ಸಿದ್ದಾಪುರ, ಮಾ. 20: ತಾ. 25 ರಂದು ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮಿತಿ ವತಿಯಿಂದ ಮಡಿಕೇರಿಯಲ್ಲಿ ಸಮಾವೇಶÀವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮಿತಿಯ ಪದಾಧಿಕಾರಿಗಳು ನಿರ್ಣಯ ಕೈಗೊಂಡಿದ್ದಾರೆ. ದಿಡ್ಡಳ್ಳಿ ಯಲ್ಲಿ ಸೋಮವಾರ ಸಮಾವೇಶದ ಪೂರ್ವಬಾವಿ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ದಿಡ್ಡಳ್ಳಿ ಸೇರಿದಂತೆ ಜಿಲ್ಲೆಯ ಪಾಲೆಮಾಡು, ಚೆರಿಯಪರಂಬು, ಗದ್ದಿಗೆ, ಆರನೆಹೊಸಕೋಟೆ, ಕಣಿವೆರಾಂಪುರ, ಭಾಗದಲ್ಲಿರುವ ಆದಿವಾಸಿ, ದಲಿತರು, ದಮನಿತರು, ಅಲ್ಪಸಂಖ್ಯಾತರಿಗೆ ಭೂಮಿ-ಮನೆ ರಹಿತರಿಗೆ ಭೂಮಿಯನ್ನ ಹಾಗೂ ನಿವೇಶನವನ್ನು ನೀಡುವಂತೆ ಒತ್ತಾಯಿಸಿ ಅಂದು ಮಡಿಕೇರಿ-ಚಲೋ ಹಾಗೂ ಸಮಾವೇಶÀವು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಬೆಳಿಗ್ಗೆ 10:30ಕ್ಕೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತ್ತು.

ಸಭೆಯಲ್ಲಿ ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮಿತಿಯ ರಾಜ್ಯ ಮುಖಂಡ ಸಿರಿಮನೆ ನಾಗರಾಜ್ ಜಿಲ್ಲಾ ಸಂಚಾಲಕ ಡಿ.ಎಸ್. ನಿರ್ವಾಣಪ್ಪ, ಅಮಿನ್ ಮೋಹಿಸಿನ್, ಜೆ.ಕೆ. ಅಪ್ಪಾಜಿ, ಜೆ.ಕೆ. ಮುತ್ತಮ್ಮ, ಸೌಕತ್ ಆಲಿ, ನೇಮಿಚಂದ್, ಇನ್ನಿತರರು ಉಪಸ್ಥಿತರಿದ್ದರು.