ವೀರಾಜಪೇಟೆ, ಮಾ. 16: ಅಮ್ಮತ್ತಿಯ ನಿತ್ಯ ಚೈತನ್ಯ ಮಡಪುರ ಮುತ್ತಪ್ಪ ದೇವಸ್ಥಾನದ ವತಿಯಿಂದ ತಾ:18 ಹಾಗೂ ತಾ;19ರಂದು ಮುತ್ತಪ್ಪ ತೆರೆ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎನ್.ಎಸ್.ಪ್ರಶಾಂತ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಶಾಂತ್ ಅವರು ತಾ.18 ರಂದು ಗಣಪತಿ ಹೋಮ, ಬೆಳಿಗ್ಗೆ 10.30 ಗಂಟೆಗೆ ಆರ್.ಎಂ.ಸಿ ಅಧ್ಯಕ್ಷ ಸುವಿನ್ ಗಣಪತಿ ಹಾಗೂ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ಧ್ವಜಾರೋಹಣ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅಪರಾಹ್ನ 3.30 ಗಂಟೆಗೆ ಮುತ್ತಪ್ಪ ಮಲೆ ಇಳಿಯುವದು, 5-30ರಿಂದ 6 ಗಂಟೆಯವರೆಗೆ ದೀಪಾರಾಧನೆ, ನಂತರ ಮುತ್ತಪ್ಪ ವೆಳ್ಳಾಟಂ,ಶಾಸ್ತಪ್ಪ ವೆಳ್ಳಾಟಂ, ಕಂಡ ಕರ್ಣನ ವೆಳ್ಳಾಟಂ, ರಾತ್ರಿ 9 ಗಂಟೆಗೆ ಅನ್ನದಾನ, ನಂತರ 9.45 ಗಂಟೆಗೆ ಮೊದಲ ಕಲಶ ದೇವಾಲಯಕ್ಕೆ ಆಗಮನ, ರಾತ್ರಿ 11 ಗಂಟೆಗೆ ವಾದ್ಯಮೇಳದೊಂದಿಗೆ ವಸೂರಿಮಾಲ ಸ್ನಾನಕ್ಕೆ ಹೊರಡುವದು, ರಾತ್ರಿ 12.30 ಗಂಟೆಗೆ ವಿಷ್ಣುಮೂರ್ತಿ ವೆಳ್ಳಾಟಂ ಜರುಗಲಿದೆ. ರಾತ್ರಿ 7.30ರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಶಾಸಕ ಕೆ.ಜಿ.ಬೋಪಯ್ಯ ಅವರು ಆಗಮಿಸಲಿದ್ದಾರೆ ಎಂದರು.

ಸಮಿತಿಯ ಉಪಾಧ್ಯಕ್ಷ ವಿ.ಎನ್. ಪ್ರಸನ್ನ ಮಾತನಾಡಿ ತಾ. 19ರಂದು ಪ್ರಾತ:ಕಾಲ 3 ಗಂಟೆಗೆ ಗುಳಿಗನ ತೆರೆ, ಕಂಡಕರ್ಣನ ತೆರೆ, ಮುತ್ತಪ್ಪ ತಿರುವಪ್ಪನ ತೆರೆ, ಶಾಸ್ತಪ್ಪ ತೆರೆ, ಪೊಟ್ಟನ್ ತೆರೆ, ವಸೂರಿಮಾಲ ತೆರೆ. ಮಧ್ಯಾಹ್ನ 12ಗಂಟೆಗೆ ವಿಷ್ಣುಮೂರ್ತಿ ತೆರೆ ಹಾಗೂ ಅನ್ನದಾನ ಕಾರ್ಯಕ್ರಮದೊಂದಿಗೆ ಉತ್ಸವ ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ರಾಧಾಕೃಷ್ಣ ಉಪಸ್ಥಿತರಿದ್ದರು.