ಮಡಿಕೇರಿ, ಡಿ.20: ಜಿಲ್ಲೆಯಲ್ಲಿ ಅಪರಿಚಿತ ವ್ಯಕ್ತಿಗಳ ಸುಳಿದಾಟ, ಒಂಟಿ ಮಹಿಳೆಯರಿರುವ ಮನೆಯ ಬಾಗಿಲು ಬಡಿಯುವ ಘಟನೆಯೊಂದಿಗೆ ಅಲ್ಲಲ್ಲಿ ಮಕ್ಕಳ ಅಪಹರಣ ಯತ್ನ ನಡೆಯುತ್ತಿದ್ದು, ಇಂದೂ ಕೂಡ ಇಂತಹ ಘಟನೆ ನಡೆದಿದೆ. ಮಡಿಕೇರಿ ಸಮೀಪದ ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಹೆಬ್ಬೆಟ್ಟಗೇರಿ-ನಂದಿಮೊಟ್ಟೆಯಲ್ಲಿ ಈ ಘಟನೆ ನಡೆದಿದೆ.
ಹೆಬ್ಬೆಟ್ಟಗೇರಿಯ ಬಾಲಕಿ ಮಡಿಕೇರಿಯ ಖಾಸಗಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಎಂದಿನಂತೆ ಇಂದು ಬೆಳಿಗ್ಗೆ ಸಹಪಾಠಿಗಳೊಂದಿಗೆ ಶಾಲೆಗೆ ತೆರಳುತ್ತಿದ್ದ ಸಂದರ್ಭ ದಿಢೀರನೆ ಪ್ರತ್ಯಕ್ಷವಾದ ಇಬ್ಬರು ಅಪರಿಚಿತರು ವಿದ್ಯಾರ್ಥಿಯನ್ನು ಹಿಡಿದು ಸಮೀಪದ ತೋಟದೊಳಗೆ ಏಳೆದೊಯ್ದಿದ್ದಾರೆ.
ನಂತರ ತಪ್ಪಿಸಿಕೊಂಡು ಬಂದ ಬಾಲಕಿ ಸಮೀಪದ ಗಣೇಶ್ ಎಂಬವರ ಮನೆಗೆ ಓಡಿ ಹೋಗಿ ವಿಷಯ ತಿಳಿಸಿದ್ದಾಳೆ.