ಗೋಣಿಕೊಪ್ಪಲು, ನ. 10: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಿಶೇಷ ಮಹಾ ಸಭೆ ತಾ.8ರಂದು ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ನೆರವೇರಿತು. ಕಾವೇರಿ ಕಾಲೇಜು 2018ಕ್ಕೆ ಸುವರ್ಣ ಸಂಭ್ರಮಕ್ಕೆ ಕಾಲಿಡಲಿದ್ದು, ಇದರ ಪ್ರಯುಕ್ತ ಕಾಲೇಜಿನಲ್ಲಿ ಹಮ್ಮಿಕೊಳ್ಳಬಹುದಾದ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಲಾಯಿತು. ಕಾಲೇಜಿನ ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಬಗ್ಗೆಯೂ ಈ ಸಂದರ್ಭ ಚರ್ಚಿಸಲಾಯಿತು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾವೇರಿ ಕಾಲೇಜು ಪ್ರಾಂಶುಪಾಲ ಪ್ರೊ.ಪಟ್ಟಡ ಪೂವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಜಿತ್ ಅಯ್ಯಪ್ಪ ಪ್ರಾಸ್ತಾವಿಕ ಭಾಷಣ ಮಾಡಿದರು. ಸಂಚಾಲಕಿ ಎಸ್.ಎಂ. ರಜನಿ ವಾರ್ಷಿಕ ವರದಿ ವಾಚಿಸಿದರು.
ಕಾರ್ಯಕ್ರಮದಲ್ಲಿ ಉಪಾಧÀ್ಯಕ್ಷ ಟಿ.ಎಮ್. ದೇವಯ್ಯ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ಪ್ರೊ. ಎಂ.ಬಿ. ಕಾವೇರಪ್ಪ, ಖಜಾಂಚಿ ಮನು ನಂಜಪ್ಪ, ನಿರ್ದೇಶಕ ಪುಳ್ಳಂಗಡ ನಟೇಶ್, ಪದಾಧಿಕಾರಿ ಗಳಾದ ಗಣೇಶ್ ತಿಮ್ಮಯ್ಯ, ಜೆ.ಕೆ. ಸೋಮಣ್ಣ, ಶಂಭು ಬಿದ್ದಪ್ಪ, ಅನೀಶ್ ಮಾದಪ್ಪ, ಎಂ.ಎಲ್.ಜೋಯಪ್ಪ, ಸುಭಾಷ್ ಸುಬ್ಬಯ್ಯ, ಸುರೇಶ್ ಚಂಗಪ್ಪ, ನಾಗೇಂದ್ರ ರೈ, ರಶ್ಮಿ ಅಯ್ಯಪ್ಪ, ಪಿ.ಬಿ. ಪೂಣಚ್ಚ ಮುಂತಾದವರು ಹಾಜರಿದ್ದರು. ಎನ್.ಜಿ. ಬೊಪಣ್ಣ ಪ್ರಾರ್ಥಿಸಿ, ಕಾರ್ಯದರ್ಶಿ ವಾಣಿ ಚಂಗಪ್ಪ ಸ್ವಾಗತಿಸಿ, ರಶ್ಮಿ ಅಯ್ಯಪ್ಪ ವಂದಿಸಿದರು.