ಗೋಣಿಕೊಪ್ಪಲು, ಮಾ. 21: ಗೋಣಿಕೊಪ್ಪಲು ಕಾವೇರಿ ಕಾಲೇಜು ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ವತಿಯಿಂದ ರಾಜ್ಯಮಟ್ಟದ ಅರ್ಥಶಾಸ್ತ್ರ ಹಬ್ಬ ಆಚರಿಸಲಾಯಿತು. ಕಾರ್ಯಕ್ರಮವನ್ನು ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಎ.ಸಿ. ಗಣಪತಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗೋಣಿಕೊಪ್ಪಲು ಎಪಿಸಿಎಂಎಸ್ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಮಾತನಾಡಿ, ಅರ್ಥಶಾಸ್ತ್ರ ಎಲ್ಲರಿಗೂ ತಿಳಿದಿರಬೇಕಾದ ವಿಷಯ ವಾಗಿದೆ. ಆದ್ದರಿಂದ ಅರ್ಥಶಾಸ್ತ್ರದ ಬಗ್ಗೆ ತಿಳುವಳಿಕೆ ಮುಖ್ಯ ಎಂದರು. ಮತ್ತೊಬ್ಬ ಅತಿಥಿ ಕಾವೇರಿ ವಿದ್ಯಾಸಂಸ್ಥೆ ನಿದೆರ್Éೀಶಕ ಇಟ್ಟಿರ. ಕೆ. ಬಿದ್ದಪ್ಪ ಮಾತನಾಡಿ, ನಮ್ಮ ದೇಶದ ಆರ್ಥಿಕ ಸಮಸ್ಯೆ ಹೋಗಲಾಡಿಸಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸ ಬೇಕಾದರೆ ಅರ್ಥಶಾಸ್ತ್ರ ಅಧ್ಯಯನ ಬಹಳ ಮುಖ್ಯ ಎಂದರು.

ರಾಜ್ಯದ ವಿವಿಧ 18 ಕಾಲೇಜುಗಳಿಂದ ವಿದ್ಯಾರ್ಥಿಗಳು ಪಾಲ್ಗೊಂಡು ನಿಧಿಶೋಧ, ಪ್ರೊಡಕ್ಟ್ ಲಾಂಚ್, ಪ್ರಂಬಂಧ, ಜಾಹೀರಾತು, ರಸಪ್ರಶ್ನೆ ಮತ್ತು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದರು. ಪದವಿ ವಿಭಾಗದ ಸ್ಪರ್ಧೆಯ ಎಲ್ಲಾ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದ ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಪ್ರಥಮ ಹಾಗೂ ಮೈಸೂರು ಮಹಾಜನ್ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.

ಸ್ನಾತಕೋತ್ತರ ವಿಭಾಗದಲ್ಲಿ ಪುತ್ತೂರು ಸೆಂಟ್ ಫಿಲೋಮಿನ ಕಾಲೇಜು ಪ್ರಥಮ ಹಾಗೂ ಮೈಸೂರು ಮಹಾರಾಣಿ ಕಲಾ ಕಾಲೇಜು ದ್ವಿತೀಯ ಸ್ಥಾನ ಪಡೆದು ಕೊಂಡಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಚೆಪ್ಪುಡಿರ ಅರುಣ್ ಮಾಚಯ್ಯ ವಿಜೇತರಿಗೆ ಬಹುಮಾನ ವಿತರಿಸಿದರು. ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂಬಲ್ ಬೀನ್ ಎಜುಕೇಷನ್ ಟ್ರಸ್ಟ್ ಛೇರ್ಮನ್ ಮಿಥುನ್ ಬೆಳ್ಯಪ್ಪ, ಪ್ರೊ. ಎ.ಎಂ. ಕಮಲಾಕ್ಷಿ, ಉಪನ್ಯಾಸಕರಾದ ಎಂ.ಡಿ. ರೇಷ್ಮ, ಶಾಲಿ ಬೆಳ್ಯಪ್ಪ, ಸೌಮ್ಮ, ವಿದ್ಯಾರ್ಥಿ ಗಳಾದ ರವಿಕುಮಾರ್ ಜಿ.ಆರ್. ದೇವಯ್ಯ, ಕಮರುನ್ನೀಸ, ಚೈತನ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆದವು.

ಸಮಾರೋಪ ಸಮಾರಂಭ

ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ.ಎ. ಪೂವಣ್ನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ, ಬಂಬ್ಲಿಬೀಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಮಿಥುನ್ ಬೆಳ್ಯಪ್ಪ, ಶಾಲಿ ಬೆಳ್ಯಪ್ಪ, ಎನ್. ಸೌಮ್ಯ, ವಿದ್ಯಾರ್ಥಿ ನಾಯಕರಾದ ತಂಗಮ್ಮ, ಚೈತನ್ಯ, ಚೇತಕ್ ದೇವಯ್ಯ, ಎನ್. ರವಿಕುಮಾರ್ ಹಾಜರಿದ್ದರು.

ಪದವಿ ವಿಭಾಗದಲ್ಲಿ ಮಡಿಕೆರಿಯ ಫೀ.ಮಾ. ಕಾರ್ಯಪ್ಪ ಕಾಲೇಜು ಪ್ರಥಮ, ಮೈಸೂರಿನ ಮಹಾಜನಾಸ್ ದ್ವಿತೀಯ ಸ್ಥಾನಗಳಿಸಿತು. ಸ್ನಾತಕೀತ್ತರ ವಿಭಾಗದಲ್ಲಿ ಪುತ್ತೂರಿನ ಫಿಲೋಮಿನಾ ಕಾಲೇಜು ಪ್ರಥಮ ಹಾಗೂ ಮೈಸೂರಿನ ಮಹಾರಾಣಿ ಕಲಾ ಕಾಲೇಜು ರನ್ನರ್ಸ್ ಪ್ರಶಸ್ತಿಗಳಿಸಿತು.