ಮಡಿಕೇರಿ, ಮಾ. 3: ದೇಶದ ಪ್ರಮುಖ ಐದು ರಾಜ್ಯಗಳನ್ನು ಒಳಗೊಂಡಂತೆ ಕರ್ನಾಟಕದ 20 ಸಾವಿರ ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿ, ಕೇಂದ್ರ ಸರಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ಈ ಪೈಕಿ ಕೊಡಗಿನ 27 ಗ್ರಾಮಗಳು ಸೇರ್ಪಡೆಗೊಂಡಿವೆ. ಕೇಂದ್ರದ ಈ ಕರಡು ಅಧಿಸೂಚನೆ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕರ್ನಾಟಕ ಸರಕಾರ ಹಾಗೂ ಸಾರ್ವಜನಿಕರಿಗೆ 60 ದಿನಗಳ ಕಾಲಾವಕಾಶ ನೀಡಲಾಗಿದೆ.

ರಾಜ್ಯ ಸಂಪುಟದ ಅನುಮೋದ ನೆಯೊಂದಿಗೆ ಈಗಾಗಲೇ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ, ಕರ್ನಾಟಕ ವನ್ಯಧಾಮ ಪರಿಸರ ಅರಣ್ಯ ಇಲಾಖೆಯಿಂದ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕೊಡಗಿನ ಪುಷ್ಪಗಿರಿ, ಬ್ರಹ್ಮಗಿರಿ ಹಾಗೂ ತಲಕಾವೇರಿ ವಲಯಗಳ 27 ಗ್ರಾಮಗಳನ್ನು ಸೂಕ್ಷ್ಮ ಪರಿಸರ ವನ್ಯಧಾಮ ಪ್ರದೇಶವೆಂದು ಹೆಸರಿಸಿ, 1 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಾ ಚಟುವಟಿಕೆ ನಿರ್ಬಂಧಿಸಲು ಕೋರಿ ಶಿಫಾರಸು ಸಲ್ಲಿಸಲಾಗಿದೆ.

ಈ ಪೈಕಿ ಪುಷ್ಪಗಿರಿ ವನ್ಯಧಾಮ ಅರಣ್ಯ ವಲಯದ ಗ್ರಾಮಗಳಾದ ಕುಮಾರಳ್ಳಿ, ಕೊತ್ನಳ್ಳಿ, ಬಾಳುಗೋಡು, ಕಾಲೂರು, ಗಾಳಿಬೀಡು, ಸೂರ್ಲಬ್ಬಿ, ಹಮ್ಮಿಯಾಲ ವ್ಯಾಪ್ತಿಯನ್ನು ಸೂಕ್ಷ್ಮ ಪರಿಸರ

(ಮೊದಲ ಪುಟದಿಂದ) ಪ್ರದೇಶಗಳೆಂದು ಕರಡು ಅಧಿಸೂಚನೆಯಲ್ಲಿ ಸೇರ್ಪಡೆ ಗೊಳಿಸಲಾಗಿದೆ.

ಇನ್ನು ಜಿಲ್ಲೆಯ ಬ್ರಹ್ಮಗಿರಿ ಪರಿಸರ ವನ್ಯಧಾಮ ಅರಣ್ಯ ವಲಯದ ಗ್ರಾಮಗಳಾದ ಆರ್ಜಿ, ನಾಂಗಾಲ, ರುದ್ರಗುಪ್ಪೆ, ಬಾಡಗ, ಕುಟ್ಟಂದಿ, ಬೇಗೂರು, ಹೈಸೊಡ್ಲೂರು, ಬಾಡಗರಕೇರಿ, ಪರಕಟಗೇರಿ, ತೆರಾಲು, ವೆಸ್ಟ್ ನೆಮ್ಮಲೆ, ಕುರ್ಚಿ, ಮಂಚಳ್ಳಿ, ಕುಟ್ಟ ಪ್ರದೇಶಗಳನ್ನು ಹೆಸರಿಸಲಾಗಿದೆ.

