ಶನಿವಾರಸಂತೆ, ಮಾ. 9: ವಿದ್ಯಾರ್ಥಿಗಳಿಗೆ ಪಾಠ ಪ್ರವಚನದೊಂದಿಗೆ ಸಾಹಿತ್ಯ ಮತ್ತು ಜಾನಪದ ಸಂಸ್ಕೃತಿಯನ್ನು ಪರಿಚಯಿಸುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರು ವದು ಸಂತಸದಾಯಕವಾಗಿದೆ ಎಂದು ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎನ್. ಸಂದೀಪ್ ಅಭಿಪ್ರಾಯಪಟ್ಟರು.

ಸಮೀಪದ ಹಂಡ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆಯಡಿ ಆಯೋಜಿಸಲಾಗಿದ್ದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಾಸನ ಜಿಲ್ಲೆಯ, ಬೇಲೂರು ತಾಲೂಕಿನ ರಾಜಿಗೆರೆ ಶಿವಣ್ಣ ಮತ್ತು ತಂಡದವರು ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು.

ಕಲಾವಿದರಾದ ಶೇಖರ್ ತಬಲ ನುಡಿಸಿದರೆ, ಮಂಜಯ್ಯ ಹಾರ್ಮೋನಿಯಂ ಬಾರಿಸಿದರು. ಶಿವಮ್ಮ, ದೇವಯ್ಯ ರಂಗಗೀತೆ ಹಾಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ, ಮುಖ್ಯಶಿಕ್ಷಕಿ ಹೆಚ್.ಕೆ. ಸುಶೀಲಾ, ಶಿಕ್ಷಕರಾದ ಶೇಖರ್, ನಾಗರಾಜ್, ಪ್ರಕಾಶ್ಚಂದ್ರ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಚಂದ್ರಮತಿ, ಸದಸ್ಯರಾದ ಮಂಜುನಾಥ್, ಯಮುನಾ, ಲೀಲಾವತಿ, ರತ್ನಾ, ಸರಿತಾ ಉಪಸ್ಥಿತರಿದ್ದರು.