ಮಡಿಕೇರಿ, ಮಾ. 3: ಮೂರ್ನಾಡು ಸಮೀಪದ ಕಿಗ್ಗಾಲುವಿನ ಶ್ರೀ ವಿಷ್ಣಪ್ಪ ದೇವಸ್ಥಾನದ 4ನೇ ವಾರ್ಷಿಕ ಪುನರ್ ಪ್ರತಿಷ್ಠಾಪನಾ ಮಹಾಪೂಜೆಯು ತಾ. 5 ರಂದು ನಡೆಯಲಿದೆ. ಈ ಪ್ರಯುಕ್ತ ಅಂದು ಬೆಳಿಗ್ಗೆ 8ಕ್ಕೆ ಗಣಪತಿ ಹೋಮ, 9 ರಿಂದ ಶುದ್ಧ ಕಲಶ, 10ಕ್ಕೆ ಸತ್ಯನಾರಾಯಣ ಪೂಜೆ, 12 ರಿಂದ ಅಲಂಕಾರ- ಮಹಾಪೂಜೆ, 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 6 ರಿಂದ ಸಂದ್ಯಾ ಪೂಜೆಗಳು ನಡೆಯಲಿವೆ ಎಂದು ದೇಗುಲದ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.