ಶನಿವಾರಸಂತೆ, ಜು. 21: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಹಂಪಾಪುರದ ಮುಳುಗಡೆ ಜಾಗದ ಹೊಳೆಯ ಬದಿಯಲ್ಲಿ ಸುಮಾರು ರೂ. 40 ಸಾವಿರ ಬೆಲೆ ಬಾಳುವ ಹಸುವೊಂದನ್ನು ಮೇಯಲು ಕಟ್ಟಿದ್ದು ಆ ಹಸುವಿನ ಕಾಲಿಗೆ ಕತ್ತಿಯಿಂದ ಕಡಿದು ಗಾಯ ಪಡಿಸಿದ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಹಂಪಾಪುರದ ಈರಪ್ಪ ಎಂಬವರು ಹೈನುಗಾರಿಕೆಗಾಗಿ ಹಸುವೊಂದನ್ನು ಸಾಕಿದ್ದು, ಆ ಹಸುವನ್ನು ಮೇಯಲು ಹಂಪಾಪುರದ ಮುಳುಗಡೆ ಜಾಗದ ಹೊಳೆಯ ಬದಿಯಲ್ಲಿ ಕಟ್ಟಿದ್ದರು. ಇದನ್ನು ಕಂಡು ಸಿದ್ದರಾಜು ಎಂಬವರು ಕೋಪಗೊಂಡು ಕತ್ತಿಯಿಂದ ಹಸುವಿನ ಹಿಂಭಾಗದ ಎಡಗಾಲಿಗೆ ಕಡಿದು ಗಾಯ ಗೊಳಿಸಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಠಾಣಾ ಹೆಡ್‍ಕಾನ್ಸ್‍ಟೇಬಲ್ ಶ್ರೀನಿವಾಸ್ ಪ್ರಕರಣ ದಾಖಲಿಸಿದ್ದಾರೆ.