ಸುಂಟಿಕೊಪ್ಪ, ಮಾ. 10: ನಾಕೂರು ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‍ನ ಸದಸ್ಯನಾಗಿದ್ದ ಯೂಸೂಫ್ ಅವರ ಆಕಾಲಿಕ ಮರಣಕ್ಕೆ ಫ್ರೆಂಡ್ಸ್ ಯೂತ್ ಕ್ಲಬ್‍ನ ಆಡಳಿತ ಮಂಡಳಿ ಸಭೆ ನಡೆಸಿ ಸಂತಾಪ ವ್ಯಕ್ತಪಡಿಸಿದರು.

ನಾಕೂರು ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‍ನ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಕೆ.ಎಸ್. ವಿನೋದ್ ನೇತೃತ್ವದಲ್ಲಿ ಸಂತಾಪ ಸೂಚನಾ ಸಭೆ ನಡೆಸಲಾಯಿತು. ಇತ್ತೀಚೆಗೆ ಹರದೂರು ಮುತ್ತಿನ ತೋಟದ ಬಳಿ ಟ್ರ್ಯಾಕ್ಟರ್ ಚಾಲಿಸುತ್ತಿದ್ದ ಸಂದರ್ಭ ಯೂಸೂಫ್ ವಾಹನದ ನಿಯಂತ್ರಣ ತಪ್ಪಿ ಸಾವಿಗೀಡಾಗಿದ್ದರು. ಇವರೊಂದಿಗೆ ಕಾರ್ಮಿಕ ಅಣ್ಣಾಮಲೈ ಕೂಡಾ ಸಾವನ್ನಪ್ಪಿದ್ದು, ಸಂತಾಪ ಸೂಚಿಸಲಾಯಿತು.

ಈ ಸಂದರ್ಭ ಫ್ರೆಂಡ್ಸ್ ಯೂತ್ ಕ್ಲಬ್‍ನ ಉಪಾಧ್ಯಕ್ಷ ಬಿ.ಎ. ವಸಂತ, ಸುರೇಶ್, ಪ್ರಧಾನ ಕಾರ್ಯದರ್ಶಿ ಎಂ.ಕೆ. ಕುಂಞಕೃಷ್ಣ, ಸಹ ಕಾರ್ಯದರ್ಶಿ ಪಿ.ಎಸ್. ಅನಿಲ್, ಖಜಾಂಚಿ ಕೆ.ಐ. ಮಂಜುನಾಥ್, ಕ್ರೀಡಾ ಕಾರ್ಯದರ್ಶಿ ಅಶೋಕ್, ಸಾಂಸ್ಕøತಿಕ ಕಾರ್ಯದರ್ಶಿ ಆರ್. ಪ್ರಕಾಶ್, ಸ್ಥಾಪಕ ಅಧ್ಯಕ್ಷ ಕೆ.ಪಿ. ವಸಂತ, ಗೌರವಾಧ್ಯಕ್ಷ ಕೆ.ಜೆ. ಜಗದೀಶ್, ಪಿ.ಟಿ. ಪೌಲಸ್, ಸದಸ್ಯರುಗಳಾದ ಕೆ.ಎಸ್. ಮೊಹಮದ್, ಪಿ.ಎಸ್. ಅಜಿತ್‍ಕುಮಾರ್, ಎಂ.ಎಂ. ಶಂಕರ ನಾರಾಯಣ, ಪಿ.ಎಸ್. ಮಣಿಕಂಠ, ಮತ್ತಿತರರು ಉಪಸ್ಥಿತರಿದ್ದರು.