ಮಡಿಕೇರಿ, ಮಾ. 3: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 2015-16 (ಜನವರಿ 1 ಮತ್ತು ಡಿಸೆಂಬರ್ 31)ನೇ ಮತ್ತು 2016-17 (ಜನವರಿ 1 ಮತ್ತು ಡಿಸೆಂಬರ್ 31)ನೇ ಸಾಲಿನ ಪುಸ್ತಕ ಪ್ರಶಸ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಕಾಡೆಮಿ ವತಿಯಿಂದ ಇದುವರೆಗೆ ಪುಸ್ತಕ ಪ್ರಶಸ್ತಿ ಸಿಗದವರು ಹಾಗೂ ಕೊಡವ ಭಾಷಾ ಹಾಗೂ ಕೊಡಗಿಗೆ ಸಂಬಂಧಪಟ್ಟ ಪುಸ್ತಕಗಳು ಪ್ರಕಟಗೊಂಡಿದ್ದಲ್ಲಿ ಅಂತಹ ಪುಸ್ತಕಗಳ ಲೇಖಕರುಗಳು ತಮ್ಮ ಸಂಪೂರ್ಣ ವಿವರ, ವ್ಯಕ್ತಿ ಪರಿಚಯ ಹಾಗೂ ಪುಸ್ತಕಗಳ ತಲಾ 3 ಪ್ರತಿಯನ್ನು 2017ರ ತಾ. 5 ರೊಳಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ ಕಚೇರಿಗೆ ತಲಪುವಂತೆ ಕಳುಹಿಸಬೇಕು. ಆಯ್ಕೆ ಸಮಿತಿ ಪರಿಶೀಲಿಸಿ ಸೂಕ್ತವಾದ ಕೃತಿಗಳನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುವದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ತಿಳಿಸಿದ್ದಾರೆ.