ಶ್ರೀಮಂಗಲ, ನ. 6: ಬಾಳುಗೋಡಿನಲ್ಲಿ ಕೊಡವ ಸಮಾಜಗಳ ಒಕ್ಕೂಟದ ಆಶ್ರಯದಲ್ಲಿ ಇಲ್ಲಿನ ಸಾಂಸ್ಕøತಿಕ ಕೇಂದ್ರದ ಮೈದಾನದಲ್ಲಿ ಕಳೆದ 4 ದಿನಗಳಿಂದ ಅಂತರ ಕೊಡವ ಸಮಾಜಗಳ ತಂಡಗಳ ನಡುವೆ ನಡೆಯುತ್ತಿರುವ ಹಾಕಿ ಪಂದ್ಯಾವಳಿಯಲ್ಲಿ ಬೆಂಗಳೂರು ಕೊಡವ ಸಮಾಜ ತಂಡ ವಿನ್ನರ್ಸ್ ಪ್ರಶಸ್ತಿ ಗಳಿಸಿದರೆ, ವೀರಾಜಪೇಟೆ ಕೊಡವ ಸಮಾಜ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಡಬೇಕಾಯಿತು.
ಭಾನುವಾರ ನಡೆದ ಫೈನಲ್ ಪಂದÀ್ಯದಲ್ಲಿ ಬೆಂಗಳೂರು ಕೊಡವ ಸಮಾಜ ತಂಡ ವೀರಾಜಪೇಟೆ ಕೊಡವ ಸಮಾಜ ತಂಡವನ್ನು 2-1 ಗೋಲುಗಳಲ್ಲಿ ಪರಾಭವಗೊಳಿಸಿತು. ಉಭಯ ತಂಡಗಳಲ್ಲಿ ಸಮಬಲದ ಹೋರಾಟ ಕಂಡರೂ ಅಂತಿಮವಾಗಿ ಬೆಂಗಳೂರು ತಂಡಕ್ಕೆ ವಿಜಯಲಕ್ಷ್ಮಿ ಒಲಿಯಿತು.
ಬೆಂಗಳೂರು ತಂಡದ ಪರ 16ನೇ ನಿಮಿಷದಲ್ಲಿ ಕುಪ್ಪಂಡ ಸೋಮಯ್ಯ, 35ನೇ ನಿಮಿಷದಲ್ಲಿ ದಾಸಂಡ ಅಚ್ಚಯ್ಯ ಗೋಲು ಗಳಿಸಿದರು.
ವೀರಾಜಪೇಟೆ ತಂಡದ ಪರ 50ನೇ ನಿಮಿಷದಲ್ಲಿ ಕರಿನೆರವಂಡ ಕುಂಞಪ್ಪ ಗೋಲು ದಾಖಲಿಸಿದರು.
ವಿನ್ನರ್ಸ್ ಪ್ರಶಸ್ತಿ ಗಳಿಸಿದ ಬೆಂಗಳೂರು ತಂಡ 30 ಸಾವಿರ ನಗದು ಹಾಗೂ ಟ್ರೋಫಿ, ರನ್ನರ್ಸ್ ಪ್ರಶಸ್ತಿ ಗಳಿಸಿದ ವೀರಾಜಪೇಟೆ ತಂಡ 20 ಸಾವಿರ ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿದೆ.
ಸೆಮಿ ಫೈನಲ್ಸ್‍ನಲ್ಲಿ ಪರಾಭವಗೊಂಡ ಮೈಸೂರು ಹಾಗೂ ಗೋಣಿಕೊಪ್ಪ ಕೊಡವ ಸಮಾಜ ತಂಡಗಳಿಗೆ ತಲಾ 10 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಯಿತು.
ಟ್ರೋಫಿಯನ್ನು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಮಾಜಿ ಸಚಿವ ಮೇರಿಯಂಡ ಸಿ. ನಾಣಯ್ಯ, ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಮಾಜಿ ಅಧ್ಯಕ್ಷ ಮಲ್ಲೆಂಗಡ ದಾದ ಬೆಳ್ಯಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಒಕ್ಕೂಟದ ಆಟೋಟ ಸಮಿತಿ ಅಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ, ಸಂಚಾಲಕ ಬೋಳಿಯಂಗಡ ದಾದು ದೇವಯ್ಯ ಮತ್ತಿತರರು ನೀಡಿದರು.
ಪಂದ್ಯಾವಳಿಯ ತೀರ್ಪುಗಾರ ರಾಗಿ ಅಂಜಪರವಂಡ ಕುಶಾಲಪ್ಪ, ಮಳವಂಡ ಅಯ್ಯಪ್ಪ, ಬೊಳ್ಳಚಂಡ ನಾಣಯ್ಯ, ಕೋಡಿಮಣಿಯಂಡ ಗಣಪತಿ, ಕುಪ್ಪಂಡ ದಿಲನ್, ಮೂಕಚಂಡ ನಾಚಪ್ಪ, ಚೋಯಮಾಡ ಚಂಗಪ್ಪ, ಚೆಯ್ಯಂಡ ಅಪ್ಪಚ್ಚು, ನೆಲ್ಲಮಕ್ಕಡ ಅಪ್ಪಚ್ಚು, ಐನಂಡ ಲಾಲಾ ಐಯಣ್ಣ, ಮೂಳೆರ ಪೂವಯ್ಯ, ಕೊಂಡಿರ ಕೀರ್ತಿ, ಮೇಕಚಂಡ ಕಿಶಾ ಬೋಪಯ್ಯ ಕಾರ್ಯ ನಿರ್ವಹಿಸಿದರು.
ಪಂದ್ಯಾವಳಿಯ ನಿರ್ದೇಶಕರಾಗಿ ಬುಟ್ಟಿಯಂಡ ಚಂಗಪ್ಪ, ವೀಕ್ಷಕ ವಿವರಣೆಗಾರರಾಗಿ ಮಾಳೇಟಿರ ಶ್ರೀನಿವಾಸ್ ಕಾರ್ಯನಿರ್ವಹಿಸಿದರು