ಮಡಿಕೇರಿ, ಫೆ. 1: ಕಡಗದಾಳು ಶ್ರೀ ಬೊಟ್ಲಪ್ಪ ಯುವ ಸಂಘದ ಬೆಳ್ಳಿ ಮಹೋತ್ಸವದ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ ಹಾಗೂ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟ ನಡೆಯಿತು.

ಸಭಾ ಕಾರ್ಯಕ್ರಮವನ್ನು ಕಡಗದಾಳು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಾದೇಟಿರ ತಿಮ್ಮಯ್ಯ ಉದ್ಘಾಟಿಸಿದರು. ಅತಿಥಿಗಳಾಗಿ ಕಡಗದಾಳು ಶಾಲೆಯ ಹಿರಿಯ ಶಿಕ್ಷಕರಾದ ನೀಲಮ್ಮ ಮತ್ತು ಗಂಗಮ್ಮ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಕೆ. ಬಾಲನ್ ಹಾಗೂ ಉಪಾಧ್ಯಕ್ಷೆ ಬಿ.ಟಿ. ಪುಷ್ಪ ಹಾಜರಿದ್ದರು.ಗುಡ್ಡಗಾಡು ಓಟಕ್ಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಾದೇಟಿರ ತಿಮ್ಮಯ್ಯ ಚಾಲನೆ ನೀಡಿದರು. ನಂತರ ವಿದ್ಯಾರ್ಥಿಗಳಿಗೆ, ಪುರುಷರಿಗೆ, ಮಹಿಳೆಯರಿಗೆ ಹಾಗೂ ವಯಸ್ಕರಿಗೆ ವಿವಿಧ ರೀತಿಯ ಗ್ರಾಮೀಣ ಕ್ರೀಡೆಗಳು ನಡೆಯಿತು.

ಸಂಜೆ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟಕ್ಕೆ ಗ್ರಾಮದ ಹಿರಿಯರಾದ ಕೆ.ಪಿ. ಮೊಣ್ಣಪ್ಪ ಚಾಲನೆ ನೀಡಿದರು. ವಾಲಿಬಾಲ್ ಪಂದ್ಯಾಟದ ಪ್ರಥಮ ಬಹುಮಾನವನ್ನು ಕಡಗದಾಳು ಕಾರ್ನರ್ ಫ್ರೆಂಡ್ಸ್ ‘ಸಿ’ ಹಾಗೂ ದ್ವಿತೀಯ ಬಹುಮಾನವನ್ನು ಕಾರ್ನರ್ ಫ್ರೆಂಡ್ಸ್ ‘ಎ’ ತಂಡದವರು ಪಡೆದುಕೊಂಡರು. ಎರಡು ಬಹುಮಾನವನ್ನು ಮಡಿಕೇರಿಯ ಕೆ.ಎಂ.ಬಿ. ಬ್ಯಾಟರೀಸ್ ಮತ್ತು ಕೆ.ಎಂ.ಬಿ. ಗಣೇಶ್ ಹಾಗೂ ಸಿರೀಸ್ ಮೈಸೂರು ಪ್ರಾಯೋಜಿಸಿದ್ದರು.