ಕೊಡಗಿನ ಪವಿತ್ರ ತೀರ್ಥ ಕ್ಷೇತ್ರ ಹಾಗೂ ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿ ಅರಣ್ಯ ಪರಿಸರ ವನ್ಯಧಾಮ ವಲಯದಲ್ಲಿ ಸೂಕ್ಷ್ಮಪ್ರದೇಶಗಳೆಂದು ಭಾಗಮಂಡಲ, ತಣ್ಣಿಮಾನಿ, ಚೇರಂಗಾಲ, ಸಣ್ಣಪುಲಿಕೋಟು, ಅಯ್ಯಂಗೇರಿ ಮತ್ತು ಪೇರೂರು ವ್ಯಾಪ್ತಿಯನ್ನು ಸೇರ್ಪಡೆಗೊಳಿಸಲಾಗಿದೆ.

1 ಕಿ.ಮೀ.ವರೆಗೆ ನಿರ್ಬಂಧ

ಕರ್ನಾಟಕ ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆಯಿಂದ, ಕೇಂದ್ರ ಪರಿಸರ ಅರಣ್ಯ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಈಗಾಗಲೇ ಸಲ್ಲಿಕೆಯಾಗಿರುವ ಪ್ರಸ್ತಾವನೆಯಲ್ಲಿ ಮೇಲ್ಕಂಡ ಗ್ರಾಮಗಳ ವ್ಯಾಪ್ತಿಗೆ ಒಳಪಟ್ಟಂತೆ 1 ಕಿ.ಮೀ. ತನಕ ಎಲ್ಲಾ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲು ಕೋರಿದ್ದು, ಆ ಮೇರೆಗೆ ಕೇಂದ್ರ ಕರಡು ಅಧಿಸೂಚನೆ ಪ್ರಕಟಿಸಿದ್ದಾಗಿದೆ ಎಂದು ಗೊತ್ತಾಗಿದೆ.

ನಿರ್ಬಂಧಿತ ಚಟುವಟಿಕೆ

ಮುಖ್ಯವಾಗಿ ಪ್ಲಾಸ್ಟಿಕ್ ಚೀಲಗಳು, ಲ್ಯಾಮಿನೇಟ್‍ಗಳು, ಪ್ಲಾಸ್ಟಿಕ್ ಒಳಗೊಂಡ ಯಾವದೇ ವಸ್ತುಗಳ ಬಳಕೆ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಿದೆ.

ಈ ಪ್ರದೇಶದೊಳಗೆ 1 ಕಿ.ಮೀ. ವ್ಯಾಪ್ತಿಯಲ್ಲಿ ಯಾವದೇ ರೆಸಾರ್ಟ್, ಹೊಟೇಲ್, ವಾಣಿಜ್ಯ ಚಟುವಟಿಕೆ ನಿರ್ಬಂಧಿಸಿದ್ದು, 1 ಕಿ.ಮೀ. ಹೊರಗೆ ಪ್ರವಾಸೋದ್ಯಮ ನಿಬಂಧನೆಗಳಿಗೆ ಒಳಪಟ್ಟು ವ್ಯವಹರಿಸಲು ಅವಕಾಶವಿದೆ.

ಅವಕಾಶಗಳು

ಸೂಕ್ಷ್ಮ ಪರಿಸರ ತಾಣದಲ್ಲಿರುವ ಗ್ರಾಮವಾಸಿಗಳ ವಾಸದ ಮನೆ, ಗುಡಿ ಕೈಗಾರಿಕೆ, ದನ - ಕರುಗಳ ಕೊಟ್ಟಿಗೆ ನಿರ್ಮಾಣ ಇತ್ಯಾದಿಗಳಿಗೆ ಈ ನಿರ್ಬಂಧ ಅನ್ವಯಿಸದು.

ಮರ ಕಡಿಯಲು ತೊಡಕು

ಸೂಕ್ಷ್ಮ ಪ್ರದೇಶದಲ್ಲಿರುವ ಸರಕಾರಿ ಅಥವಾ ಖಾಸಗಿ ಜಮೀನುಗಳಲ್ಲಿ ಯಾವದೇ ಮರ - ಗಿಡಗಳನ್ನು ಕಡಿಯಲು ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ ಮರಗಳನ್ನು ಕಡಿಯಬೇಕಾದರೆ ಕರ್ನಾಟಕ ರಾಜ್ಯ ಸರಕಾರದ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಕಡ್ಡಾಯವಾಗಿದೆ. ಕೃಷಿ ಹಾಗೂ ನಿತ್ಯ ಬಳಕೆಗೆ ಗ್ರಾಮವಾಸಿಗಳು ಅಂತರ್ಜಲ ಮೂಲ ಬಳಸಿಕೊಳ್ಳಲು ಕೂಡ ಅವಕಾಶವಿದೆ. ಜಲಮಾಲಿನ್ಯಕ್ಕೆ ಇಲ್ಲಿ ನಿರ್ಬಂಧಿಸಲಾಗಿದೆ.

ಕಾವೇರಿ ವನ್ಯಧಾಮ

ಕೇಂದ್ರಕ್ಕೆ ಕರ್ನಾಟಕದಿಂದ ಸಲ್ಲಿಸಿರುವ ಪ್ರಸ್ತಾವನೆಯಂತೆ, ಕಾವೇರಿ ವನ್ಯಧಾಮದ ಪರಿಸರ ಸೂಕ್ಷ್ಮ ವಲಯಗಳು ಸೇರಿದಂತೆ ಕೊಡಗಿನ ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಜಾರಿಗೊಳಿಸಲು 2.4.2014ರ ಸರ್ವೋಚ್ಚ ನ್ಯಾಯಾಲಯ ಆದೇಶ ಪಾಲನೆಯ ಅನಿವಾರ್ಯತೆಯಿಂದ ಸಂಪುಟ ಉಪಸಮಿತಿ ಕೂಡ ಅನುಮೋದಿಸಿದೆ.

ಕರ್ನಾಟಕ ರಾಜ್ಯ ಪ್ರದಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಉಪ ಸಂಪುಟ ಸಮಿತಿ ಶಿಫಾರಸು ಪಡೆದು ವಿಸ್ತøತವಾದ ಮಾರ್ಪಾಡು ವರದಿ ಸಲ್ಲಿಸಿದ್ದಾಗಿದೆ. ಈ ಪ್ರಕಾರ ಹಿಂದೆ 100 ಮೀ. ವ್ಯಾಪ್ತಿಗೆ ಸೀಮಿತವಿದ್ದ ಪ್ರದೇಶವನ್ನು 1 ಕಿ.ಮೀ.ಗೆ ವಿಸ್ತಾರಗೊಳಿಸಿ, ಸೂಕ್ಷ್ಮ ಪ್ರದೇಶಕ್ಕೆ ಮರು ಸೇರ್ಪಡೆ ಮಾಡಲಾಗಿದೆ.

ಎಚ್ಚರಿಕೆ ಗಂಟೆ

ಒಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಕೇಂದ್ರ ಸರಕಾರದ ಪ್ರಸ್ತಾವಿತ ಯೋಜನೆಗೆ ರಾಜ್ಯ ಸಂಪುಟ ಅನುಮೋದಿಸಿ ಸಲ್ಲಿಸಿರುವ ‘ಸೂಕ್ಷ್ಮ ಪರಿಸರ ಪ್ರದೇಶ' ಕರಡು ಪ್ರಸ್ತಾವನೆಗೆ ಆಕ್ಷೇಪಿಸಲು ಕೊನೆಯ 60 ದಿನಗಳ ಕಾಲಾವಕಾಶವಿದೆ. ಕೊಡಗಿನ ರಾಜಕೀಯ ಪಕ್ಷಗಳು, ಸಂಘ- ಸಂಸ್ಥೆಗಳು, ಸಾರ್ವಜನಿಕರು ಎಚ್ಚೆತ್ತುಕೊಳ್ಳಲು ಇದೊಂದು ಕರೆಗಂಟೆಯೇ ಆಗಿದೆ ಎನ್ನಬಹುದು.(ಮೊದಲ ಪುಟದಿಂದ) 1993ರಲ್ಲಿ ಜಿಲ್ಲಾ ಮಟ್ಟದಲ್ಲೂ ಪ್ರಶಸ್ತಿಗೆ ಭಾಜನರಾದ ನಂತರ ಆಡಳಿತ ಜವಾಬ್ದಾರಿಯಿಂದಾಗಿ ಬರಹದಲ್ಲಿ ತಮ್ಮನ್ನು ಕಡಿಮೆ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದರು.

ಪಿ.ಟಿ.ಐ. ನ ಜಿಲ್ಲಾ ವರದಿಗಾರ ರಾಗಿಯೂ ಕಾರ್ಯನಿರ್ವಹಿಸುತ್ತಿರುವ ಇವರು ದಸರಾ ಸಾಂಸ್ಕøತಿಕ ಸಮಿತಿಯ ಅಧ್ಯಕ್ಷರಾಗಿ, 9 ದಿನಗಳ ಕಾರ್ಯಕ್ರಮವನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪತ್ರಿಕಾ ಭವನ ಟ್ರಸ್ಟ್‍ನ ಟ್ರಸ್ಟಿಯಾಗಿ, ಶ್ರೀ ವಿಜಯವಿನಾಯಕ ದೇವಾಲಯದ ಟ್ರಸ್ಟಿಯಾಗಿಯೂ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕೊಡಗು ಜಿಲ್ಲಾ ಚೇಂಬರ್‍ನ ಅಧ್ಯಕ್ಷರಾಗಿದ್ದ ಸಂದರ್ಭ ಸುಮಾರು 2500 ಮಂದಿ ನೂತನ ಸದಸ್ಯರ ಸೇರ್ಪಡೆಯೊಂದಿಗೆ 2012ರಲ್ಲಿ ಪ್ರಪ್ರಥಮ ಬಾರಿಗೆ ಬಂಡವಾಳ ಹೂಡಿಕೆದಾರರ ಸಭೆ ಆಯೋಜಿಸಿ ಜಿಲ್ಲೆಯಲ್ಲಿ ಹಲವು ಯೋಜನೆಗಳು ಬರುವಂತೆ ಶ್ರಮವಹಿಸಿದ್ದರು. ಸುಗಮ ಸಂಗೀತದಲ್ಲೂ ಆಸಕ್ತಿ ಹೊಂದಿ ಸುಮಾರು 150 ಕ್ಕೂ ಹೆಚ್ಚು ಕಡೆಗಳಲ್ಲಿ ಕಾರ್ಯಕ್ರಮ ನೀಡಿರುವ ಚಿದ್ವಿಲಾಸ್ ಅವರಿಗೆ 2007ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಜಿಲ್ಲಾ ಚೇಂಬರ್, ಮಡಿಕೇರಿ ಲಯನ್ಸ್ ಕ್ಲಬ್ -ಜೆಸಿಐ ಸಂಸ್ಥೆ ಹಾಗೂ ಇತರ ಸಂಸ್ಥೆಗಳು ಇವರನ್ನು ಗೌರವಿಸಿವೆ. ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ, ಸ್ನೇಹ ಸಂಗಮ ಕಲಾವಿದರ ಬಳಗದ ಸಂಚಾಲಕರಾಗಿ, 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕøತಿಕ ಸಮಿತಿ ಸಂಚಾಲಕರಾಗಿ, ಮಡಿಕೇರಿ ಎಫ್.ಎಂ.ಕೆ.ಎಂ. ಕಾರ್ಯಪ್ಪ ಕಾಲೇಜಿನ Iಕಿಂಅ ಸದಸ್ಯರಾಗಿ, ಜಿಲ್ಲಾ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ದಸರಾ ಸಮಿತಿಯ ಗೌರವಾಧ್ಯಕ್ಷರಾಗಿದ್ದಾರೆ.