ಶನಿವಾರಸಂತೆ, ಆ. 10: ಶನಿವಾರಸಂತೆ ಗ್ರಾ.ಪಂ. ಮತ್ತು ಶಾಲಾ-ಕಾಲೇಜು, ಅಂಗನವಾಡಿ, ಆಟೋ ಚಾಲಕರ ಸಂಘ, ಚೇಂಬರ್ ಆಫ್ ಕಾಮರ್ಸ್, ವಿವಿಧ ಸಂಘಗಳ ಸಂಯೋಗದೊಂದಿಗೆ ಸ್ವಾತಂತ್ರ್ಯೋತ್ಸವ ಪೂರ್ವಭಾವಿ ಸಿದ್ಧತೆ ಸಭೆಯನ್ನು ಗ್ರಾ.ಪಂ. ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಗೌಸ್ ಅಧ್ಯಕ್ಷತೆಯಲ್ಲಿ ಶನಿವಾರಸಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾರತೀಯ ವಿದ್ಯಾಸಂಸ್ಥೆ, ಕಾವೇರಿ ವಿದ್ಯಾಸಂಸ್ಥೆ, ಬಾಪೂಜಿ ವಿದ್ಯಾಸಂಸ್ಥೆ, ಸೆಕ್ರೆಡ್ ಹಾರ್ಟ್, ತ್ಯಾಗರಾಜಕಾಲೋನಿ ಸರಕಾರಿ ಶಾಲೆ, ಉರ್ದು ಪ್ರಾಥಮಿಕ ಶಾಲೆ, ವಿಘ್ನೇಶ್ವರ ಕಾಲೇಜು, ಒಟ್ಟು 1,895 ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗೌರವ ವಂದನೆ, ಪಥ ಸಂಚಲನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು.

ಆಟೋ ಚಾಲಕರಿಂದ ಆಟೋಟದೊಂದಿಗೆ ಮೆರವಣಿಗೆ ಕಾರ್ಯಕ್ರಮ, 10.30 ಗಂಟೆಗೆ ಅಧ್ಯಕ್ಷರಿಂದ ಧ್ವಜಾರೋಹಣ ನಡೆಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ತಾ.ಪಂ. ಸದಸ್ಯ ಬಿ.ಎಸ್. ಅನಂತಕುಮಾರ್, ಗ್ರಾ.ಪಂ. ಉಪಾಧ್ಯಕ್ಷೆ ಗೀತಾ, ಸದಸ್ಯರುಗಳಾದ ಸೌಭಾಗ್ಯಲಕ್ಷ್ಮಿ, ರಜನಿ, ಹೇಮ, ಉಷಾ, ಸರ್ದಾರ್ ಅಹ್ಮದ್, ಎಸ್.ಎನ್. ಪಾಂಡು, ಗ್ರಾಮ ಲೆಕ್ಕಿಗರಾದ ಹರಿಣಿ, ಕಂಪ್ಯೂಟರ್ ನಿರ್ವಾಹಕಿ ಫೌಜಿಯಾ ಉಪಸ್ಥಿತರಿದ್ದರು. ಪಂಚಾಯಿತಿ ಕಾರ್ಯದರ್ಶಿ ತಮ್ಮಯ್ಯಾಚಾರ್ ಸ್ವಾಗತಿಸಿ, ವಂದಿಸಿದರು.