ಮಡಿಕೇರಿ, ಮಾ. 2: ಗ್ರಾಮೀಣ ಕುಡಿಯುವ ನೀರು ಯೋಜನೆಗೆ 2016-17ನೇ ಸಾಲಿಗೆ ರೂ. 6.40 ಕೋಟಿ ಅನುದಾನ ಬಿಡುಗಡೆ ಗೊಂಡಿದ್ದು, 15 ದಿವಸಗಳೊಳಗೆ ಕಾಮಗಾರಿಗಳನ್ನು ಪೂರೈಸುವಂತೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅಭಿಯಂತರರಿಗೆ ಸೂಚನೆ ನೀಡಿದ್ದಾರೆ.ಪೊನ್ನಂಪೇಟೆ ತಾ.ಪಂ. ಸಾಮಥ್ರ್ಯ ಸೌಧದಲ್ಲಿ ವೀರಾಜಪೇಟೆ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಯೋಜನೆ ಅನುಷ್ಠಾನ ಕುರಿತು ಏರ್ಪಡಿಸಲಾಗಿದ್ದ ಸಭೆಯಲ್ಲಿ ಅವರು ಈ ವಿಚಾರ ತಿಳಿಸಿದರು. 2016-17ನೇ ಸಾಲಿಗೆ ರೂ. 1962 ಲಕ್ಷ ಮೊತ್ತದ ಕ್ರಿಯಾಯೋಜನೆಗೆ ಅನುಮೋದ&divound; Éಯಾಗಿದ್ದು, ಈ ಸಂಬಂಧ ರೂ. 422.29 ಲಕ್ಷ ಮಾತ್ರ ಬಿಡುಗಡೆ ಯಾಗಿತ್ತು. ಉಳಿಕೆ ಮೊತ್ತ ರೂ. 1320 ಲಕ್ಷ ಬಿಡುಗಡೆಗೊಳಿಸುವಂತೆ ಜಿ.ಪಂ. ನಿಯೋಗ ಮುಖ್ಯಮಂತ್ರಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಇದೀಗ ಸರಕಾರದಿಂದ ರೂ. 6.40 ಕೋಟಿ ಬಿಡುಗಡೆಗೊಂಡಿದೆ. ಹಳೆ ಕಾಮಗಾರಿಗಳನ್ನು ಪೂರ್ಣಗೊಳಿಸಿದರೆ ಮಾತ್ರ ಹೊಸ ಕ್ರಿಯಾಯೋಜನೆಗೆ ಅನುದಾನ ಸಿಗಲಿದ್ದು, ಈ ಹಿನ್ನೆಲೆಯಲ್ಲಿ ಕೂಡಲೇ ಟೆಂಡರ್ ಕರೆದು 15 ದಿವಸಗಳೊಳಗೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣ ಗೊಳಿಸುವಂತೆ ಅಭಿಯಂತರರಿಗೆ ಸೂಚನೆ ನೀಡಿದರು.

ವೀರಾಜಪೇಟೆ ತಾಲೂಕಿಗೆ ಸಂಬಂಧಪಟ್ಟಂತೆ ಎನ್.ಆರ್.ಡಿ.ಡಬ್ಲ್ಯೂ.ಪಿ.ಯಲ್ಲಿ 232, ಟಾಸ್ಕ್‍ಫೋರ್ರ್ಸ್‍ನಲ್ಲಿ 76 ಕಾಮಗಾರಿಗಳ ಪರಿಶೀಲನೆಯನ್ನು ಜಿಲ್ಲಾ ಪಂಚಾಯತ್ ಸದಸ್ಯರುವಾರು ಕೈಗೆತ್ತಿಕೊಳ್ಳಲಾಯಿತು. ಕೆಲವು ಸದಸ್ಯರು ಕಾಮಗಾರಿ ಸ್ಥಳದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರಿಂದ ಸಂಬಂಧಿಸಿದ ಸೆಕ್ಟನ್ ಆಫೀಸರ್‍ಗಳೊಂದಿಗೆ ಕಾಮಗಾರಿ ಗಳನ್ನು ಬೌತಿಕವಾಗಿ ಪರಿಶೀಲಿಸಲು ಕೋರಿದ ಮೇರೆಗೆ ದಿನಾಂಕ ನಿಗದಿಪಡಿಸಿ ಕಾಮಗಾರಿ ಪರಿಶೀಲಿಸಲು ಅಧ್ಯಕ್ಷರು ಸೂಚಿಸಿದರು.

ಬಾವಿಗಳಿಗೆ ಸಂಬಂಧಿಸಿದಂತೆ ಹಲವಾರು ಮನವಿಗಳು ಸ್ವೀಕೃತ ಗೊಂಡಿದ್ದು, ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕಾಗಿ ಜಿಲ್ಲಾ ಪಂಚಾಯತ್ ಸದಸ್ಯರು ಕೋರಿದರು. ಅಧ್ಯಕ್ಷರು ಪ್ರತಿಕ್ರಿಯಿಸಿ, ಕಾರ್ಯಪಾಲಕ ಅಭಿಯಂತರರು ರೂ. 350 ಲಕ್ಷ ಮೊತ್ತ ಮಾತ್ರ ಪಾವತಿಗೆ ಬಾಕಿ ಇರುವದಾಗಿ ಹಲವಾರು ಸಂದರ್ಭಗಳಲ್ಲಿ ಸಭೆಯಲ್ಲಿ ಮಾಹಿತಿ ನೀಡಿದ್ದರಿಂದ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು ಕುಡಿಯುವ ನೀರಿನ ಅನುದಾನ ಬಿಡುಗಡೆಗೆ ಯಾವದೇ ತೊಂದರೆ ಯಿಲ್ಲದಂತೆ ಅವಕಾಶ ಮಾಡಿ ಕೊಡುವದಾಗಿ ತಿಳಿಸಿರುವ ಮೇರೆಗೆ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಬಾವಿಗಳನ್ನು ನೀಡುವ ಬಗ್ಗೆ ಸಭೆಯಲ್ಲಿ ಪ್ರಸ್ತಾವನೆ ಮಾಡಿರುವದಾಗಿ ತಿಳಿಸಿದರು. ಈಗಾಗಲೇ ಬಾಕಿ ಇರುವ ರೂ.1320 ಲಕ್ಷ ಬಿಲ್ಲುಗಳ ಪಾವತಿಗೆ ಕ್ರಮವಹಿಸಿದ ನಂತರ ಕುಡಿಯುವ ನೀರಿಗೆ ತೆರೆದ ಬಾವಿ ನಿರ್ಮಾಣಕ್ಕೆ ಕ್ರಮ ವಹಿಸಲು ಸಾಧ್ಯವಾಗುವದು ಎಂದು ತಿಳಿಸಿದರು.

ಸಭೆಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಶಿ ಸುಬ್ರಮಣಿ, ವಿಜು ಸುಬ್ರಮಣಿ ಮತ್ತು ವೀರಾಜಪೇಟೆ ತಾಲೂಕಿನ ಎಲ್ಲಾ ಜಿಲ್ಲಾ ಪಂಚಾಯತ್ ಸದಸ್ಯರು ಭಾಗವಹಿಸಿದ್ದರು.