ಶ್ರೀಮಂಗಲ, ಮಾ. 9: ಭಾರತೀಯ ಕಿಸಾನ್ ಸಂಘದ ವೀರಾಜಪೇಟೆ ತಾಲೂಕು ಅಧ್ಯಕ್ಷರಾಗಿ ನಾಲ್ಕೇರಿ ಗ್ರಾಮದ ಮುಕ್ಕಾಟೀರ ಪ್ರವೀಣ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಪೊನ್ನಂಪೇಟೆಯ ನಿರೀಕ್ಷಣಾ ಮಂದಿರದಲ್ಲಿ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ವೀರಾಜಪೇಟೆ ತಾಲೂಕಿನ ಪ್ರಮುಖರ ಸಭೆಯಲ್ಲಿ ಪ್ರವೀಣ್‍ರವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರುಗಳಾಗಿ ಸಿ.ಡಿ. ಮಾದಪ್ಪ, ನಾಚಪ್ಪ, ಸುರೇಶ್ ಮಾಯಮುಡಿ, ಪ್ರಧಾನ ಕಾರ್ಯದರ್ಶಿಯಾಗಿ ನೂರೇರ ಮನೋಜ್, ಸಹ ಕಾರ್ಯದರ್ಶಿಗಳಾಗಿ ಆಶಾ ಪ್ರಕಾಶ್, ಕೌಶಿಕ್ ದೇವಯ್ಯ, ಅಯ್ಯಪ್ಪ, ಥಾಮಸ್, ಮಹಿಳಾ ಪ್ರಮುಖರಾಗಿ ಶೈಲಾ ಸುಬ್ರಮಣಿ, ರತಿ ಅಚ್ಚಪ್ಪ, ಎಂ. ಕವಿತಾ. ಯುವ ಪ್ರಮುಖರಾಗಿ ದೇಯಂಡ ರತನ್ ಬೋಪಣ್ಣ ಹಾಗೂ ಸದಸ್ಯರಾಗಿ ಚೋಡುಮಾಡ ವಿಕ್ರಮ್, ದಿನೇಶ್ ತಿತಿಮತಿ, ಬೋಪಣ್ಣ, ಸ್ವರ್ಣ, ಸಂಪತ್, ಕಾಳಯ್ಯ, ಕಾಂಡೆರ ಗಯಾ ದೇವಯ್ಯ ದತ್ತಾತ್ರೇಯ ಮತ್ತು ಎಂ. ಸಂಪತ್ ಅವರುಗಳನ್ನು ಆಯ್ಕೆ ಮಾಡಲಾಯಿತು.

ಇದಕ್ಕೂ ಮೊದಲು ಮಾತನಾಡಿದ ಜಿಲ್ಲಾ ಬಿ.ಜೆ.ಪಿ ಮಾಜಿ ಅಧ್ಯಕ್ಷ ಮಾಚಿಮಾಡ ರವಿಂದ್ರ 1974ರಲ್ಲಿ ದತ್ತೋಪಂಥ ಟೇಂಗಡಿ ಅವರಿಂದ ಸ್ಥಾಪನೆಯಾದ ಕಿಸಾನ್ ಸಂಘವು ದೇಶದ ಮೂಲೆ ಮೂಲೆಯಲ್ಲಿ ರೈತರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.

ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ರಾಜೀವ್ ಬೋಪಯ್ಯ ಮಾತನಾಡಿ ಸಂಘವು ರಾಷ್ಟ್ರ ವ್ಯಾಪ್ತಿ ರಾಜಕೀಯ ರಹಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಸಂಘಟನೆಯಲ್ಲಿ ಎಲ್ಲಾ ರೈತರು ಸದಸ್ಯತ್ವವನ್ನು ಪಡೆದುಕೊಳ್ಳಬಹುದು. 3 ತಾಲೂಕುಗಳ ಸಮಿತಿ ರಚನೆಯ ನಂತರ ಹೋಬಳಿ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವದಾಗಿ ತಿಳಿಸಿದರು.

ಜಿಲ್ಲೆಯ ಜಲ್ವಂತ ಸಮಸ್ಯೆಗಳಾದ ಆನೆ-ಮಾನವ ಸಂಘರ್ಷ, ಕಂದಾಯ ಇಲಾಖೆಯ ದೂರುಗಳು, ವಿದ್ಯುತ್ ಸಮಸ್ಯೆ, ಭತ್ತಕ್ಕೆ ಬೆಂಬಲ ಬೆಲೆ ಮತ್ತು ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆಯ ಸಮಸ್ಯೆ, ಜಿಲ್ಲೆಗೆ ಮಾರಕವಾಗುವ ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಚರ್ಚಿಸಲಾಯಿತು.