*ಗೋಣಿಕೊಪ್ಪಲು, ಜು. 10: ಗದ್ದೆಯಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹಾಡಹಗಲೇ ಹುಲಿ ಧಾಳಿ ಮಾಡಿ ಹಸು ಸಾವನ್ನಪ್ಪಿದ ಘಟನೆ ಇಲ್ಲಿಗೆ ಸಮೀಪದ ಬಾಳೆಲೆ - ದೇವನೂರು ಗ್ರಾಮದಲ್ಲಿ ನಡೆದಿದೆ.

ಅಲ್ಲಿನ ಆದೇಂಗಡ ಗಪ್ಪು ಅವರ ಗದ್ದೆಯಲ್ಲಿ ಸಂಜೆ ಮೇಯುತ್ತಿದ್ದ ಹಸುವಿನ ಮೇಲೆ ಧಾಳಿ ನಡೆಸಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸಂಜೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಹುಲಿಯನ್ನು ಹಿಡಿಯಲು ಬೋನನ್ನು ಅಳವಡಿಸಿದ್ದಾರೆ.