ಗೋಣಿಕೊಪ್ಪಲು, ಡಿ. 6 : ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ನೆಲ್ಲಮಕ್ಕಡ ಲಾಲಿ ಈಶ್ವರಿ ಜ್ಞಾಪಕಾರ್ಥ ಕಾಲೇಜು ಬಾಲಕರ ಹಾಕಿಯಲ್ಲಿ 6 ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದಿವೆ.
ವೀರಾಜಪೇಟೆ ಕಾಲೇಜು ತಂಡವು, ವೀರಾಜಪೇಟೆ ಕಾವೇರಿ ಕಾಲೇಜನ್ನು ಟೈಬ್ರೇಕರ್ನಲ್ಲಿ 7-6 ಗೋಲುಗಳ ಅಂತರದಲ್ಲಿ ಮಣಿಸಿತು. ವೀರಾಜಪೇಟೆ ಪರ 37 ರಲ್ಲಿ ಸಚಿನ್, ಕಾವೇರಿ ಪರ 23 ರಲ್ಲಿ ಮುದ್ದಪ್ಪ ಗೋಲು ಹೊಡೆದರು. ಪಂದ್ಯ 1-1 ಗೋಲುಗಳಿಂದ ಡ್ರಾ ಸಾಧಿಸಿತು. ನಂತರ ನಡೆದ ಟೈಬ್ರೇಕರ್ನಲ್ಲಿ ವೀರಾಜಪೇಟೆ ಜಯ ಸಾಧಿಸಿತು.
ಮೈಸೂರು ಯೂನಿವರ್ಸಿಟಿ ಪೋಸ್ಟ್ ಗ್ರ್ಯಾಜುಯೇಷನ್ ತಂಡವು ಮೂರ್ನಾಡು ತಂಡವನ್ನು 5-1 ಗೋಲುಗಳಿಂದ ಸೋಲಿಸಿತು. ಮೈಸೂರು ಪರ 9 ಹಾಗೂ 34 ರಲ್ಲಿ ಪೊನ್ನಣ್ಣ, 13 ರಲ್ಲಿ ಭರತ್, 21 ರಲ್ಲಿ ಅರುಣ್, ಮೂರ್ನಾಡು ಪರ 39 ರಲ್ಲಿ ಥಾಮ್ಸನ್ ಗೋಲು ಹೊಡೆದರು.
ಮಡಿಕೇರಿ ಎಫ್ಎಂಸಿ ತಂಡವು ಮಂಗಳೂರು ಸೆಮಟ್ ಅಲೋಶಿಯಸ್ ತಂಡವನ್ನು 4-0 ಗೋಲುಗಳಿಂದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಮಡಿಕೇರಿ ಪರ 2 ನೇ ನಿಮಿಷದಲ್ಲಿ ಪ್ರಸನ್ನ, 8 ರಲ್ಲಿ ಸುದೀಪ್, 21 ರಲ್ಲಿ ಆದರ್ಶ್, 30 ರಲ್ಲಿ ಪೆಮ್ಮಯ್ಯ ಗೋಲು ಹೊಡೆದರು.
ವೀರಾಜಪೇಟೆ ಕಾವೇರಿ ಕಾಲೇಜು ತಂಡವು ಮೈಸೂರು ಸೆಂಟ್ ಜೊಸೇಫ್ ತಂಡದ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ವೀರಾಜಪೇಟೆ ಪರ 7 ರಲ್ಲಿ ಪೊನ್ನಣ್ಣ, 23 ಹಾಗೂ 37 ರಲ್ಲಿ ಬೋಪಣ್ಣ, ಜೊಸೇಫ್ ಪರ 12 ನೇ ನಿಮಿಷದಲ್ಲಿ ಸರಣ್ ಗೋಲು ಬಾರಿಸಿದರು.
2 ನೇ ಸುತ್ತಿನಲ್ಲಿ ಸೆಂಟ್ ಅಲೋಶಿಯಸ್ ತಂಡವು ವಿರಾಜಪೇಟೆ ಕಾವೇರಿ ಕಾಲೇಜು ವಿರುದ್ಧ 3-1 ಗೋಲುಗಳಿಂದ ಜಯ ಸಾಧಿಸಿತು. ವೀರಾಜಪೇಟೆ ಪರ 32 ರಲ್ಲಿ ಮುದ್ದಪ್ಪ, ಅಲೋಸಿಯಸ್ ಪರ 11 ರಲ್ಲಿ ಅರ್ಜುನ್, 15 ರಲ್ಲಿ ಬೋಪಣ್ಣ, 32 ರಲ್ಲಿ ಚೆಂಗಪ್ಪ ಗೋಲು ಹೊಡೆದರು.
ಗೋಣಿಕೊಪ್ಪ ಕಾವೇರಿ ಕಾಲೇಜು ತಂಡವು ಮೈಸೂರು ಯೂನಿವರ್ಸಿಟಿ ಪೋಸ್ಟ್ ಗ್ರ್ಯಾಜುಂಳಿಂದ ಸೋಲಿಸಿತು. ಗೋಣಿಕೊಪ್ಪ ಪರ 23 ರಲ್ಲಿ ಶಾನ್, 27 ರಲ್ಲಿ ಅವಿನಾಶ್, 40ರಲ್ಲಿ ಸೋಮಣ್ಣ ಗೋಲು ಹೊಡೆದರು. ಮೈಸೂರು ಪರ 10ರಲ್ಲಿ ಭರತ್, 17 ರಲ್ಲಿ ಪೊನ್ನಣ್ಣ ಗೋಲು ಹೊಡೆದರು.