವಿದ್ಯುತ್ ಉತ್ಪಾದನೆಯಾಗುವ ಈ ಯೋಜನೆ ಇದೀಗ ಕಾರ್ಯಗತವಾಗದೆ ನೆನೆಗುದಿಗೆ ಬಿದ್ದಿದೆ.
ಕರ್ನಾಟಕ ಪವರ್ ಕಾರ್ಪೊರೇಷನ್ ಲಿ., ನ ಅಧಿಕಾರಿಗಳು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಕೆಲವು ಸಂಸ್ಥೆಗಳ ತಾಂತ್ರಿಕ ಸಲಹೆ ಪಡೆದು ಯೋಜನೆಗೆ ಕೈಹಾಕುವದರೊಂದಿಗೆ ಕುಶಾಲನಗರ ಪಟ್ಟಣದ ನೀರು ಸರಬರಾಜು ಮಂಡಳಿ ಕಚೆÉೀರಿ ಆವರಣದಲ್ಲಿ ಶೇ. 80 ರಷ್ಟು ಕೆಲಸ ಪೂರ್ಣ ಗೊಂಡಿದ್ದರೂ ಇದುವರೆಗೂ ಈ ಯೋಜನೆ ಕಾರ್ಯಗತವಾಗ