ಗೋಣಿಕೊಪ್ಪಲು, ಮಾ. 9: ಇಲ್ಲಿನ ಕಾವೇರಿ ಕಾಲೇಜು ವಿದ್ಯಾರ್ಥಿನಿ ಹೆಚ್.ಎಸ್. ಸುಪ್ರಿಯ ದಕ್ಷಿಣ ಭಾರತ ವಲಯ ಮಟ್ಟದ ಮಹಿಳಾ ಫುಟ್‍ಬಾಲ್ ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವನ್ನು ಪ್ರತಿನಿಧಿಸಿದ್ದಾರೆ.

ಇವರು ಬಿಟ್ಟಂಗಾಲ ಗ್ರಾಮದ ಸಣ್ಣೇಗೌಡ ಮತ್ತು ಜಯಂತಿ ದಂಪತಿಗಳ ಪುತ್ರಿ. ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಅವರ ಮಾರ್ಗದರ್ಶನದಲ್ಲಿ ದೈಹಿಕ ನಿರ್ದೇಶಕರಾದ ಡಾ. ದೇಚಮ್ಮ ಹಾಗೂ ಎಂ.ಟಿ. ಸಂತೋಷ್ ತರಬೇತಿ ನೀಡಿದ್ದಾರೆ.