ಮಡಿಕೇರಿ, ಏ. 30: ಹಾಕಿ ಇಂಡಿಯಾ ವತಿಯಿಂದ ಮಣಿಪುರದ ಇಂಪಾಲ್‍ನಲ್ಲಿ ಮೇ 7ರಿಂದ ನಡೆಯಲಿರುವ 6ನೇ ರಾಷ್ಟ್ರೀಯ ಸಬ್ ಜೂನಿಯರ್ ಹಾಕಿ ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಹಾಕಿ ಕೂರ್ಗ್ ತಂಡ ಮೇ 2ರಂದು ಬೆಂಗಳೂರಿನಿಂದ ಪ್ರಯಾಣ ಬೆಳೆಸಲಿದೆ.

ನಗರದ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ತಂಡದ ಅಂತಿಮ ಸಿದ್ಧತೆ ನಡೆದಿದ್ದು, ತಂಡಕ್ಕೆ ಶುಭ ಕೋರಲಾಯಿತು. ತಂಡದ ಕೋಚ್ ಆಗಿ ಮೂಕಚಂಡ ನಾಚಪ್ಪ, ವ್ಯವಸ್ಥಾಪಕರಾಗಿ ಬುಟ್ಟಿಯಂಡ ಚಂಗಪ್ಪ ತೆರಳಲಿದ್ದಾರೆ. ಹಾಕಿಕೂರ್ಗ್‍ನ ಪದಾಧಿಕಾರಿಗಳಾದ ಪಳಂಗಂಡ ಲವ, ತೀತಿರ ಸೋಮಣ್ಣ ಹಾಜರಿದ್ದರು.