ಶನಿವಾರಸಂತೆ, ಮಾ. 20: ಶನಿವಾರಸಂತೆ ಗ್ರಾ. ಪಂಚಾಯಿತಿಯು ಬೇಜವಾಬ್ದಾರಿಯಿಂದ ಅನೇಕ ವರ್ಷಗಳಿಂದ ಇಲ್ಲಿನ ಸರಕಾರಿ ಆಸ್ಪತ್ರೆ, ಶಾಲಾ - ಕಾಲೇಜು ಹಾಗೂ ಹೊಳೆಯ ಪಕ್ಕದಲ್ಲಿ ಪಟ್ಟಣದ ಕಸವನ್ನು ಸುರಿದು ಪರಿಸರ ಹಾಳು ಮಾಡಿದೆ ಎಂದು ಆರೋಪಿಸಿ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸಾರ್ವಜನಿಕರು ಮತ್ತು ಶಾಲಾ - ಕಾಲೇಜು ವಿದ್ಯಾರ್ಥಿಗಳು ಜಾಥಾ ನಡೆಸಿ ಕಂದಾಯ ಇಲಾಖೆ ಮುಂಭಾಗ ಧರಣಿ ನಡೆಸಿದ ಹೋರಾಟಕ್ಕೆ ಜಯ ಲಭಿಸಿದೆ.
ಶನಿವಾರಸಂತೆ ಗ್ರಾಮ ಪಂಚಾಯಿತಿಯ ಕಸ ವಿಲೇವಾರಿಗೆ ದುಂಡಳ್ಳಿ ಗ್ರಾಮದ ಸರ್ವೆ ನಂ. 42/2ರಲ್ಲಿ 2 ಎಕರೆ ಜಾಗ ಹಾಗೂ ದುಂಡಳ್ಳಿ ಗ್ರಾಮದ ಸರ್ವೆ ನಂ. 42/2ರಲ್ಲಿ 0.50 ಎಕರೆ ಜಾಗ ದುಂಡಳ್ಳಿ ಪಂಚಾಯಿತಿಯ ಕಸ ವಿಲೇವಾರಿಗೆ ಕಾಯ್ದಿರಿಸುವ ಬಗ್ಗೆ ತಹಶೀಲ್ದಾರ್ ಕೃಷ್ಣ, ಸಂಬಂಧಪಟ್ಟ ಕಂದಾಯ ಪರಿವೀಕ್ಷಕರಿಂದ ವರದಿ ಪಡೆದು ಸರ್ವೆಯಿಂದ ಗುರುತಿಸಿ ವರದಿ ಮಾಡಿದ್ದರು. ಅದರಂತೆ ಎರಡು ಪಂಚಾಯಿತಿಗಳಿಗೆ ಕಸ ವಿಲೇವಾರಿಗೆ ಕಾಯ್ದಿರಿಸಲು ಕೊಡಗು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಇಂದು ಕರ್ನಾಟಕ ರಕ್ಷಣಾ ವೇದಿಕೆ ಅಧಿಸೂಚನಾ ಪತ್ರ ಪಡೆದು ಇಂದು ಶನಿವಾರಸಂತೆ ನಾಡಕಚೇರಿಯ ಪ್ರಬಾರ ತಹಶೀಲ್ದಾರ್ ಮಧುಸೂದನ್ ಹಾಗೂ ಶನಿವಾರಸಂತೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ತಮ್ಮಯ್ಯಾಚಾರ್ ಅವರುಗಳಿಗೆ ಅಧಿಸೂಚನೆ ಪತ್ರವನ್ನು ಸಲ್ಲಿಸಿದ್ದಾರೆ.
ಈ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ)ಯ ಅಧ್ಯಕ್ಷ ಒ.ವಿ. ಫ್ರಾನ್ಸಿಸ್ ಡಿಸೋಜ, ವೇದಿಕೆಯ ಎನ್.ಡಿ. ಆನಂದ್, ರಮೇಶ್, ರಾಜಣ್ಣ, ಹರೀಶ್, ಪ್ರವೀಣ್, ಲೂಯಿಸ್, ರಂಗಸ್ವಾಮಿ ಹಾಗೂ ಇತರರು ಪಾಲ್ಗೊಂಡಿದ್ದರು.ಶನಿವಾರಸಂತೆ, ಮಾ. 20: ಶನಿವಾರಸಂತೆ ಗ್ರಾ. ಪಂಚಾಯಿತಿಯು ಬೇಜವಾಬ್ದಾರಿಯಿಂದ ಅನೇಕ ವರ್ಷಗಳಿಂದ ಇಲ್ಲಿನ ಸರಕಾರಿ ಆಸ್ಪತ್ರೆ, ಶಾಲಾ - ಕಾಲೇಜು ಹಾಗೂ ಹೊಳೆಯ ಪಕ್ಕದಲ್ಲಿ ಪಟ್ಟಣದ ಕಸವನ್ನು ಸುರಿದು ಪರಿಸರ ಹಾಳು ಮಾಡಿದೆ ಎಂದು ಆರೋಪಿಸಿ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸಾರ್ವಜನಿಕರು ಮತ್ತು ಶಾಲಾ - ಕಾಲೇಜು ವಿದ್ಯಾರ್ಥಿಗಳು ಜಾಥಾ ನಡೆಸಿ ಕಂದಾಯ ಇಲಾಖೆ ಮುಂಭಾಗ ಧರಣಿ ನಡೆಸಿದ ಹೋರಾಟಕ್ಕೆ ಜಯ ಲಭಿಸಿದೆ.

ಈ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ)ಯ ಅಧ್ಯಕ್ಷ ಒ.ವಿ. ಫ್ರಾನ್ಸಿಸ್ ಡಿಸೋಜ, ವೇದಿಕೆಯ ಎನ್.ಡಿ. ಆನಂದ್, ರಮೇಶ್, ರಾಜಣ್ಣ, ಹರೀಶ್, ಪ್ರವೀಣ್, ಲೂಯಿಸ್, ರಂಗಸ್ವಾಮಿ ಹಾಗೂ ಇತರರು ಪಾಲ್ಗೊಂಡಿದ್ದರು.