ಮಡಿಕೇರಿ, ನ.30 :ಹೋಂ ಸ್ಟೇಗಳ ನೋಂದಣಿಗೆ ಕೊನೆಯ ದಿನಾಂಕವನ್ನು ಘೋಷಣೆ ಮಾಡಿದ ಬಗ್ಗೆ ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕÀರನ್ನು ಸಂಪರ್ಕಿಸಿ, ಇನ್ನಷ್ಟು ಕಾಲಾವಕಾಶ ನೀಡುವಂತೆ ಕೋರಿಕೊಂಡ ಮೇರೆಗೆ ನೋಂದಣಿಯ ಅವಧಿಯನ್ನು ಮತ್ತಷ್ಟು ವಿಸ್ತರಿಸುವ ಭರವಸೆ ದೊರೆತಿದೆ ಎಂದು ಕೂರ್ಗ್ ಹೋಂ ಸ್ಟೇ ಅಸೋಸಿಯೇಷನ್‍ನ ಮಾಜಿ ಅಧ್ಯಕ್ಷ ಕರುಂಬಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ.1ಕ್ಕೆ ನೋಂದಣಿಯ ಅಂತಿಮ ದಿನಾಂಕವೆಂದು ಈ ಹಿಂದೆ ಪ್ರಕಟಿಸಲಾತ್ತು.
ನೂತನ ಪ್ರವಾಸೋದ್ಯಮ ನೀತಿಯಿಂದಾಗಿ ಹೋಂಸ್ಟೇಗಳ ನೋಂದಣಿಯ ಪ್ರಕ್ರಿಯೆ ಸರಳೀಕರಣಗೊಂಡಿದ್ದು, ಆಯಾ ಪ್ರದೇಶದ ಪೆÇಲೀಸ್ ಠಾಣೆಗಳಲ್ಲೇ ನಿರಾಕ್ಷೇಪಣಾ ಪತ್ರವನ್ನು ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಅಸೊಸಿಯೇಷನ್‍ನ ಆನ್‍ಲೈನ್ ಮೂಲಕವು ಹೋಂ ಸ್ಟೇಗಳ ನೋಂದಣಿ ಅತ್ಯಂತ ಸುಲಭ ಸಾಧ್ಯವಾಗಿದೆಯೆಂದು ತಿಳಿಸಿದರು. ಈ ಹಿಂದೆ ಹೋಂಸ್ಟೇ ಮಾಲೀಕರು ನಿರಾಕ್ಷೇಪಣಾ ಪತ್ರವನ್ನು ಜಿಲ್ಲಾ ಪೆÀÇಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಪಡೆಯಬೇಕಾಗಿತ್ತು. ಆದರೆ, ಇದೀಗ ಅಸೋಸಿಯೇಷನ್ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಗಳೊಂದಿಗೆ ಚರ್ಚಿಸಿದ ನಂತರ ಸ್ಥಳೀಯ ಪೊಲೀಸ್ ಠಾಣೆÉಗಳಲ್ಲೆ ನಿರಾಕ್ಷೇಪಣಾ
(ಮೊದಲ ಪುಟದಿಂದ) ಪತ್ರ ನೀಡುವಂತೆ ಠಾಣೆಗಳಿಗೆ ಆದೇಶ ನೀಡಿದ್ದಾರೆ ಎಂದರು.
ವಿವಿಧ ಗ್ರಾಮ ಪಂಚಾಯ್ತಿಗಳು ಹೋಂ ಸ್ಟೇಗಳಿಗೆ ತರಾವರಿ ಶುಲ್ಕವನ್ನು ನಿಗದಿ ಮಾಡುತ್ತಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಂಡು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಏಕರೂಪದ ಶುಲ್ಕ ಪಾವತಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ. ಗ್ರಾಮ ಪಂಚಾಯ್ತಿಗಳ ಪಿಡಿಒಗಳಿಗೆ ಈ ಬಗ್ಗೆ ಸೂಚನೆ ನೀಡುವದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಕರುಂಬಯ್ಯ ತಿಳಿಸಿದರು.
ಆನ್‍ಲೈನ್ ಮೂಲಕವು ನೋಂದಣಿ ಪ್ರಕ್ರಿಯೆ ನಡೆಸಬಹುದಾಗಿದ್ದು, ಹೋಂ ಸ್ಟೇ ಮಾಲೀಕರ ಭಾವಚಿತ್ರ, ಹೋಂಸ್ಟೇಯ ಛಾಯಾಚಿತ್ರ, ಆಧಾರ್ ಕಾರ್ಡ್ ಮಾಹಿತಿಯನ್ನು ಲಗತ್ತಿಸಬೇಕಾಗುತ್ತದೆ. ಹೋಂಸ್ಟೇ ನೋಂದಣಿಯ ಬಗ್ಗೆ ಅಸೋಸಿಯೇಷನ್‍ನಲ್ಲಿ ಸದಸ್ಯತ್ವ ಪಡೆದುಕೊಂಡವರಿಗೆ ಸೂಕ್ತ ಮಾಹಿತಿಯನ್ನು ನೀಡುವ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆಯೆಂದು ಅವರು ಹೇಳಿದರು.
ಯಾವದೇ ಹೋಂಸ್ಟೇಗಳನ್ನು 500 ರೂ. ನೀಡಿ ನೋಂದಾವಣೆ ಮಾಡಿಕೊಂಡಲ್ಲಿ ಅದರ ಅವಧಿ 5 ವರ್ಷಗಳದ್ದಾಗಿರುತ್ತದೆ ಎಂದ ಕರುಂಬಯ್ಯ ಪ್ರವಾಸೋದ್ಯಮ ಸಚಿವರಾದ ಪ್ರಿಯಾಂಕ ಖರ್ಗೆ ಅವರನ್ನು ಕೊಡಗು ಜಿಲ್ಲೆಗೆ ಆಹ್ವಾನಿಸಿರುವದಾಗಿ ತಿಳಿಸಿದರು. ಹೋಂಸ್ಟೇಗಳಿರುವ ಜಿಲ್ಲೆಗಳ ಅಸೋಸಿಯೇಷನ್‍ನ ಪದಾಧಿಕಾರಿ ಗಳೊಂದಿಗೆ ಚರ್ಚಿಸಿಯೇ ನೂತನ ಹೋಂ ಸ್ಟೇ ನೀತಿಯನ್ನು ಪ್ರವಾಸೋದ್ಯಮ ಇಲಾಖೆ ರೂಪಿಸಿದೆಯೆಂದು ಅವರು ಸ್ಪಷ್ಟಪಡಿಸಿದರು.
ಪ್ರಮುಖ ಬಿ.ಜಿ.ಅನಂತಶಯನ ಮಾತನಾಡಿ, ಕೆಲವು ಪೊಲೀಸ್ ಠಾಣೆಗಳಲ್ಲಿ ನಿಗದಿತ ದಾಖಲೆಗಳಿಗಿಂತ ಹೆಚ್ಚಿನ ದಾಖಲೆಗಳನ್ನು ಹೋಂಸ್ಟೇ ಮಾಲೀಕರಿಂದ ಕೇಳಲಾಗುತ್ತಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ಸಿ. ಮದನ್ ಸೋಮಣ್ಣ, ಪ್ರಮುಖರಾದ ಅಂಬೆಕಲ್ ನವೀನ್ ಕುಶಾಲಪ್ಪ, ಅನಿತಾ ಸೋಮಣ್ಣ ಹಾಗೂ ವಿನಿತಾ ಕರುಂಬಯ್ಯ ಉಪಸ್ಥಿತರಿದ್ದರು.