*ಗೋಣಿಕೊಪ್ಪಲು, ಮೇ 9: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸನಾತನ ಹಿಂದೂ ಯುವಕ ಸಂಘ ಏರ್ಪಡಿಸಿದ್ದ ಎರಡನೇ ವರ್ಷದ ರಾಜ್ಯಮಟ್ಟದ ಸೂಪರ್ -7 ಮುಕ್ತ ಪುರುಷರ ಕಾಲ್ಚೆಂಡು ಹಿಂದೂ ಕಪ್‍ನ್ನು ಮಿಲನ್ ಬಾಯ್ಸ್ ತಂಡ ಮುಡಿಗೇರಿಸಿಕೊಂಡಿದೆ.

ಮಾತೃಭೂಮಿ ಟೈಗರ್ಸ್ ತಂಡದ ವಿರುದ್ದ 2-0 ಗೋಲುಗಳಿಂದ ಜಯಗಳಿಸಿತು. ಸಂಘದ ವಾರ್ಷಿಕೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಪಂದ್ಯಾಟದಲ್ಲಿ ಸುಮಾರು 25 ತಂಡಗಳು ಭಾಗವಹಿಸಿತ್ತು. ಕ್ರೀಡಾಕೂಟವನ್ನು ಗ್ರಾ.ಪಂ.ಸದಸ್ಯ ಸುರೇಶ್ ರೈ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ವಿಜು ಸುಬ್ರಮಣಿ, ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ, ಗ್ರಾ.ಪಂ. ಸದಸ್ಯ ಪ್ರಮೋದ್ ಗಣಪತಿ, ಜೆ.ಕೆ. ಸೋಮಣ್ಣ, ಮುರುಗ, ರಾಮಕೃಷ್ಣ, ಗ್ರಾ.ಪಂ.ಮಾಜಿ ಸದಸ್ಯ ರಾಜೇಶ್, ಸಂಘದ ಅಧ್ಯಕ್ಷ ಡಿ.ಎ.ವಿನೋದ್, ಪ್ರಧಾನ ಕಾರ್ಯದರ್ಶಿ ಸತೀಶ್ ಸಿಂಗಿ, ಖಜಾಂಜಿ ಅನಿಲ್, ಚಕ್ಕೇರ ಮನು ಹಾಗೂ ರಾಮು ಉಪಸ್ಥತರಿದ್ದರು.