ಮಡಿಕೇರಿ, ನ. 30: ಇತ್ತೀಚಿನ ವರ್ಷಗಳಲ್ಲಿ ಸರಕಾರ ಹೋಂಸ್ಟೇ ನಿಯಮಗÀಳನ್ನು ಬದಲಾಯಿಸುತ್ತಲೇ ಬರುತ್ತಿದ್ದು, ಇದರಿಂದ ಹೋಂಸ್ಟೇ ಮಾಲೀಕರುಗಳಲ್ಲಿ ಗೊಂದಲ ಮತ್ತು ಆತಂಕ ಎದುರಾಗಿದೆ ಎಂದು ಆರೋಪಿಸಿರುವ ಕೊಡಗು ಟೂರಿಸಂ ಅಸೋಸಿಯೇಶನ್ ಏಕರೂಪದ ಕಾನೂನು ಜಾರಿಗೆ ಒತ್ತಾಯಿಸಿದೆ.

ಹೋಂಸ್ಟೇಗಳ ನೋಂದಾವಣೆಗೆ ಏಕರೂಪದ ಕಾನೂನನ್ನು ಜಾರಿ ಗೊಳಿಸುವ ವರೆಗೆ ನೋಂದಾವಣೆ ಪ್ರಕ್ರಿಯೆಗೆ ಕಾಲಮಿತಿಯನ್ನು ನಿಗದಿ ಮಾಡಬಾರದು ಮತ್ತು ನಿಬಂಧನೆ ಗಳನ್ನು ಸರಳೀಕರಣಗೊಳಿಸಬೇಕೆಂದು ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್‍ನ ಪ್ರಮುಖರಾದ ಮಾದೇಟಿರ ತಿಮ್ಮಯ್ಯ ಜಿಲ್ಲೆಯಲ್ಲಿ ಇಂದು ಕೃಷಿ ಚಟುವಟಿಕೆ ನೇಪತ್ಯಕ್ಕೆ ಸರಿಯುತ್ತಿರುವದರಿಂದ ಯುವ ಸಮೂಹ ಹೋಂಸ್ಟೇಗಳ ಮೂಲಕ ಉದ್ಯೋಗವನ್ನು ಸೃಷ್ಟಿಸಿ ಕೊಳ್ಳುತ್ತಿದ್ದಾರೆ. ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ರೂಪಿಸದ ರಾಜ್ಯ ಸರಕಾರ ಹೋಂಸ್ಟೇಗಳ ಮೇಲೆ ಹಿಡಿತ ಸಾಧಿಸುತ್ತಿದೆ ಎಂದು ಆರೋಪಿಸಿದರು.

2007 ರಿಂದ ಇಲ್ಲಿಯವರೆಗೆ ಈ ಹಿಂದಿನ ನಿಯಮದಂತೆ ಬಹಳಷ್ಟು ಹೋಂಸ್ಟೇಗಳು ನೋಂದಾವಣೆ ಯಾಗಿದ್ದರೂ ಇದೀಗ ಜಾರಿಗೆ ಬಂದಿರುವ ನಿಯಮದ ಪ್ರಕಾರ ಮತ್ತೆ ನೋಂದಾಯಿಸಿಕೊಳ್ಳಬೇಕೆನ್ನುವದು ಎಷ್ಟು ಸರಿ ಎಂದು ತಿಮ್ಮಯ್ಯ ಪ್ರಶ್ನಿಸಿದರು.

2016 ರಿಂದ 2020 ರ ವರೆಗಿನ ನಿಯಮದ ಪ್ರಕಾರ 6 ತಿಂಗಳ ಹಳೆಯ ನಿರಾಕ್ಷೇಪಣಾ ಪತ್ರ ಬೇಕೆಂದು ಅರ್ಜಿಯಲ್ಲಿ ನಮೂದಿಸಿದ್ದು, ಇದು ಹೋಂಸ್ಟೇ ಮಾಲೀಕರುಗಳಲ್ಲಿ ಗೊಂದಲವನ್ನು ಸೃಷ್ಟಿಸಲಾಗಿದೆ. ಸರಕಾರ ಪ್ರತ್ಯೇಕವಾಗಿ ಕೊಡಗಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಏನನ್ನೂ ನೀಡದಿದ್ದರೂ ಜನರಿಂದಲೇ ಬೆಳವಣಿಗೆಯನ್ನು ಕಂಡ ಪ್ರವಾಸಿ ಕ್ಷೇತ್ರದಲ್ಲಿ ಈ ರೀತಿಯ ತೊಂದರೆ ಗಳನ್ನು ನಿರಂತರವಾಗಿ ನೀಡುತ್ತಿದೆ ಎಂದು ಅವರು ಆರೋಪಿಸಿದರು. ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಸೋಸಿಯೇಷನ್ ಮೂಲಕ ಮನವಿ ಪತ್ರ ಸಲ್ಲಿಸಲಾಗಿದ್ದು, ಗೊಂದಲ ನಿವಾರಣೆಗೆ ಮತ್ತು ಏಕರೂಪದ ಕಾನೂನು ಜಾರಿಗೆ ಸರಕಾರವನ್ನು ಒತ್ತಾಯಿಸಲಾಗಿದೆ ಎಂದು ತಿಮ್ಮಯ್ಯ ತಿಳಿಸಿದರು.

ಮತ್ತೊಬ್ಬ ಪ್ರಮುಖ ಇಬ್ರಾಹಿಂ ಮಾತನಾಡಿ 2007 ರಿಂದ 2016 ರವರೆಗೆ ಹೋಂಸ್ಟೇ ನೋದಾವಣೆಯ ಬಗ್ಗೆ ಸರಕಾರದ ಆದೇಶ 2 ರಿಂದ ಮೂರು ಬಾರಿ ಬದಲಾಗಿದ್ದು, ಇದರಿಂದ ಜಿಲ್ಲೆಯ ಹೋಂಸ್ಟೇ ಕ್ಷೇತ್ರದಲ್ಲಿ ಅತಂತ್ರ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.

ಕಾನೂನು ಸಲಹೆಗಾರರಾದ ಕ್ರಷ್ಣಮೂರ್ತಿ ಮಾತನಾಡಿ, ಸರ್ಕಾರದ ಹೋಂಸ್ಟೇ ನಿಯಮಗಳಲ್ಲಿ ಸ್ಪಷ್ಟತೆ ಇಲ್ಲವೆಂದು ಟೀಕಿಸಿದರು. ಜಿಲ್ಲೆಯಲ್ಲಿ 3 ಸಾವಿರಕ್ಕೂ ಅಧಿಕ ಹೋಂಸ್ಟೇಗಳಿದ್ದು, ಹೋಂಸ್ಟೇ ಮಾಲೀಕರುಗಳೊಂದಿಗೆ ಚರ್ಚಿಸಿ ಕಾನೂನು ರಚಿಸಬೇಕು ಮತ್ತು ನೋಂದಾವಣೆÉಗೆ 3 ತಿಂಗಳ ಕಾಲಾವಕಾಶವನ್ನು ನೀಡಬೇಕೆÀಂದು ಒತ್ತಾಯಿಸಿದರು. ಸರ್ಕಾರ ಏಕ ನಿರ್ಧಾರ ಕೈಗೊಂಡರೆ ಕಾನೂನು ಹೋರಾಟ ನಡೆಸುವದಾಗಿ ಕೃಷ್ಣ ಮೂರ್ತಿ ಎಚ್ಚರಿಕೆ ನೀಡಿದರು.

ಅಸೋಸಿಯೇಷನ್ ಬೆÉೀಡಿಕೆಗಳು

ಈ ಹಿಂದೆ ನೋಂದಾವಣೆಯಾಗಿ ದಾಖಲೆ ಹೊಂದಿರುವ ಹೋಂಸ್ಟೇ ಗಳನ್ನು ಹೊರತು ಪಡಿಸಿ ನೂತವಾಗಿ ನಿರ್ಮಾಣಗೊಂಡಿರುವ ಹೋಂಸ್ಟೇ ಗಳಿಗೆ ಪ್ರಮಾಣ ಪತ್ರ ನೀಡಬೇಕು, ಹೆಚ್ಚಿನ ಹೋಂಸ್ಟೇ ಮಾಲೀಕರು ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಠಾಣೆಗಳಿಂದ ನಿರಾಪೇಕ್ಷಣಾ ಪತ್ರವನ್ನು ಈಗಾಗಲೇ ಪಡೆದುಕೊಂಡಿದ್ದು, ಅದನ್ನು ನÀವೀಕರಿಸುವಂತಾಗಬೇಕು. ಹೋಂಸ್ಟೇಗಳ ನೋಂದಾವಣೆಗೆ ಏಕ ರೂಪದ ಕಾನೂನು ಜಾರಿಯಾಗುವ ವರೆಗೆ ಕಾಲ ಮಿತಿ ನಿಗದಿ ಮಾಡಬಾರದು, ಕೊಡಗು ಜಿಲ್ಲೆಗೆ ಒಬ್ಬ ಖಾಯಂ ಪ್ರವಾಸೋದ್ಯಮ ಅಧಿಕಾರಿ ಯನ್ನು ನೇಮಕ ಮಾಡಬೇಕು, ಹೋಂಸ್ಟೇ ಮಾಲೀಕರುಗಳ ಅಭಿಪ್ರಾಯವನ್ನು ಸಂಗ್ರಹಿಸಬೇಕು, ನೋಂದಾವಣೆಗೆ ಅರ್ಜಿ ಸಲ್ಲಿಸಿದ 20 ದಿನಗಳ ಒಳಗಾಗಿ ಪ್ರಮಾಣ ಪತ್ರ ನೀಡಬೇಕು, ಹೊಂಸ್ಟೇ ಪ್ರದೇಶಕ್ಕೆ ಕುಡಿಯುವ ನೀರು, ರಸ್ತೆ ಮತ್ತು ಸಮರ್ಪಕ ವಿದ್ಯುತ್ ಕಲ್ಪಿಸಬೇಕು, ಹೋಂಸ್ಟೇಗಳು ವಾಣಿಜ್ಯ ವ್ಯವಹಾರವಾಗಿಲ್ಲದೆ ಇರುವದರಿಂದ ಅವುಗಳನ್ನು ಶ್ರೇಣಿ ರೂಪದÀಲ್ಲಿ ವಿಂಗಡಿಸಬಾರದೆಂದು ಅಸೋಸಿಯೇಷನ್ ಪ್ರಮುಖ ಚೆಯ್ಯಂಡ ಸತ್ಯ ಒತ್ತಾಯಿಸಿದರು.

ಗೋಷ್ಠಿಯಲ್ಲಿ ಜಯಾ ಚಿಣ್ಣಪ್ಪ ಉಪಸ್ಥಿತರಿದ್ದರು.