ಮಡಿಕೇರಿ, ಜ, 19: ನಾಳೆಯಿಂದ ಫೆ. 26ರವರೆಗೆ ಭುವನೇಶ್ವರ್, ರಾಂಚಿ, ದೆಹಲಿ, ಮುಂಬೈ, ಲಕ್ನೋ ಹಾಗೂ ಚಂಡಿಘಡ್‍ನಲ್ಲಿ ನಡೆಯಲಿರುವ 5ನೇ ಹಾಕಿ ಇಂಡಿಯಾ ಲೀಗ್ ಪಂದ್ಯಾವಳಿಗೆ ಜಿಲ್ಲೆಯ 8 ಮಂದಿ ಆಟಗಾರರು ಹಾಗೂ ಇಬ್ಬರು ತರಬೇತುದಾರರು ಆಯ್ಕೆಯಾಗಿದ್ದಾರೆ.

ಜೇಪಿ ಪಂಜಾಬ್ ವಾರಿಯರ್ಸ್ ತಂಡಕ್ಕೆ ಎಸ್ .ವಿ. ಸುನಿಲ್ ಹಾಗೂ ಅಯ್ಯಪ್ಪ, ದಬಾಂಗ್ ಮುಂಬೈ ತಂಡಕ್ಕೆ ನಿಖಿನ್ ತಿಮ್ಮಯ್ಯ, ಕಳಿಂಗ ಲ್ಯಾಂಸರ್ಸ್ ತಂಡಕ್ಕೆ ಎಸ್.ಕೆ. ಉತ್ತಪ್ಪ ಹಾಗೂ ತರಬೇತುದಾರರಾದ ಡಾ.ಎ.ಬಿ. ಸುಬ್ಬಯ್ಯ, ಬಿ.ಜೆ. ಕಾರ್ಯಪ್ಪ ಅವರುಗಳು ಆಯ್ಕೆಯಾಗಿದ್ದಾರೆ ಎಂದು ಹಾಕಿ ಇಂಡಿಯಾ ಕಾರ್ಯದರ್ಶಿ ಸುಬ್ಬಯ್ಯ ತಿಳಿಸಿದ್ದಾರೆ.