ಮಡಿಕೇರಿ, ಡಿ. 11: ಮಡಿಕೇರಿ ನಗರ ಗೌಡ ನಾಗರಿಕ ಸಮಿತಿ ವತಿಯಿಂದ ತಾ. 13 ರಂದು ರಾತ್ರಿ ಕೊಡಗು ಗೌಡ ವಿದ್ಯಾಸಂಘದ ಆವರಣದಲ್ಲಿ ಹುತ್ತರಿ ಹಬ್ಬ ಆಚರಿಸಲಾಗುವದು.
ರಾತ್ರಿ 7.05 ಗಂಟೆಗೆ ನೆರೆ ಕಟ್ಟುವದು, 8.05ಕ್ಕೆ ಕದಿರು ತೆಗೆಯುವದು, 9.05ಕ್ಕೆ ಲಘು ಉಪಹಾರ ನಡೆಯಲಿದೆ ಎಂದು ಮಡಿಕೇರಿ ನಗರ ಗೌಡ ನಾಗರಿಕ ಸಮತಿಯ ಕಾರ್ಯದರ್ಶಿ ಪರಿವಾರ ಅಪ್ಪಾಜಿ ಅವರು ತಿಳಿಸಿದ್ದಾರೆ.