ಕುಶಾಲನಗರ, ಜು. 27 : ಕುಶಾಲನಗರ ರೋಟರಿ ಅಧ್ಯಕ್ಷರು ಹಾಗೂ ಉದ್ಯಮಿ ಚೋಳಂಡ ಎ ಮುದ್ದಪ್ಪ (60) ಹೃದಯಾ ಘಾತದಿಂದ &divound;ಧನರಾಗಿದ್ದಾರೆ. ಬುಧವಾರ ಸಂಜೆ ರೋಟರಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಂದರ್ಭ ಕುಸಿದು ಬಿದ್ದ ಹಿನ್ನಲೆಯಲ್ಲಿ ಸ್ಥಳೀಯ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮೃತಪಟ್ಟಿದ್ದಾರೆ.
ಕುಶಾಲನಗರ ರೋಟರಿ ಸಂಸ್ಥೆಯಲ್ಲಿ ಆದಾಯ ತೆರಿಗೆÉ ಇಲಾಖೆ ಸಹಯೋಗದೊಂದಿಗೆ ಆಘೋಷಿತ ಆದಾಯವನ್ನು ಘೋಷಿಸುವ ಯೋಜನೆಯ ಮಾಹಿತಿಗಳನ್ನು ಸಾರ್ವಜ&divound;ಕರಿಗೆ &divound;ೀಡುವ ಹಿನ್ನಲೆಯಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮುದ್ದಪ್ಪ ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಸಂದರ್ಭ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸುವ ಸಂದರ್ಭ ಮೃತಪಟ್ಟಿರುವುದಾಗಿ ರೋಟರಿ ಸದಸ್ಯರಾದ ಡಾ. ಹರಿ ಶೆಟ್ಟಿ ಮಾಹಿತಿ &divound;ೀಡಿದ್ದಾರೆ.
ಮೃತ ಮುದ್ದಪ್ಪ ಮೂಲತಃ ವಿರಾಜಪೇಟೆ ತಾಲ್ಲೂಕು ಕಡಂಗ ಗ್ರಾಮದವರಾಗಿದ್ದು, ಕುಶಾಲನಗರದಲ್ಲಿ ಕಳೆದ ಮೂರು ದಶಕಗಳಿಂದ ನೆಲೆಸಿದ್ದರು. ಸ್ಥಳೀಯ ಕೊಡವಸಮಾಜ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಚೋಳಂಡ ಮುದ್ದಪ್ಪ ಖಾಸಗಿ ಹಣಕಾಸು ಸಂಸ್ಥೆಯ ಪಾಲುದಾರರು ಹಾಗೂ ಹಲವು ಸಂಘಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮುದ್ದಪ್ಪ ಅವರು ಪತ್ನಿ, ಓರ್ವ ಪುತ್ರ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪುತ್ರ ಮೈಸೂರಿನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು ಪುತ್ರಿ ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಮೃತರ ಅಂತ್ಯ ಕ್ರಿಯೆ ಇಂದು ಕುಶಾಲನಗರದಲ್ಲಿ ನಡೆಯಲಿದೆ.
ಸಂತಾಪ : ಕುಶಾಲನಗರ ರೋಟರಿ ಅಧ್ಯಕ್ಷರಾಗಿದ್ದ ಸಿ.ಎ ಮುದ್ದಪ್ಪ ಅವರ ಸಾವಿಗೆ ಕುಶಾಲನಗರ ರೋಟರಿ ಸೇರಿದಂತೆ ಜಿಲ್ಲೆಯ ವಿವಿಧ ರೋಟರಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ಕೊಡವ ಸಮಾಜ, ಗೌಡಸಮಾಜದ ಪ್ರಮುಖರು ಹಾಗೂ ಪದಾಧಿಕಾರಿಗಳು ಮುದ್ದಪ್ಪ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.