ಮಡಿಕೇರಿ, ಮಾ. 19: ಸಪ್ತತೀರ್ಥ ಕ್ಷೇತ್ರಗಳಲ್ಲಿ ಮುಖ್ಯವಾಗಿರುವ ಜೀವನದಿ ಕೊಡಗಿನ ಕುಲಮಾತೆ ಎಂಬ ಪ್ರಖ್ಯಾತಿಯ ಕಾವೇರಿ ಉಗಮ ಸ್ಥಳ ತಲಕಾವೇರಿ ಹಾಗೂ ದಕ್ಷಿಣ ಕಾಶಿ ಎಂಬ ಹೆಗ್ಗಳಿಕೆಯ ಭಾಗಮಂಡಲವನ್ನು ವಿಶ್ವದರ್ಜೆಯಲ್ಲಿ ಅಭಿವೃದ್ಧಿಗೊಳಿಸಲಾಗುವದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ತಿಳಿಸಿದ್ದಾರೆ.ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಚಿವರು; ಕೊಡಗಿನ ಜನತೆಯ ಭಾವನೆ ಗೌರವಿಸುವ ದಿಸೆಯಲ್ಲಿ ತಲಕಾವೇರಿ - ಭಾಗಮಂಡಲ ಕ್ಷೇತ್ರವನ್ನು ವಿಶ್ವದರ್ಜೆಯಲ್ಲಿ ಅಭಿವೃದ್ಧಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಗಡಪತ್ರದಲ್ಲಿ ವಿಶೇಷ ಒತ್ತು ನೀಡಿರುವದಾಗಿ ಸ್ಪಷ್ಟಪಡಿಸಿದರು. ಈ ದಿಸೆಯಲ್ಲಿ ಮುಂಗಡ ಪತ್ರದಲ್ಲಿ ರಾಜ್ಯದ 16 ಮುಖ್ಯ ಸ್ಥಳಗಳನ್ನು ವಿಶ್ವದರ್ಜೆ ಅಭಿವೃದ್ಧಿ ಪಟ್ಟಿಯಲ್ಲಿ ಗುರುತಿಸಿದ್ದು, ಆ ಪೈಕಿ ಕೊಡಗಿನ ತಲಕಾವೇರಿ - ಭಾಗಮಂಡಲಕ್ಕೆ ಪ್ರಾಶಸ್ತ್ಯ ನೀಡಲಾಗಿದೆ ಎಂದು ವಿವರಣೆ ನೀಡಿದರು.

ರೈತರಿಗೆ ಬರ ಪರಿಹಾರ: ಈಗಾಗಲೇ ಬರ ಹಾಗೂ ಪ್ರಾಕೃತಿಕ ತೊಂದರೆಗಳಿಂದ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರ ಒದಗಿಸಲಾಗುತ್ತಿದ್ದು, ಕೊಡಗು ಜಿಲ್ಲೆಯ ಸರಿ ಸುಮಾರು 3689 ಮಂದಿಗೆ ರೂ.1.39 ಕೋಟಿಯಷ್ಟು ಹಣವನ್ನು ನೇರವಾಗಿ ಸಂಬಂಧಪಟ್ಟ ವರ ಬ್ಯಾಂಕ್ ಖಾತೆಗಳಿಗೆ ಸರಕಾರ ಜಮೆಗೊಳಿಸಿರುವದಾಗಿ ಸಚಿವರು ಮಾಹಿತಿ ನೀಡಿದರು.

ಅಧಿಕಾರಿಯ ತೆರವು: ಕೊಡಗು ಜಿಲ್ಲೆಯಲ್ಲಿ ಬರದ ಛಾಯೆಯೊಂದಿಗೆ ಕುಡಿಯುವ ನೀರಿಗೆ ಆದ್ಯತೆ ಮೇರೆಗೆ ಗಮನ ಹರಿಸಲು ನಿರ್ದೇಶಿಸಿದ್ದರೂ; ಸ್ಪಂದಿಸದೆ ಬೇಜವಾಬ್ದಾರೆ ತೋರುತ್ತಿದ್ದ ನೀರಾವರಿ ಇಲಾಖೆಯ ಅಧಿಕಾರಿ ಶಶಿಧರ್

(ಮೊದಲ ಪುಟದಿಂದ) ಎಂಬವರನ್ನು ಹುದ್ದೆಯಿಂದ ತೆರವುಗೊಳಿಸಿ; ಬದಲಿ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಇತರರಿಗೆ ಎಚ್ಚರಿಕೆ: ರಾಜ್ಯ ಸರಕಾರವು ಜನತೆಯ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದು; ಸಮಸ್ಯೆಗಳಿಗೆ ಸ್ಪಂದಿಸದೆ ಕರ್ತವ್ಯ ನಿರ್ಲಕ್ಷ್ಯ ತೋರಿದರೆ ಅಂತಹ ಅಧಿಕಾರಿಗಳಿಗೆ ಜಿಲ್ಲೆಯಿಂದ ‘ಗೇಟ್‍ಪಾಸ್’ ನೀಡುವದಾಗಿ ಇದೇ ಸಂದರ್ಭ ಸಚಿವ ಸೀತಾರಾಂ ಎಚ್ಚರಿಕೆ ನೀಡಿದರು. ಇನ್ನು ಒಂದೆರಡು ತಿಂಗಳು ಕೊಡಗಿನ ಜನತೆ ಶುದ್ಧ ಕುಡಿಯುವ ನೀರು ಕೇಳಲಿದ್ದು; ಮಳೆಗಾಲದಲ್ಲಿ ‘ನಿಮ್ಮನ್ನ ಯಾರು ನೀರು ಕೇಳುತ್ತಾರೆ?’ ಎಂದು ಸಚಿವರು ಅಧಿಕಾರಿಗಳಿಗೆ ಮರು ಪ್ರಶ್ನೆ ಹಾಕಿದರು.

ಹಗರಣದ ಪರಿಶೀಲನೆ: ಮಡಿಕೇರಿಯ ರಾಜಾಸೀಟ್‍ನಲ್ಲಿ ಕಳೆದ ಎರಡು ವರ್ಷಗಳಿಂದ ಫಲಪುಷ್ಟ ಪ್ರದರ್ಶನ ಏರ್ಪಡಿಸದೆ ಸಂಬಂಧಿಸಿದ ತೋಟಗಾರಿಕಾ ಅಧಿಕಾರಿಗಳು ಭಾರೀ ಹಣ ದುರುಪಯೋಗ ಮಾಡಿರುವ ಆರೋಪ ಕುರಿತು; ತಾವು ಪರಿಶೀಲಿಸುತ್ತಿರುವದಾಗಿಯೂ ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿದರು. ಈ ಬಗ್ಗೆ ಈಗಾಗಲೇ ತೋಟಗಾರಿಕಾ ಸಚಿವ ಎಸ್. ಮಲ್ಲಿಕಾರ್ಜುನ್ ಬಳಿ ಪ್ರಸ್ತಾಪಿಸಿದಾಗ; ಹಣ ಬಿಡುಗಡೆಗೊಳಿಸಿಲ್ಲವೆಂದು ತಿಳಿಸಿದ್ದಾಗಿ ನುಡಿದ ಸಚಿವರು; ಆ ಬಗ್ಗೆ ಸಮಗ್ರ ಪರಿಶೀಲಿಸಲಾಗುವದು ಎಂದರು.

ಒಟ್ಟಿನಲ್ಲಿ ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ತಾವು ಪ್ರಾಮಾಣಿಕ ಪ್ರಯತ್ನ ನಡೆಸುವೆ ಎಂದು ಘೋಷಿಸಿದ ಸಚಿವರು, ಸಾರ್ವಜನಿಕರು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಸೇರಿದಂತೆ ಜಿಲ್ಲಾಡಳಿತದಿಂದ ಸಲ್ಲಿಸಲಾಗುವ ಬೇಕು - ಬೇಡಿಕೆಗಳನ್ನು ಸಕಾಲದಲ್ಲಿ ಪೂರೈಸಿಕೊಡಲು ತಾವು ಶ್ರಮಿಸುವದಾಗಿ ಭರವಸೆ ನೀಡಿದರು.

(ಮೊದಲ ಪುಟದಿಂದ) ಎಂಬವರನ್ನು ಹುದ್ದೆಯಿಂದ ತೆರವುಗೊಳಿಸಿ; ಬದಲಿ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇತರರಿಗೆ ಎಚ್ಚರಿಕೆ: ರಾಜ್ಯ ಸರಕಾರವು ಜನತೆಯ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದು; ಸಮಸ್ಯೆಗಳಿಗೆ ಸ್ಪಂದಿಸದೆ ಕರ್ತವ್ಯ ನಿರ್ಲಕ್ಷ್ಯ ತೋರಿದರೆ ಅಂತಹ ಅಧಿಕಾರಿಗಳಿಗೆ ಜಿಲ್ಲೆಯಿಂದ ‘ಗೇಟ್‍ಪಾಸ್’ ನೀಡುವದಾಗಿ ಇದೇ ಸಂದರ್ಭ ಸಚಿವ ಸೀತಾರಾಂ ಎಚ್ಚರಿಕೆ ನೀಡಿದರು. ಇನ್ನು ಒಂದೆರಡು ತಿಂಗಳು ಕೊಡಗಿನ ಜನತೆ ಶುದ್ಧ ಕುಡಿಯುವ ನೀರು ಕೇಳಲಿದ್ದು; ಮಳೆಗಾಲದಲ್ಲಿ ‘ನಿಮ್ಮನ್ನ ಯಾರು ನೀರು ಕೇಳುತ್ತಾರೆ?’ ಎಂದು ಸಚಿವರು ಅಧಿಕಾರಿಗಳಿಗೆ ಮರು ಪ್ರಶ್ನೆ ಹಾಕಿದರು.