ಗುಡ್ಡೆಹೊಸೂರು,ಮಾ. 19: ಇಲ್ಲಿಗೆ ಸಮೀಪದ ಕಾನ್‍ಬೈಲ್ ಗ್ರಾಮದಲ್ಲಿ ಕಾಫಿ ಫಸಲಿಗೆ ಸಾವಯವಗೊಬ್ಬರ ಬಳಕೆ ಬಗ್ಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಅಲ್ಲಿನ ಕಾಫಿ ಬೆಳೆಗಾರ ಸಿ.ಪಿ.ತಿಮ್ಮಯ್ಯ ಅವರ ತೋಟದಲ್ಲಿ ನವಭಾರತ್ ಸಂಸ್ಥೆ ವತಿಯಿಂದ ಸಮಾರಂಭ ಏರ್ಪಡಿಸಲಾಗಿತ್ತು. ರಾಸಾಯನಿಕ ಗೊಬ್ಬರ ಬಳಸುವದರಿಂದ ಭೂಮಿಯು ಬಂಜರು ಬೀಳುವದರ ಮೂಲಕ ಹಂತ ಹಂತವಾಗಿ ಇಳುವರಿ ಕಡಿಮೆಯಾಗುವದಾಗಿ ಈ ಸಂದರ್ಭ ತಿಮ್ಮಯ್ಯ ತಿಳಿಸಿದರು. ಸಂಸ್ಥೆಯ ವ್ಯವಸ್ಥಾಪಕ ಶಿವರಾಜು ಮಾತನಾಡಿ ಸಾವಯವ ಗೊಬ್ಬರದ ಪ್ರಯೋಜನ ಮತ್ತು ಕಾಫಿ ತೋಟಗಳಿಗೆ ಬಳಸುವ ಕ್ರಮದ ಬಗ್ಗೆ ವಿವರಿಸಿದರು. ಕೃಷಿ ಅಧಿಕಾರಿ ಸಮಗ್ರ ಪೋಷಕಾಂಶಗಳ ಬಗ್ಗೆ ವಿವರಿಸಿದರು. ಸಂಸ್ಥೆಯ ವ್ಯವಸ್ಥಾಪಕ ಜ್ಞಾನಮೂರ್ತಿ ಮಾತನಾಡಿ ಸಾವಯವ ಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಹೆಚ್ಚುವದರ ಜೊತೆಗೆ ಹೆಚ್ಚು ಆದಾಯ ಪಡೆಯಬಹುದು ಎಂಬದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿಗಳಾದ ಮೋಹನ್ ಕುಮಾರ್ ಎಂ.ಕೆ, ಹೇಮಂತ್‍ಕುಮಾರ್, ಮಲ್ಲಿಕಾರ್ಜುನ, ಯೋಗನಂದಯಾದವ, ಮತ್ತು ಗ್ರಾಮ ಪಂ.ಅಧ್ಯಕ್ಷ ಕಾರ್ಯಪ್ಪ, ಸದಸ್ಯರಾದ ಚಂದ್ರಶೇಖರ್, ಶಶಿಕಾಂತ, ಅರುಣ್‍ಕುಮಾರ್, ಹರೀಶ್ ಮುಂತಾದವರು ಹಾಜರಿದ್ದರು. ಕೃಷಿ ಅಧಿಕಾರಿ ಸೋಮಶೇಖರ್ ಕಾರ್ಯಕ್ರಮದಲ್ಲಿ ಹಾಜರಿದ್ದು ಮಾತನಾಡಿದರು.