ಕುಶಾಲನಗರ, ಆ.12: ಹಾರಂಗಿ ಜಲಾಶಯ ಆವರಣದಲ್ಲಿ ಬೀಡುಬಿಟ್ಟಿರುವ ಅಪರಿಚಿತರ ಶೆಡ್ಅನ್ನು ತೆರವುಗೊಳಿಸಲು ಕಾವೇರಿ ನೀರಾವರಿ ನಿಗಮ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ಇತ್ತೀಚೆಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟಗೊಂಡ ಅಣೆಕಟ್ಟೆ ಅಭದ್ರತೆಯ ವಿಶೇಷ ವರದಿ ಬೆನ್ನಲ್ಲೇ ನಿಗಮದ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಅಣೆಕಟ್ಟೆ ಆವರಣದಿಂದ ಖಾಲಿ ಮಾಡಿಸಿದ್ದಾರೆ.
ಶಕ್ತಿಯಲ್ಲಿ ಬಂದ ವರದಿ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಅಣೆಕಟ್ಟೆ ಉಸ್ತುವಾರಿ ಅಧಿಕಾರಿ ನಾಗರಾಜ್ ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮೀನುಗಾರಿಕಾ ಇಲಾಖೆ ಮೂಲಕ ಜಲಾಶಯದಿಂದ ಮೀನು ಹಿಡಿಯುವ ಗುತ್ತಿಗೆ ಆಧಾರದಲ್ಲಿ ಚಿಕ್ಕಮಗಳೂರಿನ ಗುತ್ತಿಗೆದಾರರ ಕುಟುಂಬ ಜಲಾಶಯದ ಆವರಣದಲ್ಲಿ ನೆಲೆಸಿತ್ತು. ಪ್ರಸಕ್ತ ಭದ್ರತೆ ಗಮನಿಸಿ ತಕ್ಷಣ ದಿಂದಲೇ ಎಲ್ಲರನ್ನೂ ಹೊರಕಳುಹಿಸ ಲಾಗಿದ್ದು ಶೆಡ್ಗಳನ್ನು ತೆರವ Åಗೊಳಿಸಲಾಗಿದೆ ಎಂದು ನಾಗರಾಜ್ ‘ಶಕ್ತಿ’ಗೆ ತಿಳಿಸಿದ್ದಾರೆ